Top

"ಬೆಂಗಳೂರು ಒನ್‌"ನಿಂದ ಹಣದ ಅಕ್ರಮ ನಗಧೀಕರಣ : ಎನ್‌ ಆರ್ ರಮೇಶ್ ಆರೋಪ

ಬೆಂಗಳೂರು ಒನ್‌ನಿಂದ ಹಣದ ಅಕ್ರಮ ನಗಧೀಕರಣ : ಎನ್‌ ಆರ್ ರಮೇಶ್ ಆರೋಪ
X

ಬೆಂಗಳೂರು : ಕಳೆದ ವರ್ಷ 500, 1000 ಸಾವಿರ ನೋಟು ಅಮಾನ್ಯೀಕರಣದ ನಂತ್ರ, ಬ್ಲಾಕ್‌ ನೋಟ್‌ ವೈಟ್‌ ನೋಟ್‌ ಮಾಡಿದ್ದು ಹೇಗೆ ಎಂಬ ಸ್ಪೋಟಕ ಮಾಹಿತಿಯನ್ನು ಬಿಜೆಪಿಯ ಎನ್‌ ಆರ್ ರಮೇಶ್‌ ದಾಖಲೆ ಸಮೇತ ಹೊರ ಹಾಕಿದ್ದಾರೆ.

ಈ ಕುರಿತು, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ದಾಖಲೆ ಬಿಡುಗಡೆ ಮಾಡಿದ ಎನ್‌ ಆರ್ ರಮೇಶ್, ನೋಟು ಅಮಾನ್ಯೀಕರಣದ ನಂತ್ರ, ರಂಗೋಲಿ ಕೆಳಗೆ ನುಸುಳಿ, ಅಕ್ರಮವಾಗಿ ಕೋಟಿ ಕೋಟಿ ನೋಟು ಬದಲಾವಣೆ ಹೇಗೆ ಮಾಡಿಕೊಂಡ್ರು ಎಂದು ಮಾಹಿತಿ ನೀಡಿದರು. ಈ ದಂಧೆಯಲ್ಲಿ ಗ್ರಾಹಕರಿಂದ ಸಂಗ್ರಹವಾದ ಸಣ್ಣ ಮೊತ್ತದ ಹಣವನನ್ನು ಬೆಂಗಳೂರು ಒನ್‌ ಮೂಲಕ ಬದಲಾವಾಣೆ ಮಾಡಲಾಗಿದೆ.

ಬರೋಬ್ಬರಿ 410 ಕೋಟಿಗೂ ಹೆಚ್ಚು ಅಮಾನ್ಯಗೊಂಡ ಹಣವನ್ನು ಅಕ್ರಮವಾಗಿ ಬೆಂಗಳೂರು ಒನ್‌ ಮೂಲಕ ಬದಲಾವಣೆ ಮಾಡಲಾಗಿದೆ. ಪ್ರತಿನಿತ್ಯ ಬೆಂಗಳಊರು ಒನ್‌ನಲ್ಲಿ ಸಂಗ್ರಹವಾಗೋ ಮೊತ್ತವನ್ನು ಬ್ಯಾಂಕ್‌ಗೆ ಪಾವತಿಸದೇ ವಂಚನೆ ಮಾಡಲಾಗಿದೆ. ನವೆಂಬರ್ 10, 2016ರಿಂದ 31 ಮಾರ್ಟ್‌ 2017ರ ವರೆಗೆ 544 ಕೋಟಿ ಸಂಗ್ರಹ ಆಗಿದೆ.

544 ಕೋಟಿ ಹಣದಲ್ಲಿ 410 ಕೋಟಿ ಅಕ್ರಮವಾಗಿ ನೋಟು ಬದಲಾವಣೆ ಮಾಡಲಾಗಿದೆ. ಅಂದಿನ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್‌ ಮತ್ತು ಭೈರತಿ ಬಸವರಾಜ್‌ ಷಾಮೀಲಿಗೆ ಸಾಥ್‌ ಕೊಟ್ಟು, ಬೆಂಗಳೂರು ಒನ್‌ ಮೂಲಕ ಅಕ್ರಮವಾಗಿ ಹಣ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇನ್ನೂ ಈ ಅಕ್ರಮದಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಈ ಮೂಲಕ ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದಾರೆ. 141 ದಿನಗಳ ಕಾಲ ಬ್ಯಾಂಕ್‌ಗೆ ಸಂಗ್ರಹಗೊಂಡ ಹಣ ಪಾವತಿ ಮಾಡುವಲ್ಲಿ ಅಕ್ರಮವನ್ನು ಬೆಂಗಳೂರು ಒನ್‌ ಮೂಲಕ ಬದಲಾವಣೆ ಮಾಡಲಾಗಿದೆ. ಇದರ ಮಾಲೀಕತ್ವದ ಸಿಎಂಎಸ್‌ ಕಂಪ್ಯೂಟರ್ಸ್‌ ಅಕ್ರಮದಲ್ಲಿ ಶಾಮೀಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು.

Next Story

RELATED STORIES