ಮಹದಾಯಿ ಹೋರಾಟಗಾರರ ಅಲೆದಾಟ..!

ಹುಬ್ಬಳ್ಳಿ : ಮಹದಾಯಿ ಕುಡಿಯೋ ನೀರಿನ ನ್ಯಾಯಸಮ್ಮತ ಬೇಡಿಗಾಗಿ 1080 ಕ್ಕೂ ಹೆಚ್ಚು ದಿನಗಳಿಂದ ಉತ್ತರಕರ್ನಾಟಕದಲ್ಲಿ ಹೋರಾಟ ನಡೀತಿದೆ. ತಮ್ ಬೇಡಿಕೆಗಾಗಿ ಹೋರಾಟ ತೀವ್ರಗೊಳಿಸಿ, ಇದಕ್ಕೆ ಅಡ್ಡಗಾಲು ಹಾಕಿರೋರನ್ನ ಹೋರಾಟಗಾರರು ಜಾಡಿಸ್ತಿದಾರೆ. ಆದ್ರೇ, ದಪ್ಪ ಚರ್ಮದ ಮಂದಿ ಈಗ ಹೋರಾಟವನ್ನೇ ಹತ್ತಿಕ್ಕೋದಕ್ಕೆ ಮುಂದಾಗಿದಾರಾ ಅನ್ನೋ ಅನುಮಾನ ಕಾಡ್ತಿದೆ.
ಇದರಲ್ಲೇನು ವಿಕೃತಿ ಇದೆ. ಇದು ಸಾತ್ವಿಕ ಹೋರಾಟದ ಸ್ವರೂಪ. ತಮ್ಮಿಂದಲೇ ಆಯ್ಕೆಯಾಗಿ ಹೋದವರು ತಮ್ ಕೂಗಿಗೆ, ಕಷ್ಟಕ್ಕೆ ಸ್ಪಂದಿಸದಿದ್ರೇ ಸಹಜವಾಗಿಯೇ ಹೋರಾಟ ಇಂಥ ರೂಪ ಪಡೆದುಕೊಳ್ಳುತ್ತೆ. 2015 ರ ಸೆಪ್ಟೆಂಬರ್ ತಿಂಗಳದು. ಕಳಸಾ ಬಂಡೂರಿ ಹೋರಾಟದ ಕಾವು ಇಡೀ ರಾಜ್ಯಾದ್ಯಂತ ವಾಪಿಸಿತ್ತು. ಉತ್ತರ-ದಕ್ಷಿಣ ಕರ್ನಾಟಕ ಅನ್ನೋದ ಬೇಧ ತೊರೆದು ಅದೇ ಮೊದಲ ಬಾರಿಗೆ ಇಡೀ ರಾಜ್ಯವೇ ಮಹದಾಯಿ ನೀರಿಗಾಗಿ ಹೋರಾಟ ನಡೆಸಿ ಇತಿಹಾಸದಲ್ಲಿ ದಾಖಲಾಯಿತು.
ಅದೇ ಟೈಮ್ ನಲ್ಲಿಯೇ ಸ್ಥಳೀಯ ಜನಪ್ರತಿನಿಧಿಗಳು ತಮ್ ಹೋರಾಟಕ್ಕೆ ಯಾವುದೇ ಸ್ಪಂದನೆ ನೀಡ್ತಿಲ್ಲ ಅನ್ನೋ ಆಕ್ರೋಶ ಉತ್ತರಕರ್ನಾಟಕದ ಜನರಲ್ಲಿತ್ತು. ಅದಕ್ಕಾಗಿಯೇ ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿಯವರ ಮನೆಗೂ ಕಳಸಾ ಬಂಡೂರಿ ಹೋರಾಟಗಾರರು ಮುತ್ತಿಗೆ ಹಾಕಿದ್ರು. ಮನೆ ಮುಂದೆಯೇ ಭಜನೆ ಮಾಡ್ತಾ ವಿಶಿಷ್ಟ ಪ್ರತಿಭಟನೆಯಿಂದ ಜೋಶಿಯವರನ್ನ ಎಚ್ಚರಿಸೋ ಯತ್ನವನ್ನ ಹೋರಾಟಗಾರರು ಮಾಡಿದ್ರು. ಆದ್ರೇ, ಇದನ್ನ ತುಂಬ ವೈಯಕ್ತಿಕವಾಗಿ ತೆಗೆದುಕೊಂಡಿದ್ದ ಪ್ರಹ್ಲಾದ್ ಜೋಶಿ, ಹೋರಾಟಗಾರರ ಮೇಲೆ ಗೂಂಡಾ ಪ್ರಕರಣ ದಾಖಲಿಸಿದ್ರು. ಅದೇ ಕೇಸ್ ಗೆ ಸಂಬಂಧಿಸಿದ ಹುಬ್ಬಳ್ಳಿಯ 1ನೇ ಜೆಎಂಎಫ್ ಸಿ ಕೋರ್ಟ್ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಏಳು ಮಂದಿ ನ್ಯಾಯಾಲಯಕ್ಕೆ ಇಂದು ಹಾಜರಾದ್ರು..
ಇದು ನಡೆದು ಈಗ 3 ವರ್ಷ ಆಗ್ತಿದೆ. ಇದರ ಮಧ್ಯೆಯೇ ಕೇಸ್ ಹಾಕಿದ್ರಿಂದಾಗಿ ಕಳಸಾ ಬಂಡೂರಿ ಹೋರಾಟಗಾರರ ಮನಬಲ ಕುಗ್ಗಿಸೋ ಯತ್ನ ನಡೀತಿದೆ ಅನ್ನೋ ಅನುಮಾನ ಕಾಡ್ತಿದೆ. ಈಗಾಗೇ ಹೋರಾಟ ನಡೆಸಿದ್ದ ರೈತರ ಮೇಲೆ ಕೇಸ್ ಹಾಕಿ ರಾಜ್ಯದ ಬೇರೆಬೇರೆ ಜೈಲುಗಳಲ್ಲಿ ಇರಿಸಲಾಗಿತ್ತು. ರೈತ ಪರ ಹೋರಾಟಗಾರರ ಮೇಲೆ ಕೇಸ್ ಹಾಕಿದ್ರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ ಅನ್ನೋದನ್ನ ಅರಿತು, ಕೊನೆಗೂ ರೈತರ ಮೇಲಿನ ಕೇಸ್ ಗಳನ್ನ ಸಿದ್ದರಾಮಯ್ಯ ಸರ್ಕಾರ ವಾಪಸ್ ತೆಗೆದುಕೊಂಡಿತ್ತು.
ಇದರ ಮಧ್ಯೆಯೇ ಅಮಾಯಕರನ್ನ ನವಲಗುಂದ ತಾಲೂಕಿನ ಆರೆಕುರಹಟ್ಟಿ, ಯಮನೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ಹೊಕ್ಕು ಅಮಾಯಕರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ರು. ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಹೀಗೆ ಸಿಕ್ಕ ಸಿಕ್ಕವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ರು. ಹೈಕೋರ್ಟ್ ಛೀಮಾರಿ ಹಾಕಿದ್ಮೇಲೆ ಏಟು ತಿಂದ ಸಂತ್ರಸ್ತರಿಗೆ ಬಿಡಿಗಾಸಿನ ಪರಿಹಾರ ನೀಡಲಾಗಿದೆ. ಇದರ ಮಧ್ಯೇ ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ, ಕಳಸಾ ಬಂಡೂರಿ ಹೋರಾಟಗಾರರಾದ ಶೇಖರಯ್ಯ ಮಠಪತಿ, ರಾಜಣ್ಣ ಕೊರವಿ, ಸಿದ್ದು ತೇಜಿ, ಮಂಜುನಾಥ ಲೂತಿಮಠ ಸೇರಿ ಏಳು ಮಂದಿ ಮೇಲೆ ಗೂಂಡಾ ಪ್ರಕರಣ ದಾಖಲಿಸಿದಾರೆ.
ಇವತ್ತು ಹುಬ್ಬಳ್ಳಿಯ 1ನೇ ಜೆಎಂಎಫ್ ಸಿ ಕೋರ್ಟ್ ಗೆ ಏಳೂ ಮಂದಿ ಹಾಜರಾಗಿದ್ರು. ಪ್ರಕರಣ ದಾಖಲಿಸಿ ತಮ್ ಹೋರಾಟ ಹತ್ತಿಕ್ಕೋದಕ್ಕೆ ಯತ್ನಿಸಲಾಗ್ತಿದೆ. ಆದ್ರೇ, ಯಾವುದೇ ಕಾರಣಕ್ಕೂ ಮಹದಾಯಿ ನೀರು ಕುಡಿಯೋವರೆಗೂ ಹೋರಾಟ ನಿಲ್ಲಿಸೋದಿಲ್ಲ ಅಂತ ಹೋರಾಟಗಾರರು ಗುಡುಗಿದ್ದಾರೆ.
ಕೇಸು, ಲಾಠಿ ಏಠು ಒಂದಾ ಎರಡಾ.. ಜನಪರ ಹೋರಾಟಕ್ಕಾಗಿ ರೈತರು, ಸಾಮಾನ್ಯರು, ವಿವಿಧ ಸಂಘಟನೆಗಳು ಬೀದಿಗಿಳಿದು ಒಂದಿಲ್ಲಾ ಒಂದ್ ಹೋರಾಟ ಇನ್ನೂ ನಡೆಸ್ತಾನೆ ಇದ್ದಾರೆ. ಇದರ ಮಧ್ಯೆಯೇ ಹೇಗಾದ್ರೂ ಸರಿ ಪ್ರಶ್ನಿಸೋರನ್ನ, ಹೋರಾಟ ರೂಪಿಸೋರನ್ನ ಒಂದಿಲ್ಲ ಒಂದ್ರೀತಿಯಲ್ಲಿ ಹತ್ತಿಕ್ಕೋ ಷಡ್ಯಂತ್ರವೂ ನಡೀತಿದೆ ಅನ್ನೋ ಆಕ್ರೋಶ ಹೋರಾಟಗಾರರಲ್ಲಿದೆ. ಆದ್ರೇ ಒಂದಂತೂ ಸತ್ಯ, ಮಹದಾಯಿ ನೀರು ಹರಿಯೋವರೆಗೂ ಹೋರಾಟಗಾರರು ವಿರಮಿಸೋದಿಲ್ಲ ಅಂತ ಪಣ ತೊಟ್ಟಿರೋದು ಜನಪರ ಹೋರಾಟ ಬೆಂಬಲಿಸೋರ ಆತ್ಮಸ್ಥೈರ್ಯ ಹೆಚ್ತಿದೆ.
ವರದಿ : ಯಲ್ಲಪ್ಪ ಸೋಲಾರಗೊಪ್ಪ, TV5 ಹುಬ್ಬಳ್ಳಿ.
- Farmer Protest kannada news today Karnataka Chief Minister karnataka government karnataka news today karnataka politics latest karnataka news Mahadayi Mahadayi farmer mahadayi farmer protest Mahadayi horata mahadayi river Mahadevi fighters North Karnataka North Karnataka Water Protest tv5 kannada tv5 kannada live tv5 live tv5kannada news Water Protest