Top

ಸಮ್ಮಿಶ್ರ ಸರ್ಕಾರದ ಅವಧಿ ಇನ್ನೂ ಕೇವಲ ಆರು ತಿಂಗಳು : ಕೆಎಸ್‌ಇ ಭವಿಷ್ಯ

ಸಮ್ಮಿಶ್ರ ಸರ್ಕಾರದ ಅವಧಿ ಇನ್ನೂ ಕೇವಲ ಆರು ತಿಂಗಳು : ಕೆಎಸ್‌ಇ ಭವಿಷ್ಯ
X

ಶಿವಮೊಗ್ಗ : ಸಮ್ಮಿಶ್ರ ಸರಕಾರ 6 ತಿಂಗಳ ಕಾಲ ಉಳಿಯೋದಿಲ್ಲ. ಕುಮಾರಸ್ವಾಮಿಯವರು ಅಮ್ಮನವರ ಗಂಡ ಆಗಿದ್ದು, ಕಾಂಗ್ರೆಸ್ ಹೇಳಿದಂತೆ ಕೇಳುತ್ತಿದ್ದಾರೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಲೇವಡಿ ಮಾಡಿದ್ದಾರೆ.

ಶಾಸಕರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿಎಂ ಖುರ್ಚಿಯ ಮೇಲೆ ಕುಳಿತಿದ್ದಾರೆ ಅಷ್ಟೇ. ಸರಕಾರ ಇಲ್ಲಿಯವರೆಗೆ ಒಂದೇ ಒಂದು ಹೆಜ್ಜೆ ಮುಂದೆ ಹೋಗಿಲ್ಲ.. ಅಧಿಕಾರಿಗಳ ಟ್ರಾನ್ಸ್​ಫರ್​​ಗಳು ಆಗ್ತಾ ಇವೆ. ಸ್ವಾಮೀಜಿಗಳನ್ನು ಮುಂದೆ ಇಟ್ಟುಕೊಂಡು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಜಾತಿ ರಾಜಕರಾಣ ಮಾಡ್ತಾ ಇದಾರೆ. ಅಧಿಕಾರಕ್ಕಾಗಿ ಏನ್ ಬೇಕಾದ್ರೂ ಮಾಡಬಹುದು ಎನ್ನೋದನ್ನ ಕಾಂಗ್ರೆಸ್​ನವರು ತೋರಿಸಿದ್ದಾರೆ. ಬೇಷರತ್ ಬೆಂಬಲ ಅಂತ ಹೇಳಿ ಈಗ ಗುಂಪುಗಾರಿಕೆ ಮಾಡ್ತಾ ಇದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ರು.

ಇಂತಹ ಸರಕಾರ ಇನ್ನೂ 6 ತಿಂಗಳ ಕಾಲವೂ ಸಹ ಉಳಿಯೋದಿಲ್ಲ ಎಂದು ಈಶ್ವರಪ್ಪ ಎಂದು ಇದೇವೇಳೆ ಭವಿಷ್ಯ ನುಡಿದರು.

Next Story

RELATED STORIES