Top

ಗೋ.ಮಧುಸೂಧನ್‌ ಸವಾಲು ಸ್ಪೀಕರಿಸಿದ ಪ್ರೊ.ರಂಗಪ್ಪ

ಗೋ.ಮಧುಸೂಧನ್‌ ಸವಾಲು ಸ್ಪೀಕರಿಸಿದ ಪ್ರೊ.ರಂಗಪ್ಪ
X

ಮೈಸೂರು : ಇತ್ತೀಚಿಗಷ್ಟೇ ಬಿಜೆಪಿಯ ಗೋ.ಮಧುಸೂಧನ್‌ ಮೈಸೂರಿನಲ್ಲಿ ಸುದ್ದಿಗೋಷ್ಠಿಯ ವೇಳೆ, ಮೈಸೂರಿನ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ವಿರುದ್ಧ ಅಕ್ರಮಗಳ ಧ್ವನಿ ಎತ್ತಿದ್ದರು. ಈ ಬಗ್ಗೆ ಪಂಥಾಹ್ವಾನಕ್ಕೆ ಕರೆ ಕೊಟ್ಟಿದ್ದರು. ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ರಂಗಪ್ಪ, ಅವರ ಸವಾಲನ್ನು ಸ್ವೀಕರಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡುರುವ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ, ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ.ಮಧುಸೂಧನ್‌ ಸವಾಲನ್ನು ಸ್ವೀಕರಿಸಿದ್ದೇನೆ. ಒಂದು ವಾರಗಳ ಕಾಲ ನಾನು ಮೈಸೂರಿನಲ್ಲಿಯೇ ಇರುತ್ತೇನೆ. ಗೋ.ಮಧುಸೂಧನ್‌ ಈ ಒಂದು ವಾರದಲ್ಲಿ ಯಾವತ್ತು ಬೇಕಾದರೂ ದಿನ ನಿಗದಿ ಮಾಡಲಿ. ಅವರೇ ದಿನಾಂಕ, ಸ್ಥಳ, ಅಧ್ಯಕ್ಷತೆ ಎಲ್ಲವನ್ನೂ ನಿರ್ಧರಿಸಿ ಹೇಳಲಿ. ಸಾರ್ವಜನಿಕರ ಮುಂದೆ ಅಂದು ನಾನು ಚರ್ಚೆಯಲ್ಲಿ ಭಾಗವಹಿಸೋದಕ್ಕೆ ಸಿದ್ದನಿರುವುದಾಗಿ ತಿಳಿಸಿದ್ದಾರೆ.

ವಿಶ್ರಾಂತ ಕುಲಪತಿ ಪ್ರೊ.ಕೆ.ರಂಗಪ್ಪ ಸವಾಲು ಸ್ಪೀಕರಸಿದ ಬಗ್ಗೆ ಮಾತನಾಡಿದ ಗೋ.ಮಧುಸೂಧನ್‌, ನಾನು ಸತತ ನಾಲ್ಕು ವರ್ಷಗಳಿಂದ ಅವರ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಆದ್ರೇ ಮೊನ್ನೆ ಕೊಟ್ಟ ಪಂಥಾಹ್ವಾನಕ್ಕೆ ಒಪ್ಪಿಕೊಂಡಿದ್ದಾರೆ. ಅವರು ಹೇಳಿದಂತೆ ಮೈಸೂರು ಪತ್ರಕರ್ತರ ಸಂಘದ ಭವನದಲ್ಲಿ ನಾನು ಚರ್ಚೆಗೆ ಸಿದ್ಧ. ಆ ಚರ್ಚೆ ಬೀದಿ ಜಗಳ ಆಗಬಾರದು. ಚರ್ಚೆಯ ಕೊನೆಯಲ್ಲಿ ರಂಗಪ್ಪನವರ ಕೈ ಕುಲುಕಿ ವಾಪಾಸ್‌ ಹೋಗುವ ವಾತಾವರಣ ನಿರ್ಮಾಣವಾಗುವಂತೆ ಇರಬೇಕು. ಇದು ನನ್ನ ಮತ್ತು ರಂಗಪ್ಪ ಅವರ ನಡುವಿನ ಹೋರಾಟ ಅಲ್ಲ. ಇದು ಸೈದ್ಧಾಂತಿಕ ಹೋರಾಟವಾಗಿದೆ ಎಂದು ಹೇಳಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ನಾನು ರಂಗಪ್ಪನನ್ನು ಪ್ರಶ್ನೆ ಮಾಡೋದು ವಿದ್ಯಾರ್ಥಿಗಳ ಪರವಾಗಿ. ನನ್ನನ್ನು ಆಯ್ಕೆ ಮಾಡಿದ ಪದವೀಧರರ ಪರವಾಗಿ ಪ್ರಶ್ನೆ ಮಾಡುತ್ತೇನೆ. ನನ್ನ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿ. ಅವರ ಪ್ರಶ್ನೆಗಳಿದ್ದರೇ ನಾನು ಉತ್ತರ ಕೊಡುತ್ತೇನೆ. ಇದಕ್ಕೆ ಜಿ.ಟಿ.ದೇವೇಗೌಡರು, ಅಂಪೈರ್ ಆಗಲಿ ಅಂತ ಕೇಳಿದ್ದೆ. ಅವರು ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಮೈಸೂರು ಪತ್ರಕರ್ತರ ಸಂಘಟ ಅಧ್ಯಕ್ಷ ಮಹೇಂದ್ರ ಅವರೇ ಅಂಪೈರ್ ಆಗಲಿ. ಎಲ್ಲಾ ಮಾಧ್ಯಮಗಳು ಬಹಿರಂಗ ಚರ್ಚೆಯನ್ನು ನೇರಪ್ರಸಾರ ಮಾಡಲಿ. ಈ ಚರ್ಚೆಗೆ ನಾನು ಸಿದ್ದರಿರುವುದಾಗಿ ಹೇಳಿದ್ದಾರೆ..

ಹಾದಾದರೇ, ಇವರ ವಾದ ವಿವಾದಗಳ ಪಂಥಾಹ್ವಾನ ನಡೆಯುತ್ತಾ ಅಂತ ಕಾದು ನೋಡಬೇಕಿದೆ.

Next Story

RELATED STORIES