Top

ಜಮೀನು ಖರೀದಿಯ ಹಣ ಕೊಡದಿದ್ದಕ್ಕೆ ವಿನೂತನ ರೀತಿಯ ಪ್ರತಿಭಟನೆ

ಜಮೀನು ಖರೀದಿಯ ಹಣ ಕೊಡದಿದ್ದಕ್ಕೆ ವಿನೂತನ ರೀತಿಯ ಪ್ರತಿಭಟನೆ
X

ಧಾರವಾಡ : ಮಾರಾಟ ಮಾಡಿದ ಜಮೀನಿಗೆ ಹಣ ಕೊಡದೇ ಸತಾಯಿಸುತ್ತಿರುವ ವ್ಯಕ್ತಿಯ ಮನೆಯ ಮುಂದೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಸಪ್ತಾಪೂರ ಬಡಾವಣೆಯ ನಿವಾಸಿ ಬಸವರಾಜ್ ಪಾಟೀಲ ಎಂಬುವರ ಮನೆಯ ಮುಂದೆ ಪ್ರತಿಭಟನಾ ಧರಣಿ ನಡೆಸಿ, ಅಡುಗೆ ಮಾಡಿ ಊಟ ಮಾಡುವ ಮೂಲಕ ಜಮೀನು ಕಳೆದುಕೊಂಡ ಭೀಮಸಿ ದಳವಾಯಿ ಹಾಗೂ ಕುಟುಂಬಸ್ಥರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಗರಗ ಗ್ರಾಮದಲ್ಲಿನ ಒಟ್ಟು ಮೂರು ಎಕರೆ 15 ಗುಂಟೆ ಜಮೀನನ್ನು ಮೂರು 2013ರಲ್ಲಿ ಮಾರಾಟ ಮಾಡಲಾಗಿತ್ತು. ಈ ವೇಳೆ ಜಮೀನಿಗೆ 40 ಲಕ್ಷ ರೂಪಾಯಿ ನಿಗದಿ ಮಾಡಿ, 4 ಲಕ್ಷ ರೂಪಾಯಿ ಮುಂಗಡ ಹಣವನ್ನು ನೀಡಲಾಗಿತ್ತು. ಮೊದಲಿಗೆ ಚೆಕ್ ಮೂಲಕ 2 ಲಕ್ಷ ರೂಪಾಯಿ ನೀಡಿದ್ದ ಬಸವರಾಜ್ ನಂತರ 2 ಲಕ್ಷ ರೂಪಾಯಿ ನೇರವಾಗಿ ನೀಡಿದ್ದಾರೆ.

ಇನ್ನು ಜಮೀನು ಬಸವರಾಜ್ ಹೆಸರಿಗೆ ವರ್ಗಾವಣೆ ಆಗುತ್ತಿದ್ದಂತಯೇ ಮಾರಾಟ ಮಾಡಿದ ಭೀಮಸಿ ಹನುಮಂತಪ್ಪ ದಳವಾಯಿ ಕುಟುಂಬಕ್ಕೆ ಹಣ ನೀಡದೇ ಬಸವರಾಜ್ ಸತಾಯಿಸುತ್ತಲೇ ಬಂದಿದ್ದಾರೆ. ಹಣ ಕಳೆದುಕೊಂಡು ಕಂಗಲಾದ ಭೀಮಸಿ ದಳವಾಯಿ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದರು ಯಾವುದೇ ಪ್ರಯೋಜನವಾಗಿಲ್ಲ. ಎರಡು ಬಾರಿ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದ್ಯಾವದಕ್ಕೂ ಕ್ಯಾರೆ ಅನ್ನದ ಬಸವರಾಜ್ ನಿಲುವಿಗೆ ಬೇಸತ್ತು ಭೀಮಸಿ ಕುಟುಂಬ ಮನೆಯ ಮುಂದೆ ಅಡುಗೆ ಮಾಡಿ ಕುಳಿತು ಊಟ ಮಾಡಿ, ಅನಿರ್ಧಾಷ್ಠಾವಧಿ ಧರಣಿ ನಡೆಸಿದ್ದಾರೆ.

ಇನ್ನು ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದ ಬಸವರಾಜ್ ಹಣ ಕೊಡುವ ಭರವಸೆಯನ್ನು ಏನೋ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಅದೇ ಭರವಸೆ ನೀಡುತ್ತಲೇ ಬಂದಿದ್ದು ಹಣ ಸಿಗುತ್ತೆ ಅನ್ನೋ ನಂಬಿಕೆ ನಮ್ಮಲ್ಲಿ ಇಲ್ಲ ಅಂತಾರೆ ಭೀಮಸಿ ಕುಟುಂಬಸ್ಥರು.

Next Story

RELATED STORIES