Top

ಮಟ್ಕಾ ನಿಲ್ಲಿಸಿ ಪಾವಗಡ ಉಳಿಸಿ ಅಭಿಯಾನ

ಮಟ್ಕಾ ನಿಲ್ಲಿಸಿ ಪಾವಗಡ ಉಳಿಸಿ ಅಭಿಯಾನ
X

ತುಮಕೂರು: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಮಟ್ಕಾ ದಂಧೆ ಮಿತಿ ಮಿರಿದೆ. ಮಟ್ಕಾ ದಂಧೆಯಿಂದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಜನರೇ ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಜಾಲತಾಣದಲ್ಲಿ ಮಟ್ಕಾ ನಿಲ್ಲಿಸಿ ಪಾವಗಡ ಉಳಿಸಿ ಎಂಬ ಅಭಿಯಾನ ವಾರದಿಂದ ಶುರು ಮಾಡಿದ್ದಾರೆ. ತಾಲೂಕಿನಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಮಟ್ಕಾ ಜೂಜಾಟ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಜನಪ್ರತಿನಿಧಿಗಳು ಪೊಲೀಸರು ಮಟ್ಕಾ ದಂಧೆಯನ್ನು ನಿಲ್ಲಿಸಬೇಕೆಂಬ ಒತ್ತಾಯಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿವೆ.

ಪಾವಗಡ ಪಟ್ಟಣ, ನಿಡುಗಲ್, ವೈ.ಎನ್ ಹೊಸಕೋಟೆ, ನಾಗಮಡಿಕೆ, ಸೇರಿದಂತೆ ತಾಲೂಕಿನ ಎಲ್ಲಡೆ ಮಟ್ಕಾ ದಂಧೆ ವ್ಯಾಪಕವಾಗಿ ಹಬ್ಬಿದ್ದು, ನೂರಾರು ಬುಕ್ಕಿಗಳು ನಿರಂತರವಾಗಿ ಮಟ್ಕಾ ಆಡಿಸುತ್ತಿದ್ದಾರೆ. ಇದ್ರಿಂದ ಯುವಜನತೆ ದಾರಿ ತಪ್ಪುತ್ತಿದ್ದಾರೆ, ಕೂಡಲೇ ಪೊಲೀಸರು ಮಟ್ಕಾ ದಂಧೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ಹಾಗೂ ವಾಟ್ಸ್‌ಅಪ್ ನಲ್ಲಿ ವ್ಯಕ್ತಪಡಿಸಿ ಅದನ್ನು ಪೊಲೀಸ್ ಜಾಲತಾಣಕ್ಕೆ ಟ್ಯಾಗ್ ಮಾಡುತ್ತಿದ್ದಾರೆ.

Next Story

RELATED STORIES