Top

ದಿ ವಿಲನ್ ಟೀಸರ್ ಬಿಡುಗಡೆಗೆ ತಡ ಯಾಕಾಯ್ತು ಗೊತ್ತಾ?

ದಿ ವಿಲನ್ ಟೀಸರ್ ಬಿಡುಗಡೆಗೆ ತಡ ಯಾಕಾಯ್ತು ಗೊತ್ತಾ?
X

ಇಷ್ಟು ದಿನ ಕಮಿಂಗ್ ಸೂನ್ ಅಂತ ಸೋಷಿಯಲ್​ ಮೀಡಿಯಾದಲ್ಲಿ ಹಾರನ್ ಹೊಡೆಯುತ್ತಿದ್ದ ನಿರ್ದೇಶಕ ಪ್ರೇಮ್ ಕೊನೆಗೂ ವಿಲನ್ ಟೀಸರ್​​​ ಲಾಂಚ್​ ಮಾಡಿ ಅಭಿಮಾನಿಗಳನ್ನು ತಣಿಸಿದ್ದಾರೆ. 500 ರೂಪಾಯಿ ಕೊಟ್ಟು ಟೀಸರ್ ನೋಡಿದ್ದಾರೆ ನಮ್ಮ ವಿಶಾಲ ಹೃದಯದ ಕನ್ನಡಿಗರು .

ದಿ ವಿಲನ್ ಅದ್ಧೂರಿ ಟೀಸರ್ ಲಾಂಚ್​ಗೆ ರಾಜ್ಯದ ನೂತನ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಸಾಥ್ ನೀಡಿದ್ರು. ತಮ್ಮ ಬ್ಯುಸಿ ಶೆಡ್ಯೂಲ್​​ನಲ್ಲಿಯೂ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟು ದಿ ವಿಲನ್ ಟೀಸರ್​​ ಲಾಂಚ್ ಮಾಡಿದ್ರು. ದಿ ವಿಲನ್ ಚಿತ್ರ ಬೇರೆ ಭಾಷೆಯ ಅದ್ಧೂರಿ ಸಿನಿಮಾಗಳಿಗೆ ಸರಿಸಮಾನವಾಗಿ ನಿಲ್ಲುವ ಸಿನಿಮಾ. ಇಬ್ಬರು ಸ್ಟಾರ್​ ನಟರನ್ನು ಜೊತೆಗೂಡಿಸಿ ಸಿನಿಮಾ ಮಾಡುವುದು ಕಷ್ಟ. ಆದ್ರೆ ಆ ಕಾರ್ಯದಲ್ಲಿ ಪ್ರೇಮ್ ಗೆದ್ದಿದ್ದಾರೆ. ದುಡ್ಡು ಕೊಟ್ಟು ಟೀಸರ್ ನೋಡಲು ಅಭಿಮಾನಿಗಳು ಬಂದಿರುವುದು ಇದೇ ಮೊದಲು ಎಂದು ಸಂತಸ ವ್ಯಕ್ತಪಡಿಸಿದ್ರು.

https://www.youtube.com/watch?v=kRgsFfiXhpE

ಬರೀ ಟೀಸರ್​ ನೋಡೋದಕ್ಕೆ 500ರೂಪಾಯಿನಾ ಎಂದು ಹಲವು ಮಂದಿ ಬಾಯಿ ಬಡ್ಕೊಂಡಿದ್ರು. ಆದ್ರೆ ದಿ ವಿಲನ್ ಚಿತ್ರದ ಟೀಸರ್ ಲಾಂಚ್ ಪ್ರೋಗ್ರಾಮ್​ನ ನೋಡಿದ್ರೆ ಗಾಸಿಪ್ ಮಲ್ಲರು ಪಶ್ಚಾತಾಪ ಪಡೋದು ಗ್ಯಾರಂಟಿ. ಸಹೃದಯಿ ಅಭಿಮಾನಿಗಳು ಕೊಟ್ಟಂತ 500ರೂಪಾಯಿಯನ್ನು , ಕನ್ನಡ ಚಿತ್ರರಂಗಕ್ಕಾಗಿ ದುಡಿದ ನಿರ್ದೇಶಕ ಕುಟುಂಬಕ್ಕೆ ಕೊಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ನಿರ್ದೇಶಕ ಎಟಿ.ರಘು, ಆನಂದ್ ಪಿ.ರಾಜ್, ಹಿರೇಮಠ್ ಹಾಗೂ ಬೂದಾಳು ಕೃಷ್ಣಮೂರ್ತಿ ಫ್ಯಾಮಿಲಿಗೆ ಸಹಾಯ ಧನವನ್ನು ಸಿಎಂ ಕಡೆಯಿಂದ ಕೊಡ್ಸಿದೆ ಜೋಗಿ ಪ್ರೇಮ್ ಸಾರಥ್ಯದ ಫಿಲ್ಮ್​ ಟೀಮ್.

ಇನ್ನು ಈ ಟೀಸರ್ ಲಾಂಚಿಂಗ್ ಪ್ರೋಗ್ರಾಮ್​ಗೆ ಚಿತ್ರತಂಡದ ನಟರು ತಂತ್ರಜ್ಞರು ಬಂದಿದ್ರು. ಕಿಚ್ಚ ಸುದೀಪ್ ಮತ್ತು ನಾಯಕಿ ಆ್ಯಮಿ ಜಾಕ್ಸಾನ್​ ಶೂಟಿಂಗ್​ನಲ್ಲಿದ್ದ ಕಾರಣ ಟೀಸರ್ ಲಾಂಚ್ ಪ್ರೋಗ್ರಾಮ್​ ಗೈರು ಹಾಜರಿ ಹಾಕಿದ್ರು. ಆದ್ರೆ ಕಿಚ್ಚ ಸುದೀಪ್ ಹೊರದೇಶದಲ್ಲಿದ್ರು , ತಮ್ಮ ಮನಸ್ಸನ್ನು ಕರ್ನಾಟಕದಲ್ಲಿಯೇ ಬಿಟ್ಟಿದ್ರು. ಟ್ವೀಟ್ಟರ್​ನಲ್ಲಿ ಲೈವ್ ಬಂದು ಬಿಗ್ ಸಿಲ್ವರ್ ಸ್ಕ್ರೀನ್ ಮೂಲಕ ಗಣ್ಯರಿಗೆ ಧನ್ಯವಾದ ಸಮರ್ಪಿಸಿದರು.

ಇನ್ನು ಶಿವಣ್ಣ , ದಿ ವಿಲನ್ ನಿರ್ಮಾಣಕ್ಕೆ ಕಾರಣರಾದ ಸರ್ವರಿಗೂ ಧನ್ಯವಾದವನ್ನು ಹೇಳಿದ್ರು. ನನಗಿದು ಒಳ್ಳೆಯ ಅನುಭವ. ಕಿಚ್ಚ ಸುದೀಪ್ ಜೊತೆ ನಟಿಸಿದ್ದು ನನಗೆ ಖುಷಿ ಕೊಟ್ಟಿದೆ ಎಂದರು.

ದಿ ವಿಲನ್ ಚಿತ್ರದಿಂದ ಕನ್ನಡ ಚಿತ್ರರಂಗವನ್ನು ಎಲ್ಲಾ ಭಾಷೆ ಮಂದಿ ಎದ್ದು ನಿಂತು ನೋಡುವಂತಾಗಿದೆ. ಕನ್ನಡ ಚಿತ್ರವೊಂದಕ್ಕೆ ಫಸ್ಟ್ ಟೈಮ್ ಮಲ್ಟಿನ್ಯಾಷನ್​ನಲ್ ಕಂಪನಿಗಳು ಸ್ಪಾನ್ಸರ್ ನೀಡಲು ಮುಂದಾಗಿವೆ.. ಈಗಾಲೇ ದಿ ವಿಲನ್ ಕ್ರೇಜ್ ಶುರುವಾಗಿದ್ದು, ಟೈನಕ್ಸ್ ವಾಚ್​ ಕಂಪನಿಯಿಂದ ದಿ ವಿಲನ್ ವಾಚ್ ಸೀರಿಸ್ ಹಾಗೂ ಡೈರಿ ಡೇ ಐಸ್ ಕಂಪನಿ ದಿ ವಿಲನ್ ಐಸ್​ ಕ್ರೀಮ್ ಕೂಡ ಮಾರುಕಟ್ಟೆಗೆ ಬಂದಿವೆ..

ಯಾಕೆ ಇಷ್ಟೆಲ್ಲ ಪ್ರೇಮ್ ಲೇಟ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಗೊಣಗುತ್ತಿದ್ರು.. ಆದ್ರೆ ಈಗ ಸ್ವತಃ ಪ್ರೇಮ್​ರವರೇ ಯಾಕೆ ಇಷ್ಟೊಂದು ವಿಳಂಬ ಅನ್ನೋದಕ್ಕೆ ಫಸ್ಟ್​ ಟೈಮ್​​ ಸ್ಪಷ್ಟಿಕರಣ ಕೊಟ್ಟಿದ್ದಾರೆ. ಟೀಸರ್​ನಲ್ಲಿ ಕಿಚ್ಚನ ತೋರು ಬೆರಳು ಮೇಲೆ ಹರಿದಾಡು ಇರುವೆಯನ್ನು ಸೃಷ್ಟಿ ಮಾಡಲು 3 ತಿಂಗಳು ಆಗಿದೆ. ಬೆಟ್ಟದಷ್ಟು ನಿರೀಕ್ಷೆಯನ್ನು ಮೀರಿಸುವ ಟೀಸರ್ ಮಾಡಲು 3 ತಿಂಗಳ ಕಾಲ ಚಿತ್ರತಂಡ ಶ್ರಮಿಸಿದೆ.

ಕೆಲದಿನಗಳ ಹಿಂದೆ ಕಾಂಟ್ರವರ್ಸಿ ಮಾಡಿಕೊಂಡಿದ್ದ ನೆನ್ನೆ ಮೊನ್ನೆ ಬಂದವರೆಲ್ಲ ಬಾಸು ಅಂತಾರೇ ಅನ್ನೊ ಹಾಡಿನ ವಿಚಾರಕ್ಕೆ ಪ್ರೇಮ್​ ಖಡಕ್​ಆಗಿಯೇ ಉತ್ತರಿಸಿದ್ದಾರೆ. ಅದೊಂದು ಹಾಡಷ್ಟೇ ,ಅದ್ರಲ್ಲಿ ಯಾವುದೇ ರೀತಿ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದಿದ್ದಾರೆ.

ದಿ ವಿಲನ್ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. 1ಗಂಟೆ 20 ನಿಮಿಷ ವಿಎಫ್​ಎಕ್ಸ್ ತಂತ್ರಜ್ಞಾನದಿಂದ ಸ್ಕ್ರೀನ್​ನ ವೈಭವಿಕರಿಸಲು ಪ್ರೇಮ್ ನಿರ್ಧರಿಸಿದ್ದಾರೆ. ಈಗಾಲೇ ಶೇಕಡ 70 ಪರ್ಸೆಂಟ್ ವಿಎಫ್ಎಕ್ಸ್ ಕೆಲಸ ಮುಗಿದ್ದಿದ್ದು , ಇನ್ನು ಶೇಖಡ 30 ಪರಸೆಂಟ್ ಬಾಕಿ ಇದೆ. ಮುಂದಿನ ವಾರದೊಳಗೆ ಒಂದು ಸಾಂಗ್ , ಹಾಗೂ ಶಿವಣ್ಣ ಬರ್ತ್​ಡೇ ಮತ್ತೊಂದು ಸ್ಪೆಷಲ್ ಸಾಂಗ್​ನ ಚಿತ್ರತಂಡ ಬಿಡುವ ಯೋಜನೆಯಲ್ಲಿದೆ.

ಪ್ರೇಮ್​ ಬತ್ತಳಿಕೆಯಲ್ಲಿ ಕುತೂಹಲ ಕೆರಳಿಸುವ ಮತ್ತಷ್ಟು ಬಾಣಗಳಿದ್ದು, ಆ ಎಲ್ಲಾ ಬಾಣಗಳು ಪ್ರೇಕ್ಷಕರ ಹೃದಯಕ್ಕೆ ಬಿಟ್ಟು , ಆಗಸ್ಟ್ ಹೊತ್ತಿಗೆ ಜನ ಥೇಟರ್​ನತ್ತ ಓಡೋಡಿ ಬರುವಂತೆ ಮಾಡುವ ಪ್ಲಾನ್​ನಲ್ಲಿ ಪ್ರೇಮ್ ಮಗ್ನರಾಗಿದ್ದಾರೆ.

ಶ್ರೀಧರ್ ಶಿವಮೊಗ್ಗ ಎಂಟರ್​​ಟೈನ್ಮೆಂಟ್ ಬ್ಯೂರೋ, TV5

Next Story

RELATED STORIES