Top

ಕಾವೇರಿ ಪ್ರಾಧಿಕಾರ ರಚನೆ: ಸುಪ್ರೀಂ ಮೊರೆ ಹೋಗಲು ಕರ್ನಾಟಕ ನಿರ್ಧಾರ

ಕಾವೇರಿ ಪ್ರಾಧಿಕಾರ ರಚನೆ: ಸುಪ್ರೀಂ ಮೊರೆ ಹೋಗಲು ಕರ್ನಾಟಕ ನಿರ್ಧಾರ
X

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ಈ ಹಿಂದಿನ ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಮೂಲಕ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದೆ.

ರಾಜ್ಯ ಸರ್ಕಾರದ ತೀರ್ವ ಆಕ್ಷೇಪದ ನಡುವೆಯೂ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನ ರಚಿಸಿದೆ. ಸಂಸತ್ತಿನಲ್ಲಿ ಚರ್ಚೆಯಾಗದೆ ತೆಗೆದುಕೊಂಡ ಕೇಂದ್ರ ನಿರ್ಧಾರದ ಬಗ್ಗೆ ರಾಜ್ಯ ಸರ್ಕಾರ ತೀರ್ವ ವೀರೋಧ ವ್ಯಕ್ತಪಡಿಸಿದೆ. ಹೀಗಾಗಿ ವಿಧಾನಸೌಧಲ್ಲಿಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ವಪಕ್ಷ ಮುಖಂಡರ ಸಭೆ ನಡೆಸಲಾಯ್ತು.

ಕಾವೇರಿ ನೀರು ನಿರ್ವಹಣಾ ಸ್ಕೀಂ ರಚನೆಯಿಂದ ರಾಜ್ಯಕ್ಕಾಗ ಅನ್ಯಾಯದ ಬಗ್ಗೆ ಇಂದು ಸರ್ವ ಪಕ್ಷ ಸಭೆಯನ್ನ‌ ನಡೆಸಲಾಯ್ತು. ರಾಜ್ಯದ ಸಂಸದರು,ಕಾನೂನು ತಜ್ಞರು ಹಾಗೂ ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಾದ ಮೈಸೂರು,ಮಂಡ್ಯ,ಹಾಸನ,ಚಾಮರಾಜನಗರ,ಬೆಂಗಳೂರು ಗ್ರಾಮಾಂತರದ ಶಾಸಕರು ಭಾಗಿಯಾಗಿದ್ದರು.

ಸಭೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದ ರಾಜ್ಯದ ಸಂವಿಧಾನಾತ್ಮಕ ನೀರಿನ ಹಕ್ಕಿಗೆ ಧಕ್ಕೆಯಾಗಿದೆ. ಹೀಗಾಗಿ ನಿಯಮಾವಳಿಗಳ ತಿದ್ದುಪಡಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯ್ತು.ಅಲ್ಲದೆ ಕೇಂದ್ರ ಸರ್ಕಾರ ರೂಪಿಸಿರುವ ಸ್ಕೀಂ‌ನ್ನು‌ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೂಲದಾವೆ ಸಲ್ಲಿಸಲು ಕಾನೂನು ತಜ್ನರ ಸಲಹೆ ಪಡೆಯಲು ಒಪ್ಪಿಕೊಳ್ಳಲಾಯ್ತು.

ಜುಲೈ 2 ರಂದು ದೆಹಲಿಯಲ್ಲಿ ಕಾವೇರಿ ನಿರ್ವಹಣಾ ಸಮಿತಿಯ ಮೊದಲ ಸಭೆ ನಡೆಯಲಿದೆ...ಈ ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳಾಗಿ ಜಲಸಂಪನ್ಮೂಲ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಕಾವೇರಿ ನೀರಾವರಿ ನಿಗಮದ ಎಂಡಿ ಪ್ರಸನ್ನ ಅವರು ಪಾಲ್ಗೊಳ್ಳಲು ಸಭೆಯಲ್ಲಿ ಸಮ್ಮತಿ ಪಡೆಯಲಾಯ್ತು.

Next Story

RELATED STORIES