Top

ಕೆಜಿಎಫ್ ಚಿತ್ರದ ಚಿತ್ರೀಕರಣವನ್ನು ಹಾಡಿ ಹೊಗಳಿದ ನಟ ಮುರಳಿ

ಕೆಜಿಎಫ್ ಚಿತ್ರದ ಚಿತ್ರೀಕರಣವನ್ನು ಹಾಡಿ ಹೊಗಳಿದ ನಟ ಮುರಳಿ
X

ಸ್ಯಾಂಡಲ್​ವುಡ್​ ಅಂಗಳದಲ್ಲಿ ಧಮ್ಮು ರಿಧಮ್ಮ ಎರಡೂ ಇರೋ ಸ್ಟಾರ್ ಅಂದ್ರೆ ಅದು ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್. ಯಶ್ ಇದಾರೆ ಅಂದ್ರೆ ಅಲ್ಲೊಂದು ಖದರ್ ಇರುತ್ತೆ, ಅದನ್ನ ನೋಡೋರಿಗೆ ಸಿಕ್ಕಾಪಟ್ಟೆ ಥ್ರಿಲ್ ಕೂಡ ಇರುತ್ತೆ. ಸದ್ಯ ಈ ವರ್ಷದ ಹೈಲೀ ಎಕ್ಸ್​ಪೆಕ್ಟೆಡ್ ಸಿನಿಮಾ ಕೆಜಿಎಫ್ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಒಂದಷ್ಟು ಇಂಟರೆಸ್ಟಿಂಗ್ ಕಾರಣಗಳೂ ಇವೆ.

ಕೆಜಿಎಫ್ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚಾಗ್ತಾ ಹೋಗ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ, ರವಿ ಬಸ್ರೂರು ಸಂಗೀತ, ಭುವನ್ ಗೌಡ ಸಿನಿಮಾಟೋಗ್ರಫಿ ಹೀಗೆ ಮೆಗಾ ಕಾಂಬಿನೇಷನ್​ನ ಮೆಗಾ ಚಿತ್ರ ಕೆಜಿಎಫ್. ಎಲ್ಲಕ್ಕಿಂತ ಹೆಚ್ಚಾಗಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಡಿ ನಿರ್ಮಾಣವಾಗ್ತಿರೋ ಬಹುಕೋಟಿ ಸಿನಿಮಾ.

ಹೆಚ್ಚೂ ಕಡಿಮೆ ಎರಡು ವರ್ಷದಿಂದ ಕೆಜಿಎಫ್ ಶೂಟಿಂಗ್ ನಡೀತಿದೆ. ಆದ್ರೆ ಸಿನಿಮಾ ಮಾತ್ರ ಕಂಪ್ಲೀಟ್ ಆಗಿಲ್ಲ. ಅದ್ಯಾವಾಗ ರಿಲೀಸ್ ಆಗುತ್ತೆ ಅನ್ನೋ ಸುಳಿವೂ ಇಲ್ಲ. ಆದ್ರೆ ಪಿರಿಯಾಡಿಕ್ ಸಿನಿಮಾ ಮಾಡ್ತಿರೋ ಟೀಂ ಕೆಜಿಎಫ್, ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಹ ಸಿನಿಮಾ ಕೊಡೋದ್ರಲ್ಲಿ ನಿರಂತರವಾಗಿ ಕಾರ್ಯನಿರತವಾಗಿದೆ.

50ಕೋಟಿ ವೆಚ್ಚದಲ್ಲಿ 5 ಭಾಷೆಯಲ್ಲಿ ನಿರ್ಮಾಣವಾಗ್ತಿರೋ ಕೆಜಿಎಫ್ ಯಶ್ ಸಿನಿ ಕರಿಯರ್​ನಲ್ಲೇ ಸಾರ್ವಕಾಲಿಕ ದಾಖಲೆ ಬರೆಯಲಿರೋ ಸಿನಿಮಾ ಅನ್ನೋದು ಈಗಾಗ್ಲೇ ಎಲ್ರಿಗೂ ಗೊತ್ತಿದೆ. ಆದ್ರೆ ಇದು ವರ್ಲ್ಡ್​ ಸಿನಿದುನಿಯಾದಲ್ಲಿ ಭಾರತವನ್ನ ಪ್ರತಿನಿಧಿಸಲಿದೆ ಅನ್ನೋದು ಹೊಸ ಸುದ್ದಿ.

ಕೆಜಿಎಫ್ ಇಂಟರ್ ನ್ಯಾಷನಲ್ ಸಿನಿಮಾ ಅನ್ನೋ ಮಾತು ಅವರಿವರು ಹೇಳಿದ್ದಲ್ಲ. ಸ್ಯಾಂಡಲ್​ವುಡ್​ನ ಸೆನ್ಸೇಷನಲ್ ಮಾಸ್ ಹೀರೋ, ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳಿದ್ದು ಅಂದ್ರೆ ನೀವು ನಂಬಲೇಬೇಕು. Tv5 ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ ರೋರಿಂಗ್ ಸ್ಟಾರ್, ಕೆಜಿಎಫ್​ನ ಹಾಡಿ ಹೊಗಳಿದ್ದಾರೆ.

ಉಗ್ರಂ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಪ್ರಶಾಂತ್ ನೀಲ್, ಕೆಜಿಎಫ್​ಗಾಗಿ ಸಿಕ್ಕಾಪಟ್ಟೆ ವರ್ಕ್​ ಮಾಡಿದ್ದಾರೆ. ಪ್ರೀ ಪ್ರೊಡಕ್ಷನ್​ಗಾಗಿಯೇ ಒಂದು ವರ್ಷ ಕೆಲಸ ಮಾಡಿರೋ ಪ್ರಶಾಂತ್ ನೀಲ್, ಶೂಟಿಂಗ್​ಗೆ ಅಂತ್ಲೇ ಬರೋಬ್ಬರಿ ಎರಡು ವರ್ಷ ತೆಗೆದುಕೊಂಡಿದ್ದಾರೆ. ಇದೀಗ ಪೋಸ್ಟ್ ಪ್ರೊಡಕ್ಷನ್​ಗೂ ಹೆಚ್ಚಿನ ಸಮಯ ತೆಗೆದುಕೊಳ್ತಿರೋ ಪ್ರಶಾಂತ್ ನೀಲ್, ಇಡೀ ದೇಶವೇ ಮೆಚ್ಚೋ ಸಿನಿಮಾ ಕೊಡೋ ಧಾವಂತದಲ್ಲಿದ್ದಾರೆ.

ಚಿನ್ನದ ನಾಡು ಕೋಲಾರದ ಕೆಜಿಎಫ್​ನ ಚಿನ್ನದ ಗಣಿಗಳಲ್ಲಿ ಧೂಳೆಬ್ಬಿಸೋ ರೀತಿ ಚಿತ್ರಿಸಿರೋ ಚಿತ್ರದ ಒಂದೊಂದು ಫ್ರೇಮ್ ಕೂಡ ನೋಡುಗರಿಗೆ ಹಬ್ಬ ನೀಡಲಿದೆ. ಮತ್ತೊಮ್ಮೆ ರಾಕಿಯಾಗಿ ರಾಕಿಂಗ್ ಸ್ಟಾರ್ ಬಿಗ್ ಸ್ಕ್ರೀನ್​ಗೆ ಬರ್ತಿರೋದು, ಅದ್ರಲ್ಲಿ ಬಳಸಿರೋ ರಾಕಿ ಸ್ಪೆಷಲ್ ಬೈಕ್, ಯಶ್ ಲುಕ್ಸ್, ಕಾಸ್ಟ್ಯೂಮ್ಸ್, ಯಶ್ ಇಂಟೆನ್ಸ್ ಪರ್ಫಾರ್ಮೆನ್ಸ್ ಹೀಗೆ ಎಲ್ಲವೂ ಸಂಥಿಂಗ್ ಇಂಟರೆಸ್ಟಿಂಗ್ ಅನಿಸಿದೆ.

ರಾ ಲುಕ್ ಕೊಡೋ ಮಾಸ್ ಅಂಡ್ ರಗಡ್ ಸೆಟ್​ಗಳಲ್ಲಿ ರಫ್ ಅಂಡ್ ಟಫ್ ಗೆಟಪ್​ಗಳಲ್ಲಿ ಚಿತ್ರಿಸಿರೋ ಕೆಜಿಎಫ್​ ಮೇಕಿಂಗ್ ಟೀಸರ್​ನಲ್ಲಿರೋ ಡೈಲಾಗ್ ಸಿನಿಪ್ರಿಯರನ್ನ ಹುಚ್ಚೆಬ್ಬಿಸಿದೆ. ಅದ್ರಲ್ಲೂ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಇಷ್ಟೊಂದು ಒತ್ತು ಕೊಟ್ಟು ಮಾಡ್ತಿರೋದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ಅಂದಹಾಗೆ ಕೆಜಿಎಫ್ ಸಿನಿಮಾ ಇಷ್ಟು ತಡ ಆಗ್ತಿರೋದು ನೋಡಿದ್ರೆ, ಯಶ್​ರ ಫೇವರಿಟ್ ಡಿಸೆಂಬರ್ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗೋ ಸೂಚನೆ ಸಿಗ್ತಿದೆ. ನವೆಂಬರ್ ವೇಳೆಗೆ ಪೋಸ್ಟ್ ಪ್ರೊಡಕ್ಷನ್ ಮುಗಿಸಿ, ಯಶ್ ಕರಿಯರ್​ಗೆ ಮಹತ್ತರ ತಿರುವು ಕೊಟ್ಟಂತಹ ಡಿಸೆಂಬರ್ ಮಾಸದಲ್ಲಿ ಕೆಜಿಎಫ್ ತೆರೆಗೆ ಬಂದರೂ ಅಚ್ಚರಿಯಿಲ್ಲ.

ಎರಡು ಭಾಗಗಳಲ್ಲಿ ತಯಾರಾಗ್ತಿರೋ ಈ ಮಹೋನ್ನತ ಸಿನಿಮಾದ ಮೊದಲ ಚಾಪ್ಟರ್ ಡಿಸೆಂಬರ್​ಗೆ ಬಂದರೆ, ಎರಡನೇ ಚಾಪ್ಟರ್ ಯಾವಾಗ ಬರಲಿದೆ ಅನ್ನೋ ಕುತೂಹಲ ಮತ್ತಷ್ಟಯ ಗರಿಗೆದರಲಿದೆ. ಅದೇನೇ ಇರಲಿ, ಆದಷ್ಟು ಬೇಗ ತೆರೆಮೇಲೆ ಯಶ್ ಕೆಜಿಎಫ್ ರಾರಾಜಿಸಲಿ ಅನ್ನೋದು ಸಿನಿಪ್ರಿಯರ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Next Story

RELATED STORIES