ರೊಚ್ಚಿಗೆದ್ದು ಯುವಕರನ್ನು ತಿವಿದ ಎತ್ತು

X
TV5 Kannada29 Jun 2018 6:17 AM GMT
ಕಲಬುರಗಿ: ಕಾರ ಹುಣ್ಣಿಮೆ ವಿಶೇಷವಾಗಿ ಉತ್ತರಕರ್ನಾಟಕದ ಹಲವೆಡೆ ಎತ್ತಿಗೆ ಸಿಂಗಾರಗೊಳಿಸಿ, ನಾರು ಹರಿಯುವ ಸ್ಪರ್ಧೆ ಏರ್ಪಡಿಸಲಾಗುತ್ತೆ. ಎತ್ತಿನ ಬಂಡಿ ಸಿಂಗಾರಗೊಳಿಸಿ, ಓಟದ ಸ್ಪರ್ಧೆಗೆ ಎತ್ತನ್ನು ಸಜ್ಜುಗೊಳಿಸಲಾಗುತ್ತದೆ. ಹೀಗೆ ಸ್ಪರ್ಧೆ ನಡೆಯುವಾಗ ಎತ್ತು ಹಲವರಿಗೆ ತಿವಿದು ಗಾಯಗೊಳಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಮುಧೋಳದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಯುವಕರಿಗೆ ಎತ್ತು ತಿವಿದು ಗಾಯಗೊಳಿಸಿದೆ. ಶ್ರವಣ್, ಆನಂದ್ ಎಂಬುವರಿಗೆ ತಿವಿದು ಗಾಯಗೊಳಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
Next Story