Top

ಶ್ರೀರಾಮುಲು ಗ್ರಾಮ ವಾಸ್ತವ್ಯ : ಕ್ಷೇತ್ರದ ಒಳಿತಿಗೆ ಪ್ರಾರ್ಥನೆ

ಶ್ರೀರಾಮುಲು ಗ್ರಾಮ ವಾಸ್ತವ್ಯ : ಕ್ಷೇತ್ರದ ಒಳಿತಿಗೆ ಪ್ರಾರ್ಥನೆ
X

ಚಿತ್ರದುರ್ಗ : ಐತಿಹಾಸಿಕ ಹಿನ್ನಲೆಯ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಶಾಶ್ವತ ಬರದನಾಡೆಂಬ ಹೆಗ್ಗಳಿಕೆಯುಳ್ಳ ಶಾಪಗ್ರಸ್ಥ ತಾಲ್ಲೂಕು ಮೊಳಕಾಲ್ಮೂರು ಕ್ಷೇತ್ರದ ನೆಲಗೇತನಟ್ಟಿಯ ದಲಿತರ ಕಾಲೋನಿಯ ದುರುಗಪ್ಪ ಮಂಜುಳಮ್ಮನವರ ಮನೆಯಲ್ಲಿ ಶಾಸಕ ಶ್ರೀ ರಾಮುಲು ನಿನ್ನೆ ರಾತ್ರಿ ಗ್ರಾಮ ವಾಸ್ತವ್ಯ ಹೂಡಿದ್ರು.

ಮುಂಜಾನೆ ಎದ್ದಾಕ್ಷಣ ನಸುಗತ್ತಲಲ್ಲೇ ವಾಯುವಿಹಾರ ಮುಗಿಸಿ, ಯೋಗಾ, ಪ್ರಾಣಾಯಾಮ ಮಾಡುವಮೂಲಕ ದಿನಚರಿ ಅಸರಂಬಿಸಿದ ಶಾಸಕ ಶ್ರೀರಾಮುಲು, ದುರುಗಪ್ಪ ದಂಪತಿಗಳ ನೇತೃತ್ವದಲ್ಲಿ ಗುಡಿಸಲಿನಲ್ಲೇ ಪೂಜಾ ಕೈಂಕಾರ್ಯ ನೆರವೇರಿಸಿದ್ದೂ, ದಂಪತಿಗಳಿಗೆ ಸೀರೆ ಕುಪ್ಪಸ ಸೇರಿದಂತೆ ಇತರೆ ಸಾಮಾಗ್ರಿಗಳನ್ನೊಳಗೊಂಡ ಬಾಗಿಣ ನೀಡಿ ಆಶೀರ್ವಾದಿಸಿದರು. ಆಗ ಕಡು ಬಡ ದಂಪತಿಗಳು ಅವರ ನಡೆ ನುಡಿ ಕಂಡು ಭಾವಪರವಶರಾದರು

ವಾಸ್ತವ್ಯದ ಬಳಿಕ ಕೆಲ ಗ್ರಾಮಗಳಿಗೂ ಭೇಟಿ ನೀಡಿ ಅಹವಾಲು ಸ್ವೀಕರಿಸಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಶ್ರೀರಾಮುಲು ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ನಿರಂತರವಾಗಿ ಐದು ವರ್ಷ ನಡೆಯಲಿದೆ.ಈ ರಾಜ್ಯದ ಏಳಿಗಾಗಿ ಜನ ನೀಡಿದ್ದ ಜನಾದೇಶವನ್ನ ಗಾಳಿಗೆ ತೂರಿ ಆಡಳಿತಕ್ಕೆ ಬಂದಿರೋ ರಾಜ್ಯದ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಬೆಂಗಳೂರು ಬಿಟ್ಟು ಹೊರಗೆ ಬರುತ್ತಿಲ್ಲ ಅವರಿಗೆ ಕುರ್ಚಿ ಬಿಟ್ಟು ಹೋದರೆ ಸಿಎಂ ಸ್ಥಾನ ಕಳೆದುಕೊಳ್ಳುವ ಭೀತಿ ಅವರನ್ನು ಕಾಡುತ್ತಿದೆ. ಹೀಗಾಗಿ ಕುರ್ಚಿ ಉಳಿಸಿಕೊಳ್ಳುವ ಭರಾಟೆಯಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ರೈತರ ಸಾಲ ಮನ್ನಾ ವಾಗ್ದಾನವನ್ನು ಮರೆತಿದ್ದಾರೆ ಎಂದರು.

ಈ ರಾಜ್ಯ ಸಮ್ಮಿಶ್ರ ಸರ್ಕಾರ ನಿಷ್ಕ್ರಿಯಗೊಂಡಿದೆ ರಾಜ್ಯದ ಜನರ ಗೋಳು ಹಾಗು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಜೊತೆಗೆ ಅವರಿಗೆ ಬೇಕಾಗಿರುವುದು ಕೇವಲ ವರ್ಗಾವಣೆ ದಂಧೆಯಷ್ಟೇ ಹೊರೆತು ಈ ಸರ್ಕಾರದಲ್ಲಿ ಬಡವರ ಕಳಕಳಿ ಬಿಟ್ಟು ದುಡಿಯಲು ಕುಳಿತಿದ್ದಾರೆ ಅಂತ ಆರೋಪಿಸಿದರು.ಜೊತೆಗೆ ನಾವು ವಿರೋಧಪಕ್ಷದಲ್ಲಿದ್ದೂ ಸುಮ್ಮನೆ ಕೂರಲ್ಲ ಬದಲಾಗಿ ಈ ನಿಷ್ಕ್ರಿಯ ಸರ್ಕಾರದ ಕಿವಿಹಿಂಡಿ ಜನಪರ ಕೆಲಸಕ್ಕೆ ಸೂಚಿಸುತ್ತೇವೆ ರೈತರ ಸಾಲಮನ್ನಾ ಮಾಡಲು ಸಮ್ಮಿಶ್ರ ಸರ್ಕಾರವನ್ನು ಆಗ್ರಹಿಸುತ್ತೇವೆ. ಒಂದು ವೇಳೆ ಸಾಲಮನ್ನಾ ಮಾಡದಿದ್ದರೆ ವಿಧಾನಸೌಧ ಒಳಗೆ -ಹೊರಗೆ ಹೋರಾಟ ಮಾಡುತ್ತೇವೆಂದು ಸರ್ಕಾರಕ್ಕೆ ಇದೇ ವೇಳೆ ಎಚ್ಚರಿಸಿದ್ರು.

ಇದೇ ವೇಸಮ್ಮಿಶ್ರ ಸರ್ಕಾರದ ಮೈತ್ರಿ ಬಗ್ಗೆ ಕಿಡಿಕಾರಿದ ಅವರು ಜೆಡಿಎಸ್- ಕಾಂಗ್ರೆಸ್ ಚುನಾವಣ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಅವರು ಬಿಜೆಪಿಗೆ ಅಧಿಕಾರದಿಂದ ದೂರ ಹಿಡಲು ಸಡನ್ನಾಗಿ ತೆಗೆದುಕೊಂಡ ನಿರ್ಧಾರವಾಗಿದೆ. ಬಿಜೆಪಿಗೆ ಅಧಿಕಾರ ತಪ್ಪಿಸಲು ಕಾಂಗ್ರೆಸ್ ಜೆಡಿಎಸ್ ಮಾಡಿಕೊಂಡಿರೋ ಮೈತ್ರಿಯಲ್ಲಿ ಸಾಕಷ್ಟು ಗೊಂದಲವಿದ್ದೂಬಜೆಟ್ ವಿಷಯದಲಿ ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಆಂತರಿಕ ಕಲಹ ದೊಡ್ಡಮಟ್ಟದಲ್ಲಿ ಹೆಚ್ಚಿದೆ.ಹೀಗಾಗಿ ಸಮ್ಮಿಶ್ರ ಸರ್ಕಾರ ಅಸ್ಥಿರಗೊಂಡರೆ ಏನಾಗುತ್ತೋ ಗೊತ್ತಿಲ್ಲ ಈಗಾಗಲೇ ಕೆಲವು ಸ್ವತಂತ್ರ ಅಬ್ಯರ್ಥಿಗಳು ಕೂಡ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಅಂತ ಬಾಂಬ್ ಸಿಡಿಸಿದ್ದಾರೆ

ಒಟ್ಟಾರೆ‌ ಶತಾಯಗತಾಯ ಬಿಜೆಪಿ ಅಧಿಕಾರಕ್ಕೆ ತಂದು ಬಿಎಸ್ ವೈ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಹೆಗಲಿಗೆ ಟೊಂಕ ಕಟ್ಟಿಕೊಂಡು ರಾಜ್ ಸುತ್ತಿದ್ದ ಶಾಸಕರಾಮುಲು ಮೊಳಕಾಲ್ಮುರು ಕ್ಷೇತ್ರದಲ್ಲಿ ತಮ್ಮ. ವರ್ಚಸ್ಸನ್ನು ಗಟ್ಟಿಯಾಗಿಸಿಕೊಳ್ಳಲು ಹರಸಾಹಸ ಪಡುತಿದ್ದಾರೆ.ಹೀಗಾಗಿ ದಲಿತರ‌ಮನೆಯಲ್ಲಿ ವಾಸ್ತವ್ಯ ಹೂಡಿ,ಭೋಜನ ಸವಿದು,ಗುಡಿಸಲಿನಲ್ಲಿಯೇ ಮಾಡಿರೋ ಲಿಂಗಪೂಜೆ ಎಷ್ಟರಮಟ್ಟಿಗೆ ವರವಾಗಲಿದೆ ಅನ್ನೋದನ್ನ ಕಾದುನೋಡಬೇಕಿದೆ

ವರಿದಿ : ವೀರೇಶ್ ವಿ ಚಳ್ಳಕೆರೆ, ಟಿವಿ5 ಚಿತ್ರದುರ್ಗ

Next Story

RELATED STORIES