ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾಕ್ಕೆ ಭರ್ಜರಿ ಜಯ
ಡಬ್ಲಿನ್ : ಸ್ಪಿನ್ನರ್ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲ್ದೀಪ್ ಯಾದವ್ ಅವರ ಮಾರಕ ದಾಳಿಯ ನೆರವಿನಿಂದ ಟೀಂ ಇಂಡಿಯಾ ಆತಿಥೇಯ ಐರ್ಲೆಂಡ್ ವಿರುದ್ಧ 76 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ 100ನೇ ಟಿ20 ಪಂದ್ಯವನ್ನ ಗೆದ್ದು ಸ್ಮರಣೀಯವಾಗಿರಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದ್ರು. ಈ ಜೋಡಿ ಮೊದಲು ಬರೋಬ್ಬರಿ 160 ರನ್ ಸೇರಿಸಿತು. ಶಿಖರ್ ಧವನ್ ಅರ್ಧ ಶತಕ ಬಾರಿಸಿ 74 ರನ್ ಗಳಿಸಿದ್ದಾಗ ಓ ಬ್ರಿಯಾನ್ ಎಸೆತದಲ್ಲಿ ಥಾಮ್ಸನ್ಗೆ ಕ್ಯಾಚ್ ನೀಡಿ ಹೊರ ನಡೆದ್ರು. ಅಬ್ಬರದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 97 ರನ್ ಗಳಾಗಿದ್ದಾಗ ಚೇಸ್ ಎಸೆತದಲ್ಲಿ ಬೌಲ್ಡ್ ಆಗಿ ಶತಕ ಬಾರಿಸುವ ಅವಕಾಶದಿಂದ ವಂಚಿತರಾದ್ರು . ಕೊನೆಗೆ ಟೀಂ ಇಂಡಿಯಾ ನಿಗದಿತ ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.
209 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಐರ್ಲೆಂಡ್ ಚಾಹಲ್ ಮತ್ತು ಕುಲ್ದೀಪ್ ದಾಳಿಗೆ ತತ್ತರಿಸಿತು. ಆರಂಭಿಕ ಬ್ಯಾಟ್ಸ್ ಮನ್ ಜೇಮ್ಸ್ ಶಾನಾನ್ 60 ರನ್ ಬಾರಿಸಿದ್ದು ಬಿಟ್ಟರೇ ತಂಡದ ಬೇರ್ಯಾವ ಬ್ಯಾಟ್ಸ್ ಮನ್ಗಳು 15 ರನ್ಗಳ ಗಡಿ ದಾಟಲಿಲ್ಲ. ಐರ್ಲೆಂಡ್ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 132 ರನ್ ಮಾತ್ರ ಗಳಿಸುವಲ್ಲಿ ಮಾತ್ರ ಶಕ್ತವಾಯಿತು.