ಅರ್ಜೆಂಟೀನಾ ಕನಸು ನುಚ್ಚುನೂರು: ಫ್ರಾನ್ಸ್ ಕ್ವಾರ್ಟರ್ಗೆ

ಆರಂಭದಲ್ಲೇ ಹಿನ್ನಡೆ.. ನಂತರ ಸಮಬಲ, ಮತ್ತೆ ಹಿನ್ನಡೆ.. ಮತ್ತೆ ಸಮಬಲ, ನಂತರ ಮುನ್ನಡೆ.. ನಂತರ ಸತತ ಹಿನ್ನಡೆ.. ಹೀಗೆ ಅರ್ಜೆಂಟೀನಾ ಹಿನ್ನಡೆ ಆಘಾತದ ಹೊರತಾಗಿಯೂ ಪದೇಪದೇ ಪುಟಿದೆದ್ದು ಬಂದರೂ ಫ್ರಾನ್ಸ್ ಆಟಗಾರರ ಅಮೋಘ ಆಕ್ರಮಣಕಾರಿ ಆಟದ ಎದುರು ಮಂಡಿಯೂರಿತು. ಇದರೊಂದಿಗೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಅರ್ಜೆಂಟೀನಾ ತಂಡದ ಪ್ರಶಸ್ತಿಯ ಕನಸು ಪ್ರೀಕ್ವಾರ್ಟರ್ ಹಂತದಲ್ಲಿ ಕಮರಿಹೋಯಿತು. ಫ್ರಾನ್ಸ್ ಕ್ವಾರ್ಟರ್ ಫೈನಲ್ಗೆ ಜಿಗಿದು ಸಂಭ್ರಮಿಸಿತು.
ಶನಿವಾರ ನಡೆದ ಪ್ರೀಕ್ವಾರ್ಟ್ ಫೈನಲ್ ಹಂತದ ಮೊದಲ ಪಂದ್ಯದಲ್ಲೇ ಆಘಾತಕಾರಿ ಫಲಿತಾಂಶ ಹೊರಬಿದ್ದಿತು. ಸಂಘಟಿತ ಪ್ರದರ್ಶನ ನೀಡಿದ ಫ್ರಾನ್ಸ್ 4-3ರಿಂದ ಜಯಭೇರಿ ಬಾರಿಸಿತು.
ಫ್ರಾನ್ಸ್ ಪರ ಕೈಲಿಯಾನ್ ಮಪ್ಪೆ (64 ಮತ್ತು 68ನೇ ನಿಮಿಷ) ಎರಡು ಗೋಲು ಸಿಡಿಸಿ ಹೀರೊ ಎನಿಸಿಕೊಂಡರೆ, ಅಂಟೋನಿ ಗ್ರೇಜ್ಮನ್ (13ನೇ ನಿಮಿಷ ಪೆನಾಲ್ಟಿ) ಮತ್ತು ಬೆಂಜಮಿನ್ ಪವರ್ಡ್ (57ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಅರ್ಜೆಂಟೀನಾ ಆ್ಯಂಗೆಲ್ ಡಿ ಮರಿಯಾ (41ನೇ ನಿಮಿಷ), ಗ್ಯಾಬ್ರಿಯೆಲ್ ಮರ್ಕೆಡೊ (48ನೇ ನಿಮಿಷ) ಮತ್ತು ಸೆರ್ಗಿಯೊ ಔರೊ (90+3ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರೂ ಫ್ರಾನ್ಸ್ ಆಟಗಾರರನನ್ಉ ಸರಿಗಟ್ಟಲು ವಿಫಲರಾದರು.