Top

ಫಿಫಾ ವಿಶ್ವಕಪ್: ಕೊಲಂಬಿಯಾ, ಪೋಲೆಂಡ್​ ಜಯ

ಫಿಫಾ ವಿಶ್ವಕಪ್:  ಕೊಲಂಬಿಯಾ, ಪೋಲೆಂಡ್​ ಜಯ
X

ಕೊಲಂಬಿಯಾ ಮತ್ತು ಪೋಲೆಂಡ್​ ತಂಡಗಳು ಏಕೈಕ ಗೋಲುಗಳಿಂದ ಫಿಫಾ ವಿಶ್ವಕಪ್ ಲೀಗ್​ನ ಅಂತಿಮ ಪಂದ್ಯಗಳಲ್ಲಿ ಜಯ ದಾಖಲಿಸಿದವು.

ಗುರುವಾರ ನಡೆದ ಪಂದ್ಯದಲ್ಲಿ ಕೊಲಂಬಿಯಾ ತಂಡ 1-0ಯಿಂದ ಸೆನಗಲ್ ತಂಡವನ್ನು ಹಾಗೂ ಪೋಲೆಂಡ್ ತಂಡ 1-0ಯಿಂದ ಜಪಾನ್ ತಂಡವನ್ನು ಸೋಲಿಸಿದವು.

ಕೊಲಂಬಿಯಾ ತಂಡದ ಪರ ಯೆರ್ರಿ ಮಿನಾ (74ನೇ ನಿಮಿಷ) ಪಂದ್ಯದ ಏಕೈಕ ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಕೊಲಂಬಿಯಾ ಪರ ಜಾನ್ ಬೆಡ್ನರೆಕ್ (59ನೇ ನಿಮಿಷ) ಗೋಲು ಬಾರಿಸಿದರು.

ಪೋಲೆಂಡ್ ವಿರುದ್ಧ ಸೋತರೂ ಜಪಾನ್ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಕೊಲಂಬಿಯಾ ತಂಡ ಈ ಗೆಲುವಿನೊಂದಿಗೆ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿತು.

Next Story

RELATED STORIES