Top

ಕಾಂಗ್ರೆಸ್‌ ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ : ಈಗ ಮಹಿಳಾ ಸದಸ್ಯರ ಸರದಿ

ಕಾಂಗ್ರೆಸ್‌ ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ : ಈಗ ಮಹಿಳಾ ಸದಸ್ಯರ ಸರದಿ
X

ಬೆಂಗಳೂರು : ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಬೆನ್ನಲ್ಲೇ ಕಾಂಗ್ರೆಸ್ ಸಚಿವಾಕಾಂಕ್ಷಿಗಳು ಅಸಮಾಧಾನ ಹೊರಹಾಕಲು ಮುಂದಾಗಿದರು.. ಇದೀಗ ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯೆಯರ ಸರದಿ.. ಏನಿದು ಮಹಿಳಾ ಮಣಿಗಳ ಡಿಮ್ಯಾಂಡ್.. ಅಂತಿರಾ.. ಮುಂದೆ ಓದಿ..

ಸಚಿವ ಸ್ಥಾನ ಬೇಕು ಅಂತ ಕಾಂಗ್ರೆಸ್ ಘಟಾನುಘಟಿ ನಾಯಕರು ರಂಪಾಟ ಮಾಡಿದ್ದು ಆಯ್ತು.. ಈಗ ನಮ್ಮ ಮಹಿಳಾ ಮಣಿಗಳು ಶುರುವಿಟ್ಟುಕೊಂಡಿದ್ದಾರೆ. ನಮಗೂ ಅವಕಾಶ ಕೊಡಿ, ನಾವೇನು ಕಡಿಮೆಯೇ..? ಒರ್ವ ಮಹಿಳೆಗೆ ಮಾತ್ರ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಇದು ಅನ್ಯಾಯ ಅಲ್ವೇ ಅಂತ ನೇರವಾಗಿ ಹಿರಿಯ ಕಾಂಗ್ರೆಸ್‌ ನಾಯಕಿ ಮೋಟಮ್ಮ ಪ್ರಶ್ನಿಸಿದ್ದಾರೆ.

ವಿಧಾನಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮಹಿಳಾ ಕಾರ್ಯಕಾರಿಣಿ ಸಭೆ ನಡೆಯಿತು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಳಾಕರ್, ಹಿರಿಯ ಮಹಿಳಾ ನಾಯಕಿ ಮೋಟಮ್ಮ ಸೇರಿದಂತೆ ಹಲವರು ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವ್ರು, ಲೋಕಸಭಾ ಚುನಾವಣೆಯಲ್ಲೂ ಮೂರರಿಂದ ನಾಲ್ಕು ಮಹಿಳೆಯರಿಗೆ ಟಿಕೆಟ್ ನೀಡಿದ್ರೆ ಒಳ್ಳೆಯದು ಅಂತ ಆಶಯ ವ್ಯಕ್ತಪಡಿಸಿದ್ರು.

ಇನ್ನು ಸಭೆಯಲ್ಲಿ ಮಹಿಳಾ ಕಾರ್ಯಕರ್ತೆಯರ ಸಮಸ್ಯೆ ಆಲಿಸಲು ಒಂದು ವಾಟ್ಸ್ ಅಪ್ ನಂಬರ್ ಬಿಡುಗಡೆ ಮಾಡಲಾಯ್ತು. ಭಾರತಾದ್ಯಂತ ಎಲ್ಲಾ ಮಹಿಳಾ ಕಾರ್ಯಕರ್ತರು ಈ ನಂಬರ್ ಉಪಯೋಗಿಸೋ ಮೂಲಕ, ಪ್ರಸ್ತುತ ಇರುವ ಸಮಸ್ಯೆಯನ್ನ ತಿಳಿಸೋದು. ಜೊತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಸಹ ಈ ನಂಬರ್ ಮೂಲಕ ಸಂಪರ್ಕಿಸಬಹುದು ಅಂತ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್, ಹೇಳಿದ್ರು

ಒಟ್ನಲಿ, ಕಾಂಗ್ರೆಸ್ ನ ಮಹಿಳಾ ನಾಯಕಿಯರು ಸಚಿವ ಸ್ಥಾನ ಮತ್ತು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಈಗಿನಿಂದಲೇ ಲೆಕ್ಕ ಹಾಕುತ್ತಿದ್ದಾರೆ.

ವರದಿ : ಕಿರಣ.ಆರ್, ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES