Top

ಶಾಸಕರ ಹಕ್ಕು ಮೊಟಕಿಗೆ ಆಯನೂರು ಮಂಜುನಾಥ್ ವಿರೋಧ

ಶಾಸಕರ ಹಕ್ಕು ಮೊಟಕಿಗೆ ಆಯನೂರು ಮಂಜುನಾಥ್ ವಿರೋಧ
X

ಶಿವಮೊಗ್ಗ : ಹೊಸ ಸರ್ಕಾರದಲ್ಲಿ ಎಲ್ಲಾ ಶಾಸಕರ ಹಕ್ಕನ್ನು ಮೊಟುಕುಗೊಳಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ದೂರಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನ ೨ ರಿಂದ ಪ್ರಾರಂಭವಾಗಲಿದೆ. ರಾಜ್ಯಪಾಲರು ಅನುಮತಿ ನೀಡಿದ ನಂತರ ಎಲ್ಲಾ ಶಾಸಕರಿಗೆ ಸಮನ್ಸ್ ಜಾರಿಯಾಗುತ್ತದೆ. ಆದರೆ, ಕುಮಾರಸ್ವಾಮಿಯವರ ದಕ್ಷ ಆಡಳಿತದಲ್ಲಿ ಯಾರಿಗೂ ಸಮನ್ಸ್ ಬಂದಿಲ್ಲ. ಜೊತೆಗೆ ಕಲಾಪದ ಬಗ್ಗೆ ಯಾವುದೇ ವೇಳಾಪಟ್ಟಿ, ಪ್ರಶ್ನೋತ್ತರದ ಬಗ್ಗೆ ಶಾಸಕರಿಗೆ ಮಾಹಿತಿಯೇ ಬಂದಿಲ್ಲ. ಸರ್ಕಾರಕ್ಕೆ ಪ್ರಶ್ನೆಗಳನ್ನು ಕಳುಹಿಸಲು ಅವಕಾಶ ಇಲ್ಲದಂತಾಗಿದ್ದು, ಹೊಸ ಸರ್ಕಾರದಲ್ಲಿ ಎಲ್ಲಾ ಶಾಸಕರ ಹಕ್ಕನ್ನು ಮೊಟುಕುಗೊಳಿಸಲಾಗಿದೆ ಎಂದು ಟೀಕಿಸಿದರು.

ಇನ್ನೂ ಮುಂದುವರೆದು ಮಾತನಾಡಿದ ಆಯನೂರು ಮಂಜುನಾಥ್​, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯರ ಪ್ರತಿಷ್ಟೆಯ ಪ್ರಶ್ನೆಯಿಂದಾಗಿ ಹೀಗಾಗುತ್ತಿದೆ. ಬಜೆಟ್ ಮಂಡನೆ ಮಾಡುತ್ತೀನೋ ಇಲ್ಲವೋ ಎಂಬ ಸಂಶಯ ಕುಮಾರಸ್ವಾಮಿ ಅವರಿಗಿದೆ. ಅಧಿವೇಶನದಲ್ಲಿ ಜನರ ಸಮಸ್ಯೆಗಳ ಚರ್ಚೆಗೆ ಅವಕಾಶ ಬೇಕಿದ್ದು, 10 ದಿನಗಳ ಬದಲಾಗಿ ಅದಿವೇಶನವನ್ನು 15 ದಿನಗಳ ಕಾಲ ವಿಸ್ತರಿಸಲು ಒತ್ತಾಯಿಸಿದರು.

Next Story

RELATED STORIES