Top

ಬೀದಿಗೆ ಬಂದ ತುಮಕೂರಿನ ಬಿಎಫ್ಎ ವಿದ್ಯಾರ್ಥಿಗಳ ಬದುಕು

ಬೀದಿಗೆ ಬಂದ ತುಮಕೂರಿನ ಬಿಎಫ್ಎ ವಿದ್ಯಾರ್ಥಿಗಳ ಬದುಕು
X

ತುಮಕೂರು : ಚಿತ್ರ ಕಲಾ ಕಾಲೇಜಿನ ವಿದ್ಯಾರ್ಥಿಗಳು ವಿಚಿತ್ರ ಸಮಸ್ಯೆಯೊಂದನ್ನ ಕಳೆದ ಎರಡು ದಿನಗಳಿಂದ ಎದರಿಸ್ತಾ ಇದ್ದಾರೆ. ವಿದ್ಯಾರ್ಥಿಗಳು ಎರಡು ದಿನಗಳಿಂದ ಮೈದಾನದಲ್ಲೇ ನಿಂತು ಪಾಠ ಕೇಳ್ತಾ. ಉಪನ್ಯಾಸಕರು ಗೋಡೆ ಮೇಲೆ ಚಿತ್ರಗಳನ್ನ ಬರೆದು ವಿದ್ಯಾರ್ಥಿಗಳಿಗೆ ಪಾಠ ಮಾಡ್ತಾ ಇದ್ದಾರೆ. ಆ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಎದುರಾಗಿರೋ ವಿಚಿತ್ರ ಸಮಸ್ಯೆ ಇದೆ.

ಹೌದು, ತುಮಕೂರಿನ ಬಿಎಫ್ಎ ಚಿತ್ರಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮೈದಾನದಲ್ಲೇ ನಿಂತು ಉಪನ್ಯಸಕರು ಪಾಠ ಹೇಳಿಕೊಡುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ. ಉಪನ್ಯಾಸಕರು ಗೋಡೆ ಮೇಲೆಯೇ ಚಿತ್ರ ಬರೆದು ಪಾಠ ಮಾಡುತ್ತಿರುವುದಕ್ಕೆ ಕಾರಣ, ಕಾಲೇಜಿಗೆ ಸ್ವತಂತ ಕಟ್ಟಡ ಇಲ್ಲದೇ ಇರೋದು. ಕಳೆದ 20 ವರ್ಷಗಳಿಂದ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೊಠಡಿಯಲ್ಲಿ ಚಿತ್ರಕಲಾ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತಿತ್ತು. ಆದ್ರೆ ಕಳೆದ ಮೂರು ದಿನದಿಂದ ಪಿಯು ಕಾಲೇಜಿನ ಪ್ರಾಂಶುಪಾಲ ಜಯರಾಮಯ್ಯ ಈ ಕೊಠಡಿಗೆ ಬೀಗ ಜಡಿದಿದ್ದಾರೆ.

ಕಾಲೇಜಿನ ಕೊಠಡಿಗೆ ಬೀಗ ಜಡಿದಿರೋ ಪ್ರಾಂಶುಪಾಲ ಜಯರಾಮಯ್ಯ , ನೀವು ಬೇರೆ ಕಟ್ಟಡ ಹೂಡಿಕಿಕೊಳ್ಳಿ ನಮ್ಮ ಕಾಲೇಜಿನ ಕೊಠಡಿ ನಿಮಗೆ ಕೊಡಲ್ಲ ಎಂದು ಜಾಗ ಖಾಲಿ ಮಾಡಿಸಿದ್ದಾರೆ. ಇದಿಂದ ಬೀದಿಪಾಲಾದ ವಿದ್ಯಾರ್ಥಿಗಳು ಕಾಲೇಜು ಮೈದಾನದಲ್ಲೇ ನಿಂತು ಪಾಠ ಕೇಳಿದ್ರೆ. ಉಪನ್ಯಾಷಕರು ಕೂಡಾ ಕಾಲೇಜು ಕಟ್ಟಡದ ಹೊರ ಗೋಡೆಯ ಮೇಲೆ ಚಿತ್ರ ಬಿಡಿಸಿ ಪಾಠ ಹೇಳಿಕೊಟ್ಟಿದ್ದಾರೆ.

ಇನ್ನೀ ಈ ವಿಚಾರ ತಿಳಿದ ಪಿಯು ಡಿಡಿಪಿಐ ಶ್ರೀಮತಿ ಉನ್ನಿಸಾ ಬೀಗ ಜಡಿದ ಪ್ರಾಂಶುಪಾಲ ಜಯರಾಮಯ್ಯರನ್ನ ತಮ್ಮ ಕಚೇರಿಗೆ ಕರೆಸಿಕೊಂಡಿದ್ದಾರೆ. ಆಗ ಆದ ಘಟನೆಗಳ ಬಗ್ಗೆ ಡಿಡಿಪಿಐಗೆ ವಿದ್ಯಾರ್ಥಿಗಳು ಹೇಳಿದ್ದಾರೆ. ವಿದ್ಯಾರ್ಥಿಗಳ ಮಾತು ಆಸಲಿಸಿದ ಅವರು, ಪ್ರಾಂಶುಪಾಲ ಜಯರಾಮಯ್ಯ ಅವರಿಗೆ ಬುದ್ದಿಹೇಳಿ ಬೀಗ ತೆರೆದು ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸದ್ಯ ವಿದ್ಯಾರ್ಥಿಗಳು ಕೂಡ ನಿರಾಳರಾಗಿದ್ದಾರೆ. ಮತ್ತೆ ವಿದ್ಯಾರ್ಥಿಗಳಿಗೆ ಅದ್ಯಾವಾಗ ಚಿತ್ರ-ವಿಚಿತ್ರ ಸಮಸ್ಯೆ ಎದುರಾಗುತ್ತೋ.

ವರದಿ : ಟಿ.ಯೋಗೀಶ್, ಟಿವಿ5, ತುಮಕೂರು

Next Story

RELATED STORIES