Top

ರೊಟ್ಟಿ ತಟ್ಟಿದ ಅಮೆರಿಕದ ರಾಯಭಾರಿ ನಿಕ್ಕಿ ಹಾಲೆ!

ರೊಟ್ಟಿ ತಟ್ಟಿದ ಅಮೆರಿಕದ ರಾಯಭಾರಿ ನಿಕ್ಕಿ ಹಾಲೆ!
X

ರೋಟಿ, ರೊಟ್ಟಿ, ಚಪಾತಿ.. ಇವೆಲ್ಲಾ ಮಾಡೋದು ವಿದೇಶಿಯರಿಗೆ ಬಿಡಿ ನಮ್ಮ ಸಿಟಿ ಹುಡುಗಿಯರಿಗೇ ಬರೋದಿಲ್ಲ. ಅಪ್ಪಿತಪ್ಪಿ ಒಂದು ದಿನ ಪ್ರಯೋಗ ಅಂತ ಮಾಡಿದರೂ ಫೇಸ್​ಬುಕ್​ನಿಂದ ಎಲ್ಲಾ ಕಡೆ ಪ್ರಚಾರ ಮಾಡಿಕೊಂಡು ಬರುತ್ತಾರೆ. ಅದರಲ್ಲೂ ಅಮೆರಿಕದ ರಾಯಭಾರಿಯಂತು ಉನ್ನತ ಹುದ್ದೆಯಲ್ಲಿರುವ ನಿಕ್ಕಿ ಹಾಲೆ ರೋಟಿ ಮಾಡಿದರು ಅಂದರೆ ಸುದ್ದಿಯಾಗದೇ ಇರುತ್ತಾ?

ಭಾರತ ಮತ್ತು ಅಮೆರಿಕ ನಡುವಿನ ಬಾಂಧ್ಯವ ವೃದ್ಧಿಸುವ ನಿಟ್ಟಿನಲ್ಲಿ ಭಾರತ ಪ್ರವಾಸ ಕೈಗೊಂಡಿರುವ ದೆಹಲಿಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.

ನಿಕ್ಕಿ ಹಾಲೆ, ಪಂಜಾಬ್ ಮೂಲದ ಸಿಖ್ಖ್ ಕುಟುಂಬ ಅಮೆರಿಕಕ್ಕೆ ವಲಸೆ ಹೋಗಿದ್ದು, ಅವರ ಕುಟುಂಬಕ್ಕೆ ನಿಕ್ಕಿ ಹಾಲೆ ಸೇರ್ಇದ್ದಾರೆ. ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿರುವ ನಿಕ್ಕಿ ಹಾಲೆ, ಸಿಖ್ ಸಮುದಾಯದ ಅತ್ಯಂತ ಮಹತ್ವದ ಗುರುದ್ವಾರವಾದ ಸಿಸ್ ಗಂಜ್ ಸಾಹಿಬ್ ಮಂದಿರಕ್ಕೆ ಭೇಟಿ ನೀಡಿದರು.

ಇಲ್ಲಿನ ಗುರುದ್ವಾರದ ಅಡುಗೆಮನೆಗೂ ಭೇಟಿ ನೀಡಿದ ನಿಕ್ಕಿ, ಚಪಾತಿ ಹಾಗೂ ರೋಟಿ ಮಾಡಿದರು. ಅಲ್ಲದೇ ಅಲ್ಲಿಗೆ ಭೇಟಿ ನೀಡಿದ ಭಕ್ತರಿಗೆ ಬಡಿಸಿದರು. ಈ ಮೂಲಕ ಸಿಖ್ ಸಂಪ್ರದಾಯವನ್ನು ಅನಸುರಿಸುವ ಮೂಲಕ ಆನಂದಿಸಿದರು.

Next Story

RELATED STORIES