Top

ಕಾಗಿನೆಲೆ‌ ಪೀಠದ ಸ್ಥಾಪಕನೇ ನಾನು: ಕಾಗಿನೆಲೆ ಶ್ರೀಗಳ ವಿರುದ್ಧ ವಿಶ್ವನಾಥ್ ಆಕ್ರೋಶ

ಕಾಗಿನೆಲೆ‌ ಪೀಠದ ಸ್ಥಾಪಕನೇ ನಾನು: ಕಾಗಿನೆಲೆ ಶ್ರೀಗಳ ವಿರುದ್ಧ ವಿಶ್ವನಾಥ್ ಆಕ್ರೋಶ
X

ಮೈಸೂರು: ಕಾಗಿನೆಲೆ ಶ್ರೀಗಳು ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಮಾಜಿ ಸಂಸದ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಗಿನೆಲೆ‌ ಪೀಠದ ಸ್ಥಾಪಕನೇ ನಾನು. 6 ಮಠ ಸ್ಥಾಪನೆ ಮಾಡಿದ್ದೇ ನಾನು. ಅದರ ಸಂಸ್ಥಾಪಕ ಅಧ್ಯಕ್ಷನೇ‌ ನಾನಾಗಿದ್ದೆ. ನನಗೆ ಅನ್ಯಾಯವಾದಾಗ ಕನಕಪೀಠದ ಸ್ವಾಮಿಗಳು ಎಲ್ಲಿ ಹೋಗಿದ್ದರು? ಕುರುಬ ಸಂಘಟನೆಗಳು ಎಲ್ಲಿ ಹೋಗಿದ್ದವು? ಎಂದು ಪ್ರಶ್ನಿಸಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಡೆಗಣಿಸಿದ್ದಕ್ಕೆ, ಅವರ ಪರ ಬ್ಯಾಟಿಂಗ್ ಮಾಡಿದ ಕಾಗಿನೆಲೆ ಶ್ರೀಗಳು, ಸಿದ್ದರಾಮಯ್ಯರಿಗೆ ಏನಾದರೂ ಆದರೆ ಸುಮ್ಮನಿರುವುದಿಲ್ಲ ಎಂದು ಹೇಳಿದ್ದರು.ಈ ಹೇಳಿಕೆಗೆ ಗರಂ ಆದ ವಿಶ್ವನಾಥ್, ನಾನು ಯಾರು ? ನಾನು ಕುರುಬ ಸಮುದಾಯದವನೇ. ನನಗೆ ತೊಂದರೆ ಕೊಟ್ಟವರು ಯಾರು ? ವಿನಾಕಾರಣ ಕೊಡಬಾರದ ತೊಂದರೆ ಕೊಟ್ಟಾಗ ಇವರೆಲ್ಲಾ ಎಲ್ಲಿ ಹೋಗಿದ್ದರು. ಪಕ್ಷಕ್ಕೆ ಕರೆ ತಂದವರನ್ನು ಮೂಲೆಗುಂಪು ಮಾಡಿದರು. ಸಿದ್ದರಾಮಯ್ಯ ನಾಲ್ಕು ವರ್ಷ ಕುರುಬ ಸಮುದಾಯದವರನ್ನು ಮಂತ್ರಿ ಮಾಡಲಿಲ್ಲ. ಆ ಸಮಯದಲ್ಲಿ ಶ್ರೀಗಳು ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇಡೀ ಕುರುಬ ಸಂಘಟನೆ ಹಾಗೂ ಸ್ವಾಮೀಜಿ ಸಿದ್ದರಾಮಯ್ಯ ಒಬ್ಬರಿಗೆ ಮಾತ್ರವಾ ? ನಿಮ್ಮನ್ನು ಸ್ವಾಮಿ ಮಾಡಿದವರು ಯಾರು ? 6 ಕಡೆ ಮಠ ಕಟ್ಟಿದವರು ಯಾರು ಎಂದು ಕಾಗಿನೆಲೆ ಶ್ರೀಗಳಿಗೆ ವಿಶ್ವನಾಥ್ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಸಿದ್ದರಾಮಯ್ಯ ಯಾವಾಗಲೂ ಮಠದ ವಿರೋಧಿ. ನಮ್ಮ ಮಠಕ್ಕೂ ವಿರೋಧ ವ್ಯಕ್ತಪಡಿಸಿದ್ದರು. ಇದು ಎಲ್ಲರಿಗೂ ಗೊತ್ತಿರುವ ಸತ್ಯ ಎಂದು ಹೇಳಿದ್ದಾರೆ.

ಇನ್ನು ಇದೇ ವೇಳೆ ಮಾತೆ ಮಹಾದೇವಿ, ನಂಜಾವಧೂತ ಮತ್ತು ಕಾಗಿನೆಲೆ ಶ್ರೀಗಳ ರಾಜಕೀಯ ಮಾತುಗಳ ಬಗ್ಗೆ ಮಾತನಾಡಿದ ವಿಶ್ವನಾಥ್, ರಾಜಕಾರಣಿಗಳ ಪರ ಮಾತನಾಡುವುದು ವಾದ ಮಂಡನೆ ಹಾಗೂ ಸಮರ್ಥನೆ ಲಾಬಿ ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಸ್ವಾಮೀಜಿಗಳು ಸಮಾಜದ ಅನಿಷ್ಠದ ಬಗ್ಗೆ ಮಾತನಾಡಲಿ. ರೈತರ ಬಗೆ ಮಾತನಾಡಲಿ. ಬಡವರ ಬಗ್ಗೆ ಮಾತನಾಡಲಿ. ರಾಜಕಾರಣಿಗಳು ಆಡಳಿತಶಾಹಿಗಳ ಬಗ್ಗೆ ಸ್ವಾಮೀಜಿಗಳು ಮಾತನಾಡುವದು ಸರಿಯಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

Next Story

RELATED STORIES