Top

ಚಿಕ್ಕಮಗಳೂರಿನ ಹೆಬ್ಬಾಳೆ ಸೇತುವೆ ಬಂದ್ : ವಾಹನ ಸವಾರರ ಪರದಾಟ

ಚಿಕ್ಕಮಗಳೂರಿನ ಹೆಬ್ಬಾಳೆ ಸೇತುವೆ ಬಂದ್ : ವಾಹನ ಸವಾರರ ಪರದಾಟ
X

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮೂಡಿಗೆರೆ ತಾಲೂಕಿನ ಕಳಸ, ಕುದುರೆಮುಖ ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಕಳಸ-ಹೊರನಾಡು ಸಂಪರ್ಕ ಸೇತುವೆಯಾದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಳೆದ 15 ದಿನಗಳಲ್ಲಿ ಇದು ಎರಡನೇ ಬಾರಿ ಮುಳುಗಡೆಯಾಗಿದ್ದು, ಈ ಭಾಗದ ಸಂಪರ್ಕ ಕಡಿತಗೊಂಡಿದೆ. ವಾಹಸ ಸವಾರರು, ಪ್ರವಾಸಿಗರು, ಸೇತುವೆಯ ಎರಡೂ ಬದಿಯಲ್ಲಿ ನೀರು ನಿಲ್ಲುವುದಕ್ಕಾಗಿ ಕಾದುನಿಂತಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಮಳೆಗೆ ಸೇತುವೆಯ ತಡೆಗೋಡೆಗಳು ಮುರಿದು ಬಿದ್ದಿದ್ದು, ರಸ್ತೆ ಮಧ್ಯೆಯಲ್ಲೇ ಸೇತುವೆ ಗುಂಡಿ ಬಿದ್ದು, ಎಡ್ಜ್ ಕೂಡ ಮುರಿದಿತ್ತು. ಈಗ ಧಾರಾಕಾರವಾಗಿ ಸುರಿಯುತ್ತಿರೋ ಮಳೆಗೆ ಮತ್ತೆ ಸೇತುವೆ ಮುಳುಗಡೆಯಾಗಿದೆ.

1992ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ್ದ ಈ ಸೇತೆವೆಗೆ ತಡೆಗೋಡೆಗಳು ಇರಲಿಲ್ಲ. ಸೇತುವೆ ತೀರಾ ಕೆಳಮಟ್ಟದಲ್ಲಿರೋದ್ರಿಂದ ಭದ್ರಾ ನದಿ ಈ ಬಾರೀಗೆ ಮಳೆಯಾದೊಡೆ ಸೇತುವೆ ಮುಳುಗಡೆಯಾಗುತ್ತೆ. ಅಂದಿನಿಂದಲೂ ಸೇತುವೆ ಎತ್ತರಿಸಿ, ತಡೆಗೋಡೆ ನಿರ್ಮಿಸಿ ಅಂತಾ ಸ್ಥಳಿಯರು ಸರ್ಕಾರಕ್ಕೆ ಒತ್ತಾಯಿಸಿದ್ರು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

Next Story

RELATED STORIES