Top

ಕಚೇರಿಯಲ್ಲಿ ಪುಲ್ ಗುಂಡು ತುಂಡು ಪಾರ್ಟಿ...!

ಕಚೇರಿಯಲ್ಲಿ ಪುಲ್ ಗುಂಡು ತುಂಡು ಪಾರ್ಟಿ...!
X

ಯಾದಗಿರಿ : ಸಾರ್ವಜನಿಕರ ಸೇವೆ ಮಾಡಿ ಆಂತ ಅಧಿಕಾರಿಗಳಿಗೆ ಆಫೀಸ್‌ ಕೊಟ್ರೆ, ಗುಂಡು ತುಂಡಿನ ಪಾರ್ಟಿ ಮಾಡಿ ಎಂಜಾಯ್‌ ಮಾಡಿದ ಘಟನೆ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಾರಾಯಣಪುರದಲ್ಲಿ ನಡೆದಿದೆ.

ಇಲ್ಲಿನ ಸಹಾಯಕ ಇಂಜಿನಿಯರ್ ಕಛೇರಿಯಲ್ಲಿ, ಕಳೆದ ರಾತ್ರಿ, ಅಧಿಕಾರಿಗಳು, ಆಫೀಸ್‌ನಲ್ಲಿ ಭರ್ಜರಿ ಗುಂಡು ತುಂಡು ಪಾರ್ಟಿ ಮಾಡಿದ್ದು, ನಮ್ಮ ಟಿವಿ5 ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಯಾವುದೇ ಬಾರ್‌ ಅಂಡ್‌ ರೆಸ್ಟೋರೆಂಟ್‌ಗೂ ಕಡಿಮೆ ಇಲ್ಲವೇನೋ ಅನ್ನೋ ಹಾಗೇ ಸಹಾಯಕ ಇಂಜಿನೀಯರ್ ಕಛೇರಿಯಲ್ಲಿ ಅಧಿಕಾರಿಗಳು ಪಾರ್ಟಿ ಮಾಡಿದ್ದಾರೆ.

ಅಂದಹಾಗೇ ಈ ಪಾರ್ಟಿ ಯಾಕ್ ಮಾಡಿದ್ರಿ ಅಂತ, ಪಾರ್ಟಿ ಮಾಡ್ತಾ ಇದ್ದವರನ್ನು ಕೇಳಿದ್ರೇ, ಒಬ್ಬರು ನಿವೃತ್ತಿ ಆಗಿದ್ದಾರೆ. ಅವರಿಗೆ ಬೀಳ್ಕೊಡುಗೆ ಕೊಡೋಕೆ ಹೀಗೆ ಪಾರ್ಟಿ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ರು. ಆದ್ರೇ, ವೈಯಕ್ತಿಕವಾಗಿ ಪಾರ್ಟಿ ಮಾಡೋದಕ್ಕೇ, ಸರ್ಕಾರಿ ಕಛೇರಿ ಬಳಸಿಕೊಂಡಿದ್ದು ಎಷ್ಟು ಸರಿ.? ಅಲ್ಲದೇ ಆಫೀಸ್‌ನಲ್ಲೇ ಗುಂಡು ತುಂಡಿನ ಪಾರ್ಟಿ ಮಾಡಿದ್ದು ಸರಿಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ನಾರಯಣಪುರ ಸಹಾಯಕ ಇಂಜಿನಿಯರ್ ಕಛೇರಿಯನ್ನೇ, ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಂಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ : ಬಾಳಗೌಡ ಪಾಟೀಲ್, ಟಿವಿ5 ಯಾದಗಿರಿ

Next Story

RELATED STORIES