Top

X

ದಿ ವಿಲನ್ ಟೀಸರ್​ಗಳು ರಿಲೀಸ್ ಆದ್ಮೇಲೆ ಸ್ಯಾಂಡಲ್​ವುಡ್ ಅಂಗಳದಲ್ಲಿ ಒಂಥರಾ ಬಿರುಗಾಳಿ ಎದ್ದಿದೆ. ಅಭಿನಯ ಚಕ್ರವರ್ತಿ ಮತ್ತು ಕರುನಾಡ ಚಕ್ರವರ್ತಿ ಫ್ಯಾನ್ಸ್ ಮಧ್ಯೆ ಒಂದು ಬಗೆಯ ವಾರ್ ನಡೆದ್ರೆ, ರಾಕಿಂಗ್ ಸ್ಟಾರ್ ಯಶ್​ ಫ್ಯಾನ್ಸ್​ಗೂ ಕನೆಕ್ಟ್ ಆಗ್ತಿದೆ. ಆದ್ರೆ ಎಲ್ಲವನ್ನ ಅಳೆದು ತೂಕ ಮಾಡಿದ್ರೆ ಸುದೀಪ್​ರನ್ನ ಮೀರಿಸುವಂತಹ ದಾಖಲೆ ಮಾಡಿದ್ದಾರೆ ಯಶ್.

ಕಿಚ್ಚ ಸುದೀಪ್ ಮತ್ತು ರಾಜಾಹುಲಿ ಯಶ್​ಗೆ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಗಾಡ್ ಫಾದರ್​ಗಳಿಲ್ಲದೆಯೇ ಬಣ್ಣದಲೋಕಕ್ಕೆ ಕಾಲಿಟ್ಟ ಈ ಟ್ಯಾಲೆಂಟ್ಸ್, ಕಡಿಮೆ ಕಾಲಾವಧಿಯಲ್ಲಿ ಬಹುದೊಡ್ಡ ಸ್ಟಾರ್​ಗಳಾಗಿ ರಾರಾಜಿಸಿದ್ರು. ಇನ್ನು ಇವ್ರ ಸಿನಿಮಾಗಳು ರಿಲೀಸ್ ಆಗ್ತಿವೆ ಅಂದ್ರೆ ಫ್ಯಾನ್ಸ್​ಗೆ ಹಬ್ಬದ ಸಂಭ್ರಮ.

ಸದ್ಯ ಈ ಇಬ್ಬರೂ ಸ್ಟಾರ್​ಗಳ ಬಹುನಿರೀಕ್ಷಿತ ಸಿನಿಮಾಗಳ ಟೀಸರ್​ಗಳು ರಿಲೀಸ್ ಆಗಿವೆ. ಒಂದು ಯಶ್​ರ ಕೆಜಿಎಫ್ ಮತ್ತೊಂದು ಸುದೀಪ್​ರ ದಿ ವಿಲನ್. ಟೀಸರ್​ಗಳಿಗೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದ್ರೂ, ವೀವ್ಸ್ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಆಫ್ ದ ಟೌನ್ ಆಗಿ ಪರಿಣಮಿಸಿವೆ.

ಪ್ರೇಮ್​ ನಿರ್ದೇಶನದ ದಿ ವಿಲನ್ ಟೀಸರ್​ಗಳೆರಡೂ ಸಹ ಸಖತ್ ಸೌಂಡ್ ಮಾಡ್ತಿವೆ. ಅಭಿನಯ ಚಕ್ರವರ್ತಿ ಮತ್ತು ಕರುನಾಡ ಚಕ್ರವರ್ತಿ ಟೀಸರ್​ಗಳಲ್ಲಿ ಸುದೀಪ್​ಗಿಂತ ಶಿವಣ್ಣ ಟೀಸರ್ ವೀವ್ಸ್ ಕಡಿಮೆ ಇದೆ. ಆದ್ರೆ ಯೂಟ್ಯೂಬ್ ಟ್ರೆಂಡಿಂಗ್​ನಲ್ಲಿ ಶಿವಣ್ಣನ ಟೀಸರ್ ರಾರಾಜಿಸ್ತಿದೆ.

ಹೀಗಿರುವಾಗ ಈ ಇಬ್ಬರೂ ಚಕ್ರವರ್ತಿಗಳ ನಡುವೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಎಮಟ್ರಿ ಕೊಟ್ಟಿದೆ. ಅದೇನಪ್ಪಾಂದ್ರೆ, ಸುದೀಪ್​ರ ದಿ ವಿಲನ್ ಟೀಸರ್​ಗಿಂತ ಯಶ್​ರ ಕೆಜಿಎಫ್ ಮೇಕಿಂಗ್ ಟೀಸರ್ ವೀವ್ಸ್ ಸಂಖ್ಯೆ ಜಾಸ್ತಿ ಇದೆ. ಇದು ಸಾಮಾಜಿಕ ಜಾಲತಾಣದಲ್ಲಿ ಬಹುದೊಡ್ಡ ಮಟ್ಟಕ್ಕೆ ಚರ್ಚೆ ಆಗ್ತಿದೆ.

ಸಿನಿಮಾ ಮೊದಲ ದಿನ ವೀವ್ಸ್ ನೋಡೋದಾದ್ರೆ,

ಕೆಜಿಎಫ್ 1.7 ಮಿಲಿಯನ್

ದಿ ವಿಲನ್ 1.5 ಮಿಲಿಯನ್

ಸಿನಿಮಾ ಎರಡನೇ ದಿನದ ವೀವ್ಸ್ ನೋಡೋದಾದ್ರೆ,

ಕೆಜಿಎಫ್ 2.5 ಮಿಲಿಯನ್

ದಿ ವಿಲನ್ 1.9 ಮಿಲಿಯನ್

ಇದು ಅಕ್ಷರಶಃ ನಿಜ. ಕಿಚ್ಚ ಸುದೀಪ್​ರ ದಿ ವಿಲನ್ ಟೀಸರ್ ವೀವ್ಸ್ ಯಶ್​ರ ಕೆಜಿಎಫ್ ಟೀಸರ್​ಗಿಂತ ಕಡಿಮೆ ಇದೆ. ಯಶ್​ಗಿಂತ ಸುದೀಪ್​ರಿಗೇ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದೆ. ಚಿತ್ರರಂಗದಲ್ಲಿ ಅತಿಹೆಚ್ಚು ಅನುಭವ ಹೊಂದಿದವ್ರಲ್ಲೂ ಸುದೀಪ್ ಅವ್ರೇ ಸಾರ್ವಭೌಮ. ಆದ್ರೀಗ ಯಶ್ ಸುದೀಪ್ ದಾಖಲೆ ಬ್ರೇಕ್ ಮಾಡೋ ಮೂಲಕ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಆಗ್ತಿದ್ದು, ರಾಕಿಂಗ್ ಸ್ಟಾರ್ ಫ್ಯಾನ್ಸ್​ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಆದ್ರೆ ಅದು ಫ್ಯಾನ್ಸ್ ವಾರ್ ಆಗಿ ಪರಿಣಮಿಸದಿದ್ದರೆ ಸಾಕು ಅನ್ನೋದೇ ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Next Story

RELATED STORIES