Top

ಭೀಮಾತೀರ ಹತ್ಯೆ ಪ್ರಕರಣ : ಸಿದ್ದಗೊಂಡಪ್ಪ ಪತ್ನಿ ಆತ್ಮಹತ್ಯೆ

ಭೀಮಾತೀರ ಹತ್ಯೆ ಪ್ರಕರಣ : ಸಿದ್ದಗೊಂಡಪ್ಪ ಪತ್ನಿ ಆತ್ಮಹತ್ಯೆ
X

ವಿಜಯಪುರ : ದಿನಕ್ಕೊಂದು ತೀರ್ವ ಕುತೂಹಲಕ್ಕೆ ಕಾರಣವಾಗಿರುವ, ಭೀಮಾತೀರದ ಹಂತಕರ ಪ್ರಕರಣ, ಇಂದು ಮತ್ತೊಂದು ಘಟನೆಗೆ ಸಾಕ್ಷಿಯಾಗಿದೆ.

ಭೀಮಾತೀರದ ಹಂತಕ ಗಂಗಾಧರ ಚಡಚಣ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ಜೈಲು ಸೇರಿರುವ ಆರೋಪಿ ಸಿದ್ದಗೊಂಡಪ್ಪ ಪತ್ನಿ, ಭೀಮಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಗೊಂಡನ ಪತ್ನಿ 32 ವರ್ಷದ ಕಾಂಚನಾ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ಕಳೆದ 10 ವರ್ಷದಿಂದ ಪತಿ ಸಿದ್ದಗೊಂಡಪ್ಪನಿಂದ ದೂರವಾಗಿ, ಮಹಾರಾಷ್ಟ್ರದ ಸೊಲ್ಲಾಪುರದ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದರು. ಜೊತೆಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರ, ಎರಡು ಕಿಡ್ನಿಗಳು ವಿಫಲವಾಗಿದ್ದವು. ಹೀಗಾಗಿ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂತಹ ಸಿದ್ದಗೊಂಡಪ್ಪ ಪತ್ನಿ ಕಾಂಚನ, ಇಂದು ಧೊಳಖೇಡ ಬಳಿಯ ಭೀಮಾನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES