Top

ಲವ್ ಜಿಹಾದ್ ಹಿಂದೆ ಜಿಲ್ಲಾಧಿಕಾರಿ ಪತ್ನಿ? ತನಿಖಾಧಿಕಾರಿಗಳಿಗೇ ಶಾಕ್​

ಲವ್ ಜಿಹಾದ್ ಹಿಂದೆ ಜಿಲ್ಲಾಧಿಕಾರಿ ಪತ್ನಿ? ತನಿಖಾಧಿಕಾರಿಗಳಿಗೇ ಶಾಕ್​
X

ಲವ್ ಜಿಹಾದ್​ಗೆ ಬಲಿಯಾಗಿ ಅರಬ್ ದೇಶಗಳಲ್ಲಿ ಶೇಖ್​ಗಳಿಂದ ನಿರಂತರ ಅತ್ಯಚಾರಕ್ಕೆ ಒಳಗಾಗಿದ್ದ ಯುವತಿಯ ಹೇಳಿಕೆ ಆಧರಿಸಿ ತನಿಖೆಯ ಜಾಡು ಹಿಡಿದು ಹೋದ ತನಿಖಾಧಿಕಾರಿಗಳನ್ನು ಜಿಲ್ಲಾಧಿಕಾರಿ ಮನೆಯವರೆಗೂ ತಂದು ನಿಲ್ಲಿಸಿತ್ತು. ಒಳಗೆ ಹೋಗಿ ಪರಿಶೀಲನೆ ಮಾಡಿದಾಗ ಸಿಕ್ಕ ದಾಖಲೆಗಳನ್ನು ನೋಡಿ ಬೆಚ್ಚಿಬಿದಿದ್ದಾರೆ.

ಕೇರಳದ ಕೊಚ್ಚಿಯಿಂದ ಬೆಂಗಳೂರಿಗೆ ಓದಲು ಬಂದಿದ್ದ ಯುವತಿಯನ್ನು ಬೆಂಗಳೂರಿನ ಉದ್ಯಮಿ ಜನೀರ್ ಖಾನ್, ಪ್ರೀತಿಸುವ ನಾಟಕವಾಡಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದ. ವಿವಾಹದ ನೆಪದಲ್ಲಿ ಅತ್ಯಾಚಾರ ಮಾಡಿ ನಂತರ ಜಿಲ್ಲಾಧಿಕಾರಿ ಇರ್ಷಾದ್ ಖಾನ್ ಅವರ ಮನೆಯಲ್ಲಿ ಇರಿಸಿದ್ದ.

15 ದಿನಗಳ ಕಾಲ ಜಿಲ್ಲಾಧಿಕಾರಿ ಮನೆಯಲ್ಲಿ ತಂಗಿದ್ದ ಯುವತಿಯನ್ನು ವೀಸಾ, ಪಾಸ್​ಪೋರ್ಟ್ ಮಾಡಿಸಿ ಸೌದಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಯುವತಿಯನ್ನು ಶೇಖ್​ಗಳ ಬಳಿ ಬಿಟ್ಟಿದ್ದು, ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ.

ಹೇಗೋ ಮಾಡಿ ಯುವತಿ, ತನ್ನ ಕುಟುಂಬದವರನ್ನು ಸಂಪರ್ಕಿಸಿ ಕಷ್ಟ ಹೇಳಿಕೊಂಡಿದ್ದಾಳೆ. ಕುಟುಂಬದವರ ದೂರು ಪಡೆದ ಎನ್​ಐಎ ಪೊಲೀಸರು, ಸೌದಿಯಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದ ಇರ್ಷಾದ್​ನನ್ನು ಬಂಧಿಸಿ ಆತನಿಂದ ಮಾಹಿತಿ ಪಡೆದು ಯುವತಿಯನ್ನು ರಕ್ಷಿಸಿದ್ದಾರೆ.

ಯುವತಿ ನೀಡಿದ ಮಾಹಿತಿ ಆಧರಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಘಾತಕಾರಿ ವಿಷಯ ತಿಳಿದಬಂದಿದೆ. ಜಿಲ್ಲಾಧಿಕಾರಿ ಇರ್ಷಾದ್ ಖಾನ್ ಪತ್ನಿ ಲವ್ ಜಿಹಾದ್ ಹಿಂದೆ ಇರುವ ಸ್ಫೋಟಕ ಮಾಹಿತಿ ಲಭಿಸಿದೆ.

ಹಿಂದೂ ಯುವತಿಯರ ಹೆಸರಲ್ಲಿ ಫೇಸ್ ಬುಕ್, ಇನ್ ಸ್ಟ್ರಾಗ್ರಾಂ ಖಾತೆ ತೆರೆದಿದ್ದ ಮಹಿಳೆ, ಹಿಂದೂ ಯುವತಿಯರನ್ನು ಸೆಳೆದು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದರು. ಡಿಸಿ ಇರ್ಷಾದ್ ಖಾನ್ ಪತ್ನಿಯಿಂದ 8 ಲ್ಯಾಪ್​ ಟಾಪ್ 12 ಮೊಬೈಲ್​ಗಳನ್ನು ಎನ್​ಐಎ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ ಇರ್ಷಾದ್ ಉಲ್ಲಾ ಖಾನ್ ಕಲುಬುರುಗಿಯ ಕಮರ್ಷಿಯಲ್ ಟ್ಯಾಕ್ಸ್ ನ ಡಿಸಿಯಾಗಿದ್ದಾರೆ.

Next Story

RELATED STORIES