ಕೆಣಕ್ಕಿದ್ದಕ್ಕೆ ಝಲಕ್ ತೋರ್ಸೇ ಬಿಡ್ತು ಎತ್ತು

X
TV5 Kannada29 Jun 2018 4:08 AM GMT
ರಾಯಚೂರು: ಕಾರ ಹುಣ್ಣಿಮೆ ಅಂಗವಾಗಿ ಉತ್ತರಕರ್ನಾಟಕದ ಹಲವೆಡೆ ಎತ್ತಿಗೆ ಸಿಂಗಾರಗೊಳಿಸಿ, ನಾರು ಹರಿಯುವ ಸ್ಪರ್ಧೆ ಏರ್ಪಡಿಸಲಾಗುತ್ತೆ. ಹೀಗೆ ಸಿಂಗರಿಸಿ, ನಾರು ಹರಿಯುವ ಸ್ಪರ್ಧೆಗೆ ಸಿದ್ಧಗೊಳಿಸಿದ್ದ ಎತ್ತನ್ನ ಕೆಣಕ್ಕಿದ್ದಕ್ಕೆ ಎತ್ತು ಯುವಕನಿಗೆ ತಿವಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ದಿನ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎತ್ತೊಂದಕ್ಕೆ ಸಿಂಗಾರಗೊಳಿಸಿ, ಪೈಪೋಟಿಗೆ ಸಿದ್ಧಗೊಳಿಸಲಾಗಿತ್ತು. ಇದೇ ಜೋಶ್ನಲ್ಲಿದ್ದ ಎತ್ತನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಎತ್ತಿನ ಮುಂದೆ ಯಂಕಪ್ಪ ಎಂಬುವವ ಏಕ್ ಬಾರ್ ಆಜಾ ಆಜಾ ಎಂಬ ಹಾಡಿಗೆ ಹೆಜ್ಜೆ ಹಾಕುತ್ತಿದ್ದ. ಹೆಜ್ಜೆ ಹಾಕುತ್ತ ಎತ್ತಿನ ಮುಖ ಮುಟ್ಟಿದ ಯಂಕಪ್ಪನ ಮಂಗನಾಟಕ್ಕೆ ರೊಚ್ಚಿಗೆದ್ದ ಎತ್ತು, ಆತನಿಗೆ ತಿವಿದಿದೆ. ಇನ್ನು ತಿವಿತಕ್ಕೊಳಗಾದ ಯುವಕ ಮುಜುಗರದಿಂದ ಮನೆಕಡೆ ಹೆಜ್ಜೆ ಹಾಕಿದ್ದಾನೆ. ಇದೀಗ ಎಲ್ಲೆಡೆ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Next Story