ಇದು ಉದ್ಬಾಳ-ಬಡ್ಲಾಪುರ ಸರ್ಕಾರಿ ಶಾಲೆ ಸ್ಥಿತಿ : ಸಂಬಳ ಒಬ್ಬರಿಗೆ ಕೆಲಸ ಇನ್ನೊಬ್ಬರಿಗೆ.!!

ರಾಯಚೂರು : ಇಲ್ಲೊಂದು ಸರಕಾರಿ ಶಾಲೆ ಇದೆ, ಇಲ್ಲಿ ಕೆಲಸ ಮಾಡೋರೇ ಒಬ್ಬರು, ಸಂಬಳ ಎಣಿಸೋರೇ ಇನ್ನೊಬ್ಬರು. ಸರಕಾರದಿಂದ ನೇಮಕವಾದ ಶಿಕ್ಷಕಿಯೊಬ್ಬರು ಕಳೆದ ಎರಡು ವರ್ಷಗಳಿಂದ ಪಾಠವನ್ನೇ ಮಾಡಿಲ್ಲ ಆದ್ರೆ ಸಂಬಳ ಮಾತ್ರ ಎಣಿಸುತ್ತಿದ್ದಾರೆ. ಈ ಶಾಲೆಯಲ್ಲಿ ಸರಕಾರದಿಂದ ನೇಮಕವಾದ ಶಿಕ್ಷಕಿರ ಬದಲಾಗಿ ದುಡಿಯುವ ಶಿಕ್ಷಕಿಯರರು ಬೇರೆಯೇ ಇದ್ದಾರೆ. ಪಾಠ ಮಾಡದಿದ್ರು ಸಂಬಳ ತಗೊತಿರೋ ಶಿಕ್ಷಕಿ ಯಾರು ಅಂತಿರಾ ಈ ಸುದ್ದಿ ಓದಿ.
ಹೌದು ದೇಶದಲ್ಲೆ ಹಿಂದುಳಿದ ಜಿಲ್ಲೆ ರಾಯಚೂರು ಅಂತ ಹೇಳಲಾಗುತ್ತದೆ. ಅದರಲ್ಲೂ ಶೀಕ್ಷಣ ಕ್ಷೇತ್ರದಲ್ಲಿ ಅತೀ ಹಿಂದುಳಿದ ಜಿಲ್ಲೆ. ಹೀಗಾಗಿ ಸರಕಾರದಿಂದ ಈ ಭಾಗಕ್ಕೆ ಅತಿಹೇಚ್ಚು ಅನುದಾನ ನೀಡಿ ಶಿಕ್ಷಣ ಮಟ್ಟ ಹೆಚ್ಚಸಲು ಸರಕಾರ ಕಸರತ್ತು ಮಾಡುತ್ತಿದೆ. ಆದರೆ ಇಲ್ಲಿನ ಶಾಲೆಗಳ ಪರೀಸ್ಥಿತಿಯೇ ಬೇರೆ ಇದೆ. ಅದೇನು ಅಂತೀರಾ. ಇಲ್ಲಿ ಸರಕಾರದಿಂದ ಹುದ್ದೆ ಪಡೆದು ಸಂಬಳ ಎಣಿಸುತ್ತಿರುವವರೇ ಒಬ್ಬರು, ಪಾಠ ಮಾಡುತ್ತಿರುವವರೆ ಇನ್ನೋಬ್ಬರು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ಇದ್ದರೂ ಜಾಣಕುರುಡತನ ಪ್ರದರ್ಶನ ಮಾಡುತ್ತಿದೆ.
ಬಸ್ಸಮ್ಮ ಟೀಚರ್ ಸರಕಾರದಿಂದ ನೇಮಕವಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಲ್ಲ. ಇಬ್ಬರಿಬ್ಬರು ಬೇರೆ ಬೇರೆ ಕಾರಣಕ್ಕಾಗಿ ಸರಕಾರದಿಂದ ನೇಮಕವಾದ ಶಿಕ್ಷಕಿಯರ ಪರವಾಗಿ ಕೆಲಸ ಮಾಡುತ್ತಿರುವ ಶಿಕ್ಷಕಿಯರು. ಇದು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಉದ್ಬಾಳ ಬಡ್ಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯ ಸ್ಥಿತಿ.
ಈ ಶಾಲೆಯಲ್ಲಿ ಒಟ್ಟು 213 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿ ಶಿಕ್ಷಕರ ಕೊರತೆ ಇದೆ. ಈ ಮಧ್ಯೆ ಇಲ್ಲಿ ಸರಕಾರದಿಂದ ನೇಮಕವಾದ ನಿರ್ಮಲ ಎಂಬ ಶಿಕ್ಷಕಿ ಮಾನಸಿಕ ಅಸ್ವಸ್ಥೆ. ಆಕೆ ಪಾಠ ಮಾಡುವ ಸ್ಥಿತಿಯಲ್ಲಿಲ್ಲ. ಅದಕ್ಕಾಗಿ ಆಕೆ ತನ್ನ ಕಡಯಿಂದ ನಿರುದ್ಯೋಗ ಯುವತಿಯನ್ನು ನೋಡಿ ಪ್ರತಿ ತಿಂಗಳು ನಾಲ್ಕು ಸಾವಿರ ರೂಪಾಯಿ ತನ್ನ ಖಾತೆಯಿಂದ ವೇತನ ನೀಡಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಈ ಬಗ್ಗೆ ಮಾನವಿ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೆ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಮಲ ಮಾನಸಿಕ ಅಸ್ವಸ್ಥೆ ಎಂಬ ವರದಿ ನೀಡಿದ್ದಾರೆ.
ಇದು ಒಂದು ಕಡೆಯಾದರೆ, ಇಲ್ಲಿಯ ಮುಖ್ಯ ಶಿಕ್ಷಕಿ ಶರಣಮ್ಮ ಎಂಬುವವರು ಶಾಲೆಗೆ ಗೈರು ಹಾಜರಾಗಿದ್ದಾಗ, ತಮ್ಮ ಪರವಾಗಿ ಕಳೆದ ವರ್ಷ ಅತಿಥಿ ಶಿಕ್ಷಕಿಯಾಗಿ ನೇಮಕವಾಗಿದ್ದ ಶೀಕ್ಷಕಿಯನ್ನು ತಮ್ಮ ಪರವಾಗಿ ಶಾಲೆಗೆ ಕಳುಹಿಸುತ್ತಿದ್ದಾರೆ. ಒಟ್ಟಾರೆ ಇಲ್ಲಿ ಕೆಲಸಕ್ಕೆ ಬಾರದೇ ಪಾಠ ಮಾಡದಿದ್ದರು ಮನೆಯಲ್ಲೇ ಕುಳಿತು ಸಂಬಳ ಮಾತ್ರ ಎಣಿಸುತ್ತಿದ್ದಾರೆ. ಇಷ್ಟೇಲ್ಲಾ ನಡಿತೀದ್ರು ಈ ಶಾಲೆಯಲ್ಲಿ ಮಾತ್ರ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.
ಇಂತಹ ಪರೀಸ್ಥತಿಯಲ್ಲಿ ಮಕ್ಕಳು ಪಾಠ ಕಲಿಯುವುದಾದರೂ ಹೇಗೆ.? ಎಂಬ ಕಳವಳ ಪಾಲಕರದ್ದು. ಒಟ್ಟಾರೆ ಸರಕಾರಿ ಶಾಲೆಯಲ್ಲಿ ಏನೇ ಮಾಡಿದರು ಕೇಳುವವರಿಲ್ಲ ಅಂತ ಈ ಇಬ್ಬರೂ ಶಿಕ್ಷಕಿಯರ ವಿಷಯದಲ್ಲಿ ನಿಜವಾಗಿದೆ. ಇಂತಹ ಅಕ್ರಮ ತಡೆಯಬೇಕಾದ ಮುಖ್ಯಶಿಕ್ಷಕಿಯೇ ತಮ್ಮ ಪರವಾಗಿ ಈ ವರ್ಷ ಇನ್ನೂ ನೇಮಕವಾಗದ ಅತಿಥಿ ಶಿಕ್ಷಕರನ್ನು ಕಳುಹಿಸುತ್ತಿರುವದು ಎಷ್ಟರ ಮಟ್ಟಿಗೆ ಸರಿ.? ಈ ಬಗ್ಗೆ ಶಿಕ್ಷಣ ಇಲಾಖೆ ಏನು ಕ್ರಮ ಕೈಗೊಳ್ಳುತ್ತೋ ಕಾದು ನೋಡಬೇಕು.
ವರದಿ : ನೀಲಕಂಠ ಸ್ವಾಮಿ ದಿನ್ನಿ, ಟಿವಿ5 ರಾಯಚೂರು
- Badlapur Government Higher Primary School government employee work kannada news today Karnataka Education Karnataka Education Department Karnataka Education Minister karnataka news today latest karnataka news rayachur salary Salary is for one another to work topnews tv5 kannada tv5 kannada live tv5 live tv5kannada news