Top

ತುಮಕೂರು ಶಾಸಕ ರಂಗನಾಥ್​ ಪತ್ನಿಯ ದರ್ಬಾರ್

ತುಮಕೂರು ಶಾಸಕ ರಂಗನಾಥ್​ ಪತ್ನಿಯ ದರ್ಬಾರ್
X

ತುಮಕೂರು: ಪತ್ನಿಯರ‌ ಅಧಿಕಾರದಲ್ಲಿ ಪತಿಯರು ಮೂಗು ತೂರಿಸೋದು ಆಯ್ತು. ಈಗ ಪತಿಯ ಆಡಳಿತದಲ್ಲಿ ಪತ್ನಿಯರ ದರ್ಬಾರ್‌ನ ಸರತಿ.

ಹೌದು, ಹೀಗೆ ತುಮಕೂರು ಜಿಲ್ಲೆ ನಡೀತಾ ಇದೆ. ತುಮಕೂರಿನ, ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ‌ಶಾಸಕ ಡಾ.ರಂಗನಾಥ್‌ ವಿದೇಶದಲ್ಲಿ ಇದ್ದಾರೆ. ಅವರ ಪತ್ನಿ ಡಾ.ಸುಮಾ ಕ್ಷೇತ್ರದಲ್ಲಿ ಅಧಿಕಾರದ ದರ್ಬಾರ್‌ ನಡೆಸ್ತಾ ಇದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ಸರ್ಕಾರಿ ಇಲಾಖೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸ್ತಾ ಇದ್ದಾರೆ. ಆರಂಭದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಸಮಸ್ಯೆ ಆಲಿಸಿದ್ದಾರೆ.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು, ಇನ್ನೋರ್ವ‌ ಅಧಿಕಾರಿ ಸಣ್ಣೀರಪ್ಪ ಶಾಸಕರ ಪತ್ನಿಗೆ‌ ವಿಧೇಯರಾಗಿ ಜೊತೆಯಲ್ಲಿ ಇದ್ದು ಮಾಹಿತಿ ನೀಡಿದ್ದಾರೆ. ಆಸ್ಪತ್ರೆ ಭೇಟಿ ಬಳಿಕ ಮಾತನಾಡಿದ ಡಾ.ಸುಮಾ, ನಾನು ಚುನಾವಣೆ ಸಂದರ್ಭದಲ್ಲಿ ಮತಯಾಚನೆ ಮಾಡಿದ್ದೆ. ಜನರು ನನ್ನ ಮನವಿಗೂ ಸ್ಪಂದಿಸಿ ಮತಹಾಕಿ ಗೆಲ್ಲಿಸಿದ್ದಾರೆ. ಹಾಗಾಗಿ ಜನರ ಸಮಸ್ಯೆ ಆಲಿಸಿ ಋಣ ತೀರಿಸಲು ಬಂದಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

Next Story

RELATED STORIES