2ನೇ ಟಿ20 ಫೈಟ್ಗೆ ರೆಡಿಯಾದ ಭಾರತ-ಐರ್ಲೆಂಡ್

X
TV5 Kannada29 Jun 2018 6:30 AM GMT
ಡಬ್ಲಿನ್ : ಮೊಲದ ಟಿ20 ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ ಇಂದು ಆತಿಥೇಯ ಐರ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯ ಆಡಲಿದೆ. ಎರಡನೇ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ತಂಡ ಆಗಿರೋದ್ರಿಂದ ನಾಯಕ ಕೊಹ್ಲಿ ತಂಡದಲ್ಲಿ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಇತ್ತ ಐರ್ಲೆಂಡ್ ತಂಡಕ್ಕೆ ತವರಿನ ಅಭಿಮಾನಿಗಳೆದುರು ಗೆಲ್ಲುವುದೇ ದೊಡ್ಡ ತಲೆ ನೋವಾಗಿದೆ.
ಇಂದು ನಡೆಯುವ ಎರಡನೇ ಚುಟಕು ಕದನದಲ್ಲಿ ಮೊದಲ ಪಂದ್ಯ ಆಡುವ ಹನ್ನೊಂದರ ಬಳಗದಿಂದ ವಂಚಿತರಾಗಿದ್ದ ತಂಡದ ಪ್ರಮುಖ ಆಟಗಾರರಾದ ಕನ್ನಡಿಗ ಕೆ.ಎಲ್. ರಾಹುಲ್, ದಿನೇಶ್ ಕಾರ್ತಿಕ್ ಮತ್ತು ಉಮೇಶ್ ಯಾದವ್ಗೆ ಇಂದು ಅವಕಾಶ ಸಿಗುವ ಸಾಧ್ಯತೆ ತುಂಬ ಇದೆ. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಸ್ಪಿನ್ನರ್ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲ್ದೀಪ್ ಯಾದವ್ ತಲಾ ಮತ್ತು ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು.
Next Story