Top

ಉಡುಪಿಯಲ್ಲಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ

ಉಡುಪಿಯಲ್ಲಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ
X

ಉಡುಪಿ : ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆಯಾಗುತ್ತಿದೆ. ರಾತ್ರಿ ವೇಳೆ ಕೊಂಚಾ ವಿರಾಮ ಪಡೆದಿದ್ದ ಮಳೆ ಮತ್ತೆ ಮುಂಜಾನೆಯಿಂದ ಚುರುಕು ಗೊಂಡಿದೆ.ಉಡುಪಿ ಜಿಲ್ಲೆಯಾದ್ಯಂತ ಸುರಿದ ಮಳೆಗೆ ತಾಲೂಕಿನ ಎಲ್ಲಾ ನದಿ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮಳೆಗೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿದ್ದು, ದೋಣಿ ಮೂಲಕ ಸಂಚಾರ ಮಾಡುವ ಸ್ಥಿತಿ ಎದುರಾಗಿದೆ.

ಕೆಲವು ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ತೀರ್ಥಹಳ್ಳಿ ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ 7 ನೇ ತಿರುವಿನಲ್ಲಿ ಗುಡ್ಡ ಕುಸಿತಗೊಂಡಿದ್ದು ಲಾರಿ ಟಿಪ್ಪರ್ ಬಸ್ಸು ಸೇರಿದಂತೆ ಅಧಿಕ ಸಾಮರ್ಥ್ಯದ ವಾಹನಕ್ಕೆ ಸಂಚಾರ ನಿಷೇಧಿಸಲಾಗಿದೆ.

ತುರ್ತಾಗಿ ರಸ್ತೆ ರಿಪೇರಿ ಮಾಡುವಂತೆ ಹೆದ್ದಾರಿ ಇಲಾಖೆಗೆ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.ಇಂದು ಕೂಡ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಕಡಲಿಗಿಳಿಯುವುದು ಕಷ್ಟಸಾಧ್ಯವಾಗಿದೆ.ಜಿಲ್ಲೆಯಾದ್ಯಂತ ಮೋಡಕವಿದಿದ್ದು ಮಳೆ ಮುಂದುವರಿಯುವ ಸೂಚನೆ ದಟ್ಟವಾಗಿದೆ

Next Story

RELATED STORIES