Top

ಪಾಲಿಗಾಗಿ ಕಿತ್ತಾಡಿದ ಪುರಸಭೆ ಮಾಜಿ ಅಧ್ಯಕ್ಷೆ

ಪಾಲಿಗಾಗಿ ಕಿತ್ತಾಡಿದ ಪುರಸಭೆ ಮಾಜಿ ಅಧ್ಯಕ್ಷೆ
X

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದ ಪುರಸಭೆ ಮೀಟಿಂಗ್‌ನಲ್ಲಿ ಪರ್ಸೆಂಟೇಜ್‌ಗಾಗಿ ಮಾಜಿ ಪುರಸಭಾ ಅಧ್ಯಕ್ಷೆ ಜಗಳವಾಡಿದ ಘಟನೆ ನಡೆದಿದೆ. ಮಾಜಿ ಪುರಸಭಾ ಅಧ್ಯಕ್ಷೆ, ಹಾಲಿ ಸದಸ್ಯೆ ಅನ್ನಪೂರ್ಣಮ್ಮ ಗಲಾಟೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಅನ್ನಪೂರ್ಣಮ್ಮ ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದ ಅನುದಾನದಲ್ಲಿ ತಮಗೆ ಪರ್ಸೆಂಟೇಜ್ ನೀಡಿಲ್ಲವೆಂದು ಹಾಲಿ ಅಧ್ಯಕ್ಷೆ ಮತ್ತು ಇತರರನ್ನು ತರಾಟೆಗೆ ತೆಗೆದುಕೊಂಡಿದ್ದು, ಕಾಮಗಾರಿಯಲ್ಲಿ ಕಮೀಷನ್ ನೀಡಿಲ್ಲ ಎಂದು ವಾಗ್ವಾದ ನಡೆಸಿ ಸಾಮಾನ್ಯ ಸಭೆ ನಡೆಯದಂತೆ ತಡೆದಿದ್ದಾರೆ.

ಈ ಬಗ್ಗೆ ಫುಲ್‌ಗರಂ ಆದ ಸದಸ್ಯೆ, ನಾನು ಅಧ್ಯಕ್ಷೆಯಾಗಿದ್ದಾಗ ನಿಮ್ಮೆಲ್ಲರಿಗೂ ಪಾಲು ಕೊಟ್ಟಿಲ್ಲವೇನು..? ನೀವೆಲ್ಲ ತೆಗೆದುಕೊಂಡಿಲ್ಲವೇನು? ನನ್ನ ಪತಿಯನ್ನು ಕರೆಸುತ್ತೇನೆ, ಅವರ ಜೊತೆಯೇ ಮೀಟಿಂಗ್ ಮಾಡ್ರಿ. ಪುರಸಭೆ ಹಾಲಿ ಅಧ್ಯಕ್ಷೆ ಭುವನೇಶ್ವರಿ ಪತಿ ಶಿವರೆಡ್ಡಿ, ನನ್ನ ಕಡೆಯಿಂದ ಹಣ ತಿಂದಿಲ್ವಾ ಎಂದು ಸದಸ್ಯೆ ಅನ್ನಪೂರ್ಣ ಬಹಿರಂಗವಾಗಿ ಅವಾಜ್ ಹಾಕಿದ್ದಾರೆ.ಇನ್ನು ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪುರಸಭೆ ಸದಸ್ಯರ ಪರ್ಸೆಂಟೇಜ್ ಜಗಳಕ್ಕೆ ಜನರು ಛಿಮಾರಿ ಹಾಕಿದ್ದಾರೆ.

Next Story

RELATED STORIES