Top

ಶ್ರೀದೇವಿ ಮಗಳ ಕುಣಿತ ನೋಡಲು ಮುಗಿಬಿದ್ದ ಜನ

ಶ್ರೀದೇವಿ ಮಗಳ ಕುಣಿತ ನೋಡಲು ಮುಗಿಬಿದ್ದ ಜನ
X

ಧಡಕ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ದಿವಂಗತ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಹಾಕಿರುವ ಭರ್ಜರಿ ಸ್ಟೆಪ್ಸ್ ಈಗ, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ನಿನ್ನೆಯಷ್ಟೆ ಧಡಕ್​ ಚಿತ್ರದ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಹಾಡಿನಲ್ಲಿ ನಾಯಕ ಇಶಾನ್​, ನಾಯಕಿ ಜಾಹ್ನವಿ ಇಬ್ಬರು ಸಖತ್​ ಸ್ಟೆಪ್ಸ್​​ ಹಾಕಿದ್ದಾರೆ. ಒಂದೇ ರಾತ್ರಿಯಲ್ಲೇ ಚಿತ್ರದ ಹಾಡು ಟಾಪ್​ ಟ್ರೆಂಡಿಂಗ್​ನ ಲಿಸ್ಟ್​ ಸೇರಿದೆ.

ಧಡಕ್​ ಚಿತ್ರದ ಟ್ರೈಲರ್​ ಈಗಾಗಲೇ ಯುಟ್ಯೂಬ್​ನ್​ ಟ್ರೆಂಡಿಂಗ್​ ಲೀಸ್ಟ್​ನಲ್ಲಿದೆ. ಜಾಹ್ನವಿ ಕಪೂರ್​ ಮೊದಲ ಚಿತ್ರ ಇದಾಗಿದ್ದು ಮರಾಠಿ ಭಾಷೆಯ ಸೈರಾಟ್​ ಚಿತ್ರದ ರೀಮೇಕ್​ ಇದು. ಒಂದೆಡೆ ಚಿತ್ರದ ಟ್ರೈಲರ್​ ಟಾಪ್​ ಟ್ರೆಂಡಿಂಗ್​ನಲ್ಲಿ ಇದ್ರೆ ಮತ್ತೊಂದೆಡೆ ಜಾಹ್ನವಿ ಕಪೂರ್​ ಡ್ಯಾನ್ಸ್​ ನೋಡಿ ಪ್ರೇಕ್ಷಕರರು ಫುಲ್​ ಫಿದಾ ಆಗಿದ್ದಾರೆ.ಕರಣ್​ ಜೋಹರ್​ ನಿರ್ದೇಶನದ ಈ ಚಿತ್ರ ಇದೇ ಜುಲೈ 20ಕ್ಕೆ ತೆರೆಗೆ ಬರಲಿದೆ.

Next Story

RELATED STORIES