Top

ಹಂದ್ರಾಳ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ

ಹಂದ್ರಾಳ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ
X

ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ದಲಿತ ಯುವಕ ಹುಟ್ಟು ಹಬ್ಬದ ಬ್ಯಾನರ್ ಹಾಕಿರುವುದಕ್ಕೆ ಮೇಲ್ಜಾತಿ ಗುಂಪೊಂದು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ.

ನಿನ್ನೆ ಗ್ರಾಮದ ದೇವರಾಜ (23) ಎನ್ನುವ ದಲಿತ ಯುವಕನ ಹುಟ್ಟು ಹಬ್ಬವಿತ್ತು, ಹೀಗಾಗಿ ಗ್ರಾಮದ ತಮ್ಮ ಏರಿಯಾದಲ್ಲಿ ಬ್ಯಾನರ ಹಾಕಿಕೊಂಡಿದ್ದ. ಇದನ್ನು ಸಹಿಸದ ಕೆಲವು ಮೇಲ್ಜಾತಿ ಗುಂಪೊಂದು ಬ್ಯಾನರ್ ಹರಿದು ಹಾಕಿ, ದಲಿತರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ವೇಳೆ ಯುವಕ ದೇವರಾಜ ಹಾಗೂ ಚಂದ್ರಮ್ಮಗೆ ಸಣ್ಣಪುಟ್ಟ ಗಾಯವಾಗಿವೆ. ಒಬ್ಬ ದಲಿತ ಯುವಕ ಗ್ರಾಮದಲ್ಲಿ ಬ್ಯಾನರ ಹಾಕಿ ಹುಟ್ಟು ಹಬ್ಬ ಆರಿಸಿಕೊಳ್ಳುವುದು ಸರಿಯಲ್ಲ, ಇನ್ನೊಮ್ಮೆ ಹೀಗೆ ಹುಟ್ಟು ಹಬ್ಬ ಆಚರಿಸಬೇಡಾ ಎಂದು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಘಲಾಟೆ ಜೋರಾಗುತ್ತಿದ್ದಂತೆ ಘಟನೆ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಘಲಾಟೆ ತಡೆದಿದ್ದಾರೆ.

ಗ್ರಾಮದಲ್ಲಿ ಇದೀಗ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿದೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Next Story

RELATED STORIES