Top

ಮಹಾಭಾರತ ಕಾಲದ್ದಂತೆ ಮೈಸೂರಿನ ಸ್ವರ್ಣ ಸಿಂಹಾಸನ..?

ಮೈಸೂರು ದಸರಾ ಎಷ್ಟೂ ಖ್ಯಾತಿಯೋ ಅಷ್ಟೇ ಖ್ಯಾತಿ ಮೈಸೂರು ರಾಜವಂಶಸ್ಥರ ಸಿಂಹಾಸನ. ಈ ಸ್ವರ್ಣ ಸಿಂಹಾಸನ ಇತಿಹಾಸ ಬಲ್ಲವರು ತುಂಬಾ ಕಡಿಮೆ. ಆದರೆ ಈ ಸಿಂಹಾಸನ ಮಹಾಭಾರತದ ನಂಟು ಹೊಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು. ಇದರ ಮೇಲಿನ ಆಸಕ್ತಿ ಹಾಗೂ ಕುತೂಹಲ ಹೆಚ್ಚುವಂತೆ ಮಾಡಿದೆ.

ದಸರಾ ದರ್ಬಾರ್ ನಡೆಯುವ ಸಂದರ್ಭದಲ್ಲಷ್ಟೇ ಅಂಬಾವಿಲಾಸ ಅರಮನೆಯಲ್ಲಿರುವ ಸ್ವರ್ಣ ಸಿಂಹಾಸನವನ್ನು ಹೊರತೆಗೆಯಲಾಗುತ್ತದೆ. ಆಯುಧ ಪೂಜೆಯ ದಿನದಂದು ಸಿಂಹಾಸನಕ್ಕೆ ವಿಶೇಷ ಪೂಜೆ ಸಲ್ಲಿಸಿ, ದರ್ಬಾರ್ ನಡೆಸಲಾಗುತ್ತದೆ. ಅಂಬಾವಿಲಾಸ ಅರಮನೆಯಲ್ಲಿರುವ ಸ್ವರ್ಣ ಸಿಂಹಾಸನ ಮಹಾಭಾರತ ಕಾಲದ್ದು ಎಂಬ ಮಾಹಿತಿ ಈಗ ಹೊರಬಿದ್ದಿದೆ.

ಆದರೆ ಹಲವರು ಹಲವು ರೀತಿ ಹೇಳುವುದರಿಂದ ಸಿಂಹಾಸನ ಮಹಾಭಾರತ ಕಾಲದ್ದೂ ಎಂಬುದು ಸ್ಪಷ್ಟವಾಗಿಲ್ಲ. ಕೆಲವರ ಪ್ರಕಾರ ಈ ಸಿಂಹಾಸನ ದುರ್ಯೋಧನನ ಆಸ್ಥಾನ ಹಸ್ತಿನಾಪುರದಿಂದ ಆಂಧ್ರಪ್ರದೇಶದ ಪೆನುಗೊಂಡಾ ಎಂಬಲ್ಲಿ ಪತ್ತೆಯಾಗಿದ್ದಂತೆ.

ಇನ್ನು 14ನೇ ಶತಮಾನದ ತಜ್ಞರಾದ ವಿದ್ಯಾರಣ್ಯರ ಪ್ರಕಾರ, ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ ಬುಕ್ಕರ ಕಾಲದಲ್ಲಿ ಈ ಸಿಂಹಾಸನ ಪತ್ತೆಯಾಗಿತ್ತು . ವಿಜಯನಗರದ ಮಂತ್ರಿಯಾಗಿದ್ದ ಶ್ರೀರಂಗಯ್ಯ ಈ ಸಿಂಹಾಸನವನ್ನು ರಾಜ ವಡೆಯರ್‌ಗೆ ಒಪ್ಪಿಸಿದರೆಂಬ ಮಾತಿದೆ.ಅಂದಿನಿಂದ ಸಿಂಹಾಸನ ಮೈಸೂರು ಸಾಮ್ರಾಜ್ಯದ ಪಾಲಾಯಿತಂತೆ.

ಇನ್ನು ತಜ್ಞರಾಗಿದ್ದ ದಿ. ಎಂ.ಎಸ್.ನಾಗರಾಜ್ ರಾವ್ ಪ್ರಕಾರ ಮೈಸೂರು ಮಹಾರಾಜ ಚಿಕ್ಕದೇವರಾಯ ಒಡೆಯರ್‌ಗೆ ಈ ಸ್ವರ್ಣ ಸಿಂಹಾಸನವನ್ನು ಮೊಘಲ್ ರಾಜ ಔರಂಗಜೇಬ್ ನೀಡಿದ್ದನಂತೆ.ಆದರೆ ಇದಕ್ಕೂ ಸಹ ಯಾವುದೇ ಪುರಾವೆ ಇಲ್ಲವೆನ್ನಲಾಗಿದೆ.

Next Story

RELATED STORIES