Top

ಆರಂಭವಾಗದ ಭತ್ತ ಖರೀದಿ ಕೇಂದ್ರ : ಸಂಕಷ್ಟದಲ್ಲಿ ಅನ್ನದಾತ

ಆರಂಭವಾಗದ ಭತ್ತ ಖರೀದಿ ಕೇಂದ್ರ : ಸಂಕಷ್ಟದಲ್ಲಿ ಅನ್ನದಾತ
X

ಮಂಡ್ಯ : ಸಕ್ಕರೆಯ ನಾಡೆಂದೇ ಕರೆಯಲ್ಪಡುವ ಮಂಡ್ಯದಲ್ಲಿ, ಕಬ್ಬು ಮತ್ತು ಭತ್ತಕ್ಕೆ ಫೇಮಸ್ ಆದ ಪ್ರದೇಶ. ಇಲ್ಲಿನ ರೈತರು ಎಥೆಚ್ಚವಾಗಿ ಈ ಎರಡು ಬೆಳೆಗಳನ್ನ ಬೆಳಿತಾರೆ. ಆದ್ರೆ ಸರ್ಕಾರವನ್ನ ನಂಬಿ ಭತ್ತ ಬೆಳೆದ ಮಂಡ್ಯ ಜಿಲ್ಲೆಯ ಅನ್ನದಾತರು ಈಗ ಸಂಕಷ್ಟಕ್ಕೀಡಾಗಿದ್ದಾರೆ. ಏಕೆಂದ್ರೆ ಜಿಲ್ಲೆಯಲ್ಲಿ ಇನ್ನೂ ಸಹ ಭತ್ತ ಖರೀದಿ ಕೇಂದ್ರ ಆರಂಭವಾಗಿಲ್ಲ.

ಕೃಷಿ ಮಾಡಲು ಸಮರ್ಪಕ ನೀರಿಲ್ಲದೇ, ಮಾಡಿದ ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯ ಜಿಲ್ಲೆಯ ರೈತರಿಗೆ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ತುಂಬುತ್ತಿರುವುದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದೆ. ಆದ್ರೆ ಈಗಾಗಲೇ ರೈತರು ಬೆಳೆದಿರುವ ಕಬ್ಬನ್ನು ಕಾರ್ಖಾನೆ ಮತ್ತು ಆಲೆಮನೆಗೆ ಹಾಕುತ್ತಿದ್ದರೆ ಮತ್ತಷ್ಟು ಮಂದಿ ರೈತರು ಭತ್ತವನ್ನ ಬೆಳೆದಿದ್ದಾರೆ. ಆದ್ರೆ ಭತ್ತವನ್ನು ಎಲ್ಲಿಗೆ ಕೊಡೋದು ಅನ್ನೋ ಪ್ರಶ್ನೆ ಇದೀಗ ರೈತರಲ್ಲಿ ಆರಂಭವಾಗಿದೆ. ಈ ಬಾರಿ ಸಮರ್ಪಕ ಮಳೆಯಾದ ಹಿನ್ನಲೆಯಲ್ಲಿ ಭತ್ತದ ಬೆಳೆ ರೈತರನ್ನ ಕೈಹಿಡಿದಿದೆ.

ಭತ್ತ ಕುಯಿಸಿ, ಸಿದ್ದಪಡಿಸಿಕೊಂಡಿರುವ ರೈತರು ಅದನ್ನು ಎಲ್ಲಿಗೆ ಸರಬರಾಜು ಮಾಡಬೇಕೆಂಬ ದಿಕ್ಕು ತೋಚನೆ ಕಂಗಾಲಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭ ಮಾಡಿಲ್ಲ. ಖರೀದಿ ಕೇಂದ್ರ ಆರಂಭವಾದರೆ ರೈತರು ಅಲ್ಲಿಗೆ ಭತ್ತ ಸರಬರಾಜು ಮಾಡಿ ಹಣ ಪಡೆದುಕೊಳ್ಳುತ್ತಿದ್ದರು. ಇದೀಗ ಕೇಂದ್ರ ಆರಂಭವಾಗದ ಹಿನ್ನಲೆಯಲ್ಲಿ ಇದನ್ನೇ ಬಂಡವಾಳ ಮಾಡಿಕೊಳ್ಳೋ ಭತ್ತದ ರೈಸ್ ಮಿಲ್ ಮಾಲೀಕರು ಅತಿ ಕಡಿಮೆ ಬೆಲೆಗೆ ರೈತರ ಭತ್ತವನ್ನ ಕೇಳುತ್ತಾರೆ. ರೈಸ್ ಮಿಲ್ ಗೆ ಭತ್ತ ಮಾರಾಟ ಮಾಡಿದ್ರೆ ರೈತರಿಗೆ ಯಾವ ಲಾಭವೂ ಸಿಗೊಲ್ಲ. ಇದು ಅನ್ನತದಾರನ್ನ ಚಿಂತೆಗೀಡು ಮಾಡಿದೆ.

ವಾಡಿಕೆಯಂತೆ ರೈತರಿಗೆ ಭತ್ತ ಕಟಾವಾದ ತಕ್ಷಣವೇ ಸರ್ಕಾರ ಅಥವಾ ಕೃಷಿ ಇಲಾಖೆ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ಕಬ್ಬು ಬೆಳೆಗಾರರಿಗೇನೋ ಸಕ್ಕರೆ ಕಾರ್ಖಾನೆ ಸಾಕಷ್ಟಿವೆ. ಆದ್ರೆ ಭತ್ತ ಬೆಳಗೆಗಾರರು ಖರೀದಿ ಕೇಂದ್ರವನ್ನೇ ನಂಬಿರುತ್ತಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ಚರ್ಚೆ ನಡೆಸಿದ್ದು, ಶೀಘ್ರವೇ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭ ಮಾಡಲಾಗುವುದು ಅಂತಾರೆ.

ಒಟ್ಟಾರೆ ಜಿಲ್ಲೆಯ ರೈತರ ಸಮಸ್ಯೆಯನ್ನ ಅರ್ಥ ಮಾಡಿಕೊಂಡು ಸರ್ಕಾರ ಈ ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂಬುದು ನಮ್ಮ ಒತ್ತಾಯ ಕೂಡ.

ವರದಿ : ಎಂ.ಕೆ.ಮೋಹನ್ ರಾಜ್, ಟಿವಿ5 ಮಂಡ್ಯ

Next Story

RELATED STORIES