Top

ಸರ್ಕಾದರ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಜಯ ಭಾಸ್ಕರ್‌ ನೇಮಕ

ಸರ್ಕಾದರ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಜಯ ಭಾಸ್ಕರ್‌ ನೇಮಕ
X

ಬೆಂಗಳೂರು: ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರತ್ನಪ್ರಭಾ ಅವರ ಅವಧಿ ಇಂದು ನಿವೃತ್ತಿ ಹೊಂದುತ್ತಿದ್ದ ಹಿನ್ನಲೆಯಲ್ಲಿ ಕೊನೆಯಾಗುತ್ತಿತ್ತು. ಮುಂದೆಯೂ ರತ್ನಪ್ರಭಾ ಅವರ ಮುಖ್ಯ ಕಾರ್ಯದರ್ಶಿ ಅವಧಿಯನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಇದೀಗ ತೆರೆ ಬಿದ್ದಿದ್ದು, ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಜಯ ಭಾಸ್ಕರ್‌ ನೇಮಕಮಾಡಿ, ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಜಯ ಭಾಸ್ಕರ್‌ ಅವರನ್ನು ನೇಮಕ ಮಾಡಲಾಗಿದೆ. ಇಂದು ರತ್ನಪ್ರಭಾ ಅವರು ನಿವೃತ್ತಿ ಹಿನ್ನಲೆಯಲ್ಲಿ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಜಯ ಭಾಸ್ಕರ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಸರ್ಕಾರ ಅಧಿಕೃತವಾಗಿ ಆದೇಶದ ಮೂಲಕ ತಿಳಿಸಿದೆ.

ಅಂದಹಾಗೇ ನೂತನ ಮುಖ್ಯಕಾರ್ಯದರ್ಶಿಯಾಗಿ ನೇಮಕಗೊಂಡಿರು ವಿಜಯ ಭಾಸ್ಕರ್‌, ಮೂಲತಹ ಬೆಂಗಳೂರಿನ ನಿವಾಸಿಯಾಗಿರುವು ಹಿರಿಯ ಐಎಎಸ್‌ ಅಧಿಕಾರಿ. 1983ರ ಬ್ಯಾಚ್‌ನ ಐಎಎಸ್‌ ಅಧಿಕಾರಿ. 1983ರ ಸೆಪ್ಟಂಬರ್‌ 10ರಂದು ಸರ್ಕಾರಿ ಸೇವೆಗೆ ಸೇರಿದ ವಿಜಯ ಭಾಸ್ಕರ್, ಎಂ.ಎ ಮತ್ತು ಎಂಬಿಎ ಪದವಿಧರರು. ತೆಲುಗು, ಕನ್ನಡ, ತಮಿಳು, ಹಿಂದಿ, ಕನ್ನಡ ಮತ್ತು ಫ್ರೆಂಚ್‌ ಭಾಷೆ ಬಲ್ಲ ಇವರು, ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದಾರೆ.

ಈ ನಡುವೆ 37 ವರ್ಷದ ಸೇವೆಯ ಬಗ್ಗೆ ಟ್ವಿಟರ್ ಮೂಲಕ ತಮ್ಮ ಭಾವನೆಯನ್ನು ಹಂಚಿಕೊಂಡಿರುವ ರತ್ನಪ್ರಭಾ, 37 ವರ್ಷ ರಾಜ್ಯದಲ್ಲಿ ಸೇವೆ ಮಾಡಿದ್ದೇನೆ. ಬೆಳಗಾವಿಯಿಂದ ಆರಂಭವಾದ ನನ್ನ ವೃತ್ತಿ ಪಯಣ, ಬೀದರ್ ಮೂಲಕ ಸಾಗಿ, ಚಿಕ್ಕಮಗಳೂರು, ರಾಯಚೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ನನ್ನ ಸೇವೆ ಸ್ಮರಣೀಯವೆನಿಸಿದೆ. ಈಗಲೂ ಅದನ್ನು ನೆನಪು ಮಾಡಿಕೊಳ್ಳುತ್ತೇನೆ ಎಂದು ಹಂಚಿಕೊಂಡಿದ್ದಾರೆ.

ಇಂದು ಮುಖ್ಯಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ನಿವೃತ್ತಿಯಾದ ಹಿನ್ನಲೆಯಲ್ಲಿ, ಇಂದಿನ ಕಾವೇರಿ ನೀರು ನಿರ್ವಹಣಾ ಮಂಡಳಿಯ ಸರ್ವಪಕ್ಷ ಸಭೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಒಟ್ಟಾರೆಯಾಗಿ ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ಟಿ.ಎಂ.ವಿಜಯ ಭಾಸ್ಕರ್‌ ನೇಮಕ ಮಾಡಿ, ಸರ್ಕಾರ ಆದೇಶ ಹೊರಡಿಸಿದ್ದು, ಎದ್ದಿದ್ದ ಹಲವು ಗೊಂದಲಕ್ಕೆ ತೆರೆ ಎಳೆದಿದೆ..

Next Story

RELATED STORIES