Top

ಸಿದ್ದರಾಮಯ್ಯ ಮೂಲೆಗುಂಪು ಮಾಡುವ ಚರ್ಚೆ ಉಹಾಪೋಹ : ಸಚಿವ ಆರ್.ಶಂಕರ್

ಸಿದ್ದರಾಮಯ್ಯ ಮೂಲೆಗುಂಪು ಮಾಡುವ ಚರ್ಚೆ ಉಹಾಪೋಹ : ಸಚಿವ ಆರ್.ಶಂಕರ್
X

ಧಾರವಾಡ : ಸಮ್ಮಿಶ್ರ ಸರ್ಕಾರದ ಆಡಳಿತ ಬಗ್ಗೆ, ಅರಣ್ಯ ಸಚಿವ ಆರ್.ಶಂಕರ್ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡುವ ಯಾವೊಂದು ಪ್ರಕ್ರಿಯೆ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಧಾರವಾಡದ ಗುಂಗರಗಟ್ಟಿ ರಾಜ್ಯ ಅರಣ್ಯ ಅಕಾಡಮಿಯಲ್ಲಿ ಸಂಘಟಿಸಿರುವ 6ನೇಯ ತಂಡದ ಅರಣ್ಯ ರಕ್ಷಕ ತರಬೇತಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ, ಅರಣ್ಯ ಸಚಿವ ಆರ್‌.ಶಂಕರ್, ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡುವ ಯಾವೊಂದೇ ಪ್ರಕ್ರಿಯೆ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿಲ್ಲ. ಮೊನ್ನೆ ಉಪಮುಖ್ಯಮಂತ್ರಿ ನಡೆಸಿರುವ ಸಭೆಯಲ್ಲಿ ನಾನು ಪಾಲ್ಗೊಂಡಿದ್ದೆ. ಅಲ್ಲಿ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡುವ ಬಗ್ಗೆ ಚರ್ಚೆ ನಡೆದಿದೆ ಅನ್ನೋದೆಲ್ಲ ಉಹಾಪೋಹ ಎಂದರು.

ಇನ್ನೂ, ರಾಜ್ಯದಲ್ಲಿ‌ ನಡೆಯುತ್ತಿರುವ ಸಮ್ಮಿಶ್ರ ಸರ್ಕಾರ ಕೇವಲ‌ ಲೋಕಸಭಾ ಚುನಾವಣೆವರೆಗೆ ಮಾತ್ರ ಸೀಮಿತವಲ್ಲ. ನಮ್ಮ ಸರ್ಕಾರ ಐದು ವರ್ಷ ಆಡಳಿತ ಪೂರ್ಣಗೊಳಿಸುತ್ತದೆ ಅಂತಾ ಅರಣ್ಯ ಸಚಿವ ಆರ್.ಶಂಕರ್ ಭವಿಷ್ಯ ನುಡಿದಿದ್ದಾರೆ.

ಇದೇ ವೇಳೆ ಕಾಡಿನಲ್ಲಿ ಬಹಳಷ್ಟು ಸಮಸ್ಯೆ ಇವೆ. ಆದರೆ ಈಗ ಇರುವ ಸಿಬ್ಬಂದಿ ಸಾಕಾಗುವುದಿಲ್ಲ. ಹೀಗಾಗಿ ಮೂರು ಸಾವಿರ ಸಿಬ್ಬಂದಿ ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದೇವೆ. ಅದು ಹಂತ ಹಂತವಾಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.

ಅಂದಹಾಗೇ, ಈ ಸಲದ ಬಜೆಟ್‌ನಲ್ಲಿ 582 ಕೋಟಿ‌ ಹೆಚ್ಚುವರಿ ಅನುದಾನ ಕೇಳಿದ್ದೇನೆ. ಇಲ್ಲಿಯವರಗೆ ಪ್ರತಿ‌ವರ್ಷ ಐದು ಕೋಟಿ ಸಸಿ ನೆಡುವ ಗುರಿ‌ ಇರುತಿತ್ತು. ಈ ಸಲದ ಬಜೆಟ್‌ನಲ್ಲಿ ಹತ್ತು ಕೋಟಿ ಸಸಿ ನೆಡುವುದಕ್ಕೆ ಅನುದಾನ ಮೀಸಲಿಡಲು ಕೇಳಿದ್ದೇವೆ. ಮಗುವನ್ನು ಸಾಕಿದ ರೀತಿಯಲ್ಲಿ ಸಸಿಗಳನ್ನು ನಿರ್ವಹಿಸಬೇಕಿದ್ದು, ಇಲಾಖೆಯೇ ಎಲ್ಲ ಮಾಡಲು ಆಗುವುದಿಲ್ಲ‌. ಸಾರ್ವಜನಿಕರು ಈ ಪ್ರಕ್ರಿಯೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ವರದಿ : ದುರ್ಗೇಶ ನಾಯಿಕ, ಟಿವಿ5 ಧಾರವಾಡ.

Next Story

RELATED STORIES