Top

ಕುಕ್ಕರ್ ವಿಷಲ್ ನುಂಗಿ ಮಗು ಸಾವು

ಕುಕ್ಕರ್ ವಿಷಲ್ ನುಂಗಿ ಮಗು ಸಾವು
X

ಮಂಡ್ಯ: ಪುಟ್ಟ ಮಗುವೊಂದು ಕುಕ್ಕರ್ ವಿಷಲ್ ನುಂಗಿ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮರಿಲಿಂಗೇಗೌಡ ಮತ್ತು ರೂಪ ದಂಪತಿಗಳ ಪುತ್ರ ಭುವನ್ ಸಾವನ್ನಪ್ಪಿದ ಒಂದು ವರ್ಷದ ಮಗುವಾಗಿದೆ.

ನಿನ್ನೆ ರಾತ್ರಿ ಮನೆಯಲ್ಲಿ ಆಟವಾಡುವ ವೇಳೆ ಭುವನ್ ಕುಕ್ಕರ್ ವಿಷಲ್ ನುಂಗಿದ್ದಾನೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕರಿಯಾಗದೇ ಮಗು ಸಾವನ್ನಪ್ಪಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Next Story

RELATED STORIES