Top

111 ಶಾಸಕರಿಂದ ಮಾತ್ರ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆ

111 ಶಾಸಕರಿಂದ ಮಾತ್ರ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆ
X

ಶಾಸಕ ಹಾಗೂ ವಿಧಾನಪರಿತ್ ಸದಸ್ಯರಾಗಿ ನೇಮಕಗೊಂಡ ನಂತರ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುವ ಗಡುವು ಶನಿವಾರಕ್ಕೆ ಮುಕ್ತಾಯಗೊಂಡಿದೆ. ಗಡುವಿನೊಳಗೆ 224 ಶಾಸಕರ ಪೈಕಿ ಕೇವಲ 111 ಅಂದರೆ ಶೇಕಡಾ 50ರಷ್ಟು ಶಾಸಕರು ಮಾತ್ರ ಆಸ್ತಿ ವಿವರ ಸಲ್ಲಿಸಿದ್ದಾರೆ.

ಲೋಕಾಯುಕ್ತ ಅಧಿನಿಯಮ 1984ರ ಕಲಂ 7ರ ಉಪಕಲಂ (1) ಅಡಿ ಸಲ್ಲಿಸಬೇಕು. ಆದರೆ ಗಡುವು ನೀಡಿದ್ದರೂ ಬಹುತೇಕ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಅವರಿಗೆಲ್ಲ ಜುಲೈ ರಂದು ಶೋಕಾಸ್ ನೋಟೀಸ್ ಜಾರಿ ಮಾಡಲು ಲೋಕಾಯುಕ್ತರು ನಿರ್ಧರಿಸಿದ್ದಾರೆ.

224 ಶಾಸಕರ ಪೈಕಿ 111 ಶಾಸಕರು ಹಾಗೂ 75 ವಿಧಾನಪರಿಷತ್​ ಸದಸ್ಯರ ಪೈಕಿ 29 ಮಂದಿ ಮಾತ್ರ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ. ಅವಧಿ ಮುಗಿದರೂ ಆಸ್ತಿ ವಿವರ ಸಲ್ಲಿಸದೇ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ಟೀಕೆಗೆ ಕಾರಣವಾಗಿದೆ.

Next Story

RELATED STORIES