Top

ಜಗತ್ತಿನಲ್ಲೇ ಅತ್ಯಂತ ಆಕರ್ಷಕ ಮಹಿಳೆ ಪ್ರಿಯಾಂಕ

ಜಗತ್ತಿನಲ್ಲೇ ಅತ್ಯಂತ ಆಕರ್ಷಕ ಮಹಿಳೆ ಪ್ರಿಯಾಂಕ
X

ನವದೆಹಲಿ: ಬಾಲಿವುಡ್​ನಿಂದ ಹಾಲಿವುಡ್ ಅಂಗಳಕ್ಕೆ ಜಿಗಿದು ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ನಟಿ ಪ್ರಿಯಾಂಕ ಮುಡಿಗೆ ಮತ್ತೊಂದು ಗರಿ ಏರಿದೆ. ಮ್ಯಾಕ್ಸಿಮ್ ಇಂಡಿಯಾ ಮ್ಯಾಗಜಿನ್ ನಡೆಸಿದ ಜಗತ್ತಿನ ಅತ್ಯಂತ ಹಾಟ್ (ಆಕರ್ಷಕ) ಮಹಿಳೆಯರಲ್ಲಿ ಪ್ರಿಯಾಂಕ ಅಗ್ರಸ್ಥಾನ ಪಡೆದಿದ್ದಾರೆ. ಇದು ಸತತ 5 ಬಾರಿ ಅವರಿಗೆ ಲಭಿಸಿರುವ ಗೌರವ ಎಂಬುದು ಮತ್ತೊಂದು ವಿಶೇಷ.

ಜಗತ್ತಿನ 100 ಆಕರ್ಷಕ ಮಹಿಳೆಯರ ಸಮೀಕ್ಷೆಯಲ್ಲಿ ಪ್ರಿಯಾಂಕ ನಂ.1 ಸ್ಥಾನ ಪಡೆದಿದ್ದಾರೆ. ಹೀಗಾಗಿ ಪತ್ರಿಕೆ ತನ್ನ ಮುಖಪುಟದಲ್ಲಿ ಪ್ರಿಯಾಂಕ ಶ್ವೇತವಸ್ತ್ರಧಾರಿಯಾಗಿ ಹಾಟ್ ಆಗಿ ನಿಂತಿರುವ ಫೋಟೋ ಪ್ರಕಟಿಸಿ ಗೌರವ ನೀಡಿದೆ.

ಹೌದು, ಪ್ರಿಯಾಂಕಾ ಚೋಪ್ರಾ ಐದನೇ ಬಾರಿಗೆ ವಿಶ್ವದ ಹಾಟೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತಿದ್ದಾರೆ.

ಪ್ರಿಯಾಂಕಾ ಚೋಪ್ರಾ ತೊಟ್ಟ ಬಿಳಿಯ ಸ್ಟಿವ್ ಸೂಟ್ ಮ್ಯಾಕ್ಸಿಮ್ ಇಂಡಿಯಾ ಮ್ಯಾಗಜಿನ್ ನ ಕವರ್ ಪೇಜ್ ಗೆ ಸೆಲೆಕ್ಟ್ ಆಗಿದೆ. ಈ ಪತ್ರಿಕೆಯ ಮುಖಪುಟಕ್ಕೆ ವಿಶ್ವದ ಸುಮಾರು 100 ಸುಂದರಿಯರು ರೇಸ್ ನಲ್ಲಿದ್ದರು. ಆದರೆ ಇವರೆಲ್ಲರನ್ನು ಪ್ರಿಯಾಂಕಾ ಹಿಂದಿಕ್ಕಿದ್ದಾರೆ.

Next Story

RELATED STORIES