Top

ನೀಚ ಮಂತ್ರಿ ಅಂದ್ರೆ ಹೆಗಡೆ ಎಂದ ಅಸ್ನೋಟಿಕರ್

ನೀಚ ಮಂತ್ರಿ ಅಂದ್ರೆ ಹೆಗಡೆ ಎಂದ ಅಸ್ನೋಟಿಕರ್
X

ಕಾರವಾರ: ಕಾರವಾರದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅನಂತಕುಮಾರ್ ಹೆಗಡೆ ಯಂಥ ಲೋಫರ್ ಯಾರೂ ಇಲ್ಲ. ನಮ್ಮ ದೇಶದಲ್ಲಿ ನಾಲಾಯಕ್ ನೀಚ ಮಂತ್ರಿ ಅಂದ್ರೆ ಅನಂತಕುಮಾರ್ ಹೆಗಡೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಯಾರೋ ಧ್ವಜ ಹಾರಿಸಿದ್ದನ್ನ ತಾನು ಹಾರಿಸಿದೆ ಎಂದು ಆರ್.ಎಸ್.ಎಸ್ ಹೆಸರಲ್ಲಿ ಎಂಪಿ ಆಗಿದ್ದಾನೆ. ವಿಶ್ವೇಶ್ವರ ಹೆಗಡೆ ಕಾಗೇರಿಗೆ ಚಪ್ಪಲಿಯಲ್ಲಿ ಹೊಡೆದವನು ಈತ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ತಕ್ಕ ಪಾಠ ಕಲಿಸುತ್ತೇವೆ‌ ಎಂದು ಅನಂತ್ ಕುಮಾರ್ ಹೆಗಡೆ ವಿರುದ್ಧ ಆನಂದ್ ಅಸ್ನೋಟಿಕರ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

Next Story

RELATED STORIES