Top

ಇನ್ಮುಂದೆ ಮೈಸೂರು ಸಿಲ್ಕ್ ಎಂದು ಬೋರ್ಡ್ ಹಾಕಿಕೊಂಡು ಸೀರೆ ಮಾರುವಂತಿಲ್ಲ

ಇನ್ಮುಂದೆ ಮೈಸೂರು ಸಿಲ್ಕ್ ಎಂದು ಬೋರ್ಡ್ ಹಾಕಿಕೊಂಡು ಸೀರೆ ಮಾರುವಂತಿಲ್ಲ
X

ಮೈಸೂರು: ಭಾರತದಲ್ಲಿ ಇನ್ನುಮುಂದೆ ಮೈಸೂರು ಸಿಲ್ಕ್ ಎಂದು ಬೋರ್ಡ್ ಹಾಕಿಕೊಂಡು ಸೀರೆ ಮಾರಾಟ ಮಾಡುವಂತಿಲ್ಲ. ಹಾಗೇನಾದ್ರೂ ಮಾಡಿದ್ರೆ ಅಂಥವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಸಿಲ್ಕ್ ಹೆಸರಿನ ಹಕ್ಕು ನಮ್ಮ ಬಳಿ ಮಾತ್ರ ಇರುವುದು. ಮೈಸೂರು ಸಿಲ್ಕ್ ಸಿಗುವುದು ಕೇವಲ ಸರ್ಕಾರಿ ಅಂಗಡಿಗಳಲ್ಲಿ ಮಾತ್ರ. ಈ ಹೆಸರಿನಲ್ಲಿ ಬೇರೆ ಸೀರೆ ಮಾರಾಟ ಅಥವಾ ಖಾಸಗಿ ಅಂಗಡಿಗಳಲ್ಲಿ ಮೈಸೂರು ಸಿಲ್ಕ್ ಮಾರಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.

ಚೆನ್ನೈನಲ್ಲಿರುವ ಮತ್ತು ದೇಶದ ಇತರೆ ಭಾಗದಲ್ಲಿರುವ ಮೈಸೂರು ಸಿಲ್ಕ್ ಹೆಸರಿನ ಅಂಗಡಿಗಳಿಗೆ ಸೂಚನೆ ನೀಡಲಾಗುವುದು. ಮೈಸೂರು ಸಿಲ್ಕ್ ಹೆಸರಿನ ಅಕ್ರಮ ತಡೆಯಲು ವಿಶೇಷ ತಂಡ ರಚನೆ ಮಾಡುತ್ತೇವೆ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.

ಇನ್ನು ರೇಷ್ಮೆ ಇಲಾಖೆ ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದೆ. ಕೇವಲ 4ಸಾವಿರದಿಂದ 4500ರೂಪಾಯಿಗೆ ಮೈಸೂರು ಸಿಲ್ಕ್ ಸೀರೆ ಮಾರಾಟ ಮಾಡಲಾಗುತ್ತೆ ಎಂದು ಸಾ.ರಾ.ಮಹೇಶ್ ಟಿವಿ5ಗೆ ಹೇಳಿದ್ದಾರೆ. ಮೈಸೂರು ಸಿಲ್ಕ್ ಮಧ್ಯಮವರ್ಗದವರಿಗೆ ಸಿಗುವುದಿಲ್ಲ ಎಂಬ ಆರೋಪವಿದೆ. ಈ ಕಾರಣದಿಂದ ಆಫರ್ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಾಂತ ಇರುವ ನಮ್ಮ ಮಳಿಗೆಗಳಲ್ಲಿ 4500ರೂ ಮೈಸೂರು ಸಿಲ್ಕ್‌ ಲಭ್ಯವಾಗಲಿದೆ. ಎಲ್ಲ ಮಹಿಳೆಯರು ಕಡಿಮೆ ದರದಲ್ಲಿ ಸೀರೆ ಕೊಂಡುಕೊಳ್ಳಬಹುದು. ಬೇಡಿಕೆಗೆ ಅನುಗುಣವಾಗಿ ಸೀರೆ ಸರಬರಾಜು ಮಾಡುತ್ತೇವೆ. ಸದ್ಯಕ್ಕೆ ವರಮಹಾಲಕ್ಷ್ಮೀಗೆ ಈ ಕೊಡುಗೆ ನೀಡಿದ್ದು ನಂತರ ಮುಂದುವರೆಸುವ ಬಗ್ಗೆ ಚಿಂತನೆ ನಡೆಸುತ್ತೇವೆ. ಜೊತೆಗೆ ರಾಜ್ಯಾದ್ಯಂತ ನಮ್ಮ ಮೈಸೂರು ಸಿಲ್ಕ್ ಅಂಗಡಿ ತೆರೆಯುತ್ತೇವೆ ಎಂದು ಸಾ.ರಾ.ಮಹೇಶ್ ಟಿವಿ5ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದ್ದಾರೆ.

Next Story

RELATED STORIES