Top

35 ವರ್ಷದ ಬಳಿಕ ಭೇಟಿಯಾದ ಅಪ್ಪ-ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಜಿಲ್ಲಾಸ್ಪತ್ರೆ

35 ವರ್ಷದ ಬಳಿಕ ಭೇಟಿಯಾದ ಅಪ್ಪ-ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಜಿಲ್ಲಾಸ್ಪತ್ರೆ
X

ಹಾವೇರಿ: ಹಾವೇರಿಯಲ್ಲಿ ಒಂದು ಅಪರೂಪದ, ಭಾವುಕ ಮತ್ತು ವಿಶೇಷವಾದ ಘಟನೆ ನಡೆದಿದೆ. ಸಾಮಾನ್ಯವಾಗಿ ಹಲವು ವರ್ಷಗಳ ಬಳಿಕ ಸಂಬಂಧಿಕರು, ಸ್ನೇಹಿತರನ್ನು ನಾವು ಭೇಟಿಯಾದಾಗ ಅದು ಒಂದು ಸುಂದರ ಕ್ಷಣವೆನಿಸಿಕೊಳ್ಳುತ್ತದೆ.ಆದರೆ ಬರೋಬ್ಬರಿ 35 ವರ್ಷಗಳ ಬಳಿಕ ದೂರವಾಗಿದ್ದ ಅಪ್ಪ ಮಗ ಭೇಟಿಯಾದರೆ ಅದೊಂದು ವಿಶೇಷ ಸಂದರ್ಭವೇ ಸರಿ.

ಹೌದು, 35ವರ್ಷಗಳ ಹಿಂದೆ ಬಾಲರೆಡ್ಡಿ ಎಂಬುವವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗರ್ಲದಿನಿಮಂಡಲ್‌ನಿಂದ ಕಾಣೆಯಾಗಿದ್ದರು. ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ನೆಲಗೊಲ್ಲ ಗ್ರಾಮದ ಬಸವರಾಜ್ ಎಂಬುವವರ ಹತ್ತಿರ ಕಳೆದ 10 ವರ್ಷದಿಂದ ಕ್ರಶರ್ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಬಾಲರೆಡ್ಡಿಗೆ ಅನಾರೋಗ್ಯ ಉಂಟಾದ ಹಿನ್ನೆಲೆ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವಿಚಾರಣೆ ನಡೆಸಿದಾಗ, ನಿಜ ಸಂಗತಿ ಬಯಲಿಗೆ ಬಂದಿದೆ.ತಕ್ಷಣ ಬಾಲರೆಡ್ಡಿ ಮಗನನ್ನು ಆಸ್ಪತ್ರೆಗೆ ಕರೆಯಿಸಿಕೊಳ್ಳಲಾಗಿದೆ. ಆಸ್ಪತ್ರೆಗೆ ಬಂದ ಬಾಲರೆಡ್ಡಿ ಮಗ ಸೂರ್ಯನಾರಾಯಣ ರೆಡ್ಡಿ ಅಪ್ಪನನ್ನು ನೋಡಿ ಸಂತಸಗೊಂಡಿದ್ದಾರೆ. ತಂದೆ ಬಾಲರೆಡ್ಡಿ ಇನ್ಮುಂದೆ ತಮ್ಮ ಮಗನ ಜೊತೆ ಇರಲು ನಿರ್ಧರಿಸಿದ್ದಾರೆ.

Next Story

RELATED STORIES