Top

ಹರಿಯುವ ನೀರಲ್ಲಿ ಪತ್ತೆಯಾದ್ವು ಅಪರೂಪದ ನಾಣ್ಯಗಳು.!!

ಹರಿಯುವ ನೀರಲ್ಲಿ ಪತ್ತೆಯಾದ್ವು ಅಪರೂಪದ ನಾಣ್ಯಗಳು.!!
X

ಕೊಡಗು : ಜಿಲ್ಲೆಯ ಮಡಿಕೇರಿ ನಗರದ ಕೊಹಿನೂರು ರಸ್ತೆಯ ಕಾಲುವೆ ನೀರಿನಲ್ಲಿ ಚಲಾವಣೆಯಲ್ಲಿರದ ನಾಣ್ಯಗಲೂ ಪತ್ತೆಯಾಗಿವೆ. ಅಲ್ಲದೇ ದೇವಾಲಯದ ಹುಂಡಿಗೆ ಹಾಕುವ ಬೆಳ್ಳಿಯ ನಾಗನ ಪ್ರತಿಮೆಗಳು, ದೀಪಗಳು, ಮಾನವ ರೂಪಸ ಬೆಳ್ಳಿಯ ಹಾಳೆಗಳು ಹಾಗು ಅಂದಾಜು ನಾಲ್ಕು ಕೆ.ಜಿ.ಗೂ ಹೆಚ್ಚಿನ ನಾಣ್ಯಗಳು ಪತ್ತೆಯಾಗಿವೆ.

ದೇವಾಲಯದ ಹುಂಡಿ ಕದ್ದಿರುವ ಕಳ್ಳರು ಹಣ ಮತ್ತು ಇತರ ವಸ್ತುಗಳನ್ನು ದೋಚಿ ಬೆಳ್ಳಿಯ ಆಭರಣಗಳನ್ನು ಕಾಲುವೆ ನೀರಿಗೆ ಎಸೆದಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಕಾಲುವೆಯಲ್ಲಿ ಕಂಡುಬಂದಿರುವ ನಾಣ್ಯ ಮತ್ತು ಬೆಳ್ಳಿಯ ಆಭರಣಗಳು ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಬಂಧಿಸಿರುವ ಕುರುಹುಗಳು ಪತ್ತೆಯಾಗಿವೆ.

https://www.youtube.com/watch?v=n56ovpwm_4I

ಕಳೆದ ಮೂರು ದಿನಗಳ ಹಿಂದೆ ಕಾಲುವೆಯಲ್ಲಿ ಪತ್ತೆಯಾಗಿರುವ ನಾಣ್ಯಗಳ ಪೈಕಿ ಇತ್ತೀಚಿನ ಸ್ಟೀಲ್ ನಾಣ್ಯಗಳು ಕಂಡುಬಂದಿದೆ. ಹತ್ತು, ಇಪ್ಪತ್ತು, ಐದು ಪೈಸೆಯ ಬಾರವಿಲ್ಲದ ನಾಣ್ಯಗಳು ಕೆಸರಿನ ಮೇಲೆ ಹರಡಿಕೊಂಡಿದ್ದು, ಒಂದು, ಎರಡು, ಐದು ಮತ್ತು ಹತ್ತು ರೂಪಾಯಿಗಳ ಭಾರವಿರುವ ನಾಣ್ಯಗಳು ಕೆಸರಿನಲ್ಲಿ ಸಿಲುಕಿಕೊಂಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಾಲುವೆಯ ಅಂದಾಜು ಹತ್ತು ಅಡಿ ಉದ್ದಕ್ಕೂ ನಾಣ್ಯಗಳು ಹರಡಿಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊಹಿನೂರು ರಸ್ತೆಯಲ್ಲಿರುವ ಕೋಳಿ ಅಂಗಡಿಯ ಸಿಬ್ಬಂದಿಯೊಬ್ಬರು ಕಸ ಸುರಿಯಲು ತೆರಳಿದ ಸಂದರ್ಭ ಈ ದೃಶ್ಯ ಕಂಡುಬಂದಿದೆ. ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ತೂಕವಿಲ್ಲದ ನಾಣ್ಯಗಳು ಮತ್ತು ಬೆಳ್ಳಿಯ ಆಭರಣಗಳು ಕೊಚ್ಚಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಲುವೆಯಲ್ಲಿ ಪತ್ತೆಯಾಗಿರುವ ಬೆಳ್ಳಿಯ ನಾಗನ ಪ್ರತಿಮೆ, ಮಾನವ ರೂಪದ ಬೆಳ್ಳಿಯ ಆಭರಣಗಳು ನಾಗದೋಷ ಪರಿಹಾರ ಮತ್ತು ಪಿತೃದೋಷ ಪರಿಹಾರಕ್ಕೆ ಬಳಸುವ ಆಭರಣಗಳಾಗಿದ್ದು, ದೇವಾಲಯಕ್ಕೆ ಸಂಬಂಧಿಸಿದವು ಎಂಬುದಕ್ಕೆ ಸಾಕ್ಷಿಯಾಗಿದೆ.

ಕಾಲುವೆಯ ಕೆಸರನ್ನು ಕದಡಿದಷ್ಟು ನಾಣ್ಯಗಳು ಹೊರಬರುತ್ತಿದ್ದು, ಭಾರಿ ಪ್ರಮಾಣದ ನಾಣ್ಯ ಕೆಸರಿನಲ್ಲಿ ಸಿಲುಕಿಕೊಂಡಿವೆ. ದೇವಾಲಯದ ಹುಂಡಿಕದ್ದು, ತಮಗೆ ಬೇಕಾದ ವಸ್ತುಗಳನ್ನು ಪಡೆದುಕೊಂಡು ಉಳಿದವುಗಳನ್ನು ಈ ಕಾಲುವೆ ನೀರಿಗೆ ಸುರಿದಿರಬಹುದೆಂದು ಶಂಕಿಸಲಾಗಿದೆ. ಇನ್ನು ಪೊಲೀಸರು ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿದರೇ ಸತ್ಯಾಂಶ ಹೊರಬರಲಿದೆ.

Next Story

RELATED STORIES