Top

TV5 EXCLUSIVE: ಮೈಸೂರಿನಲ್ಲಿ ನಡೆದಿದೆ ನಕಲಿ ಪಾಸ್‌ಪೋರ್ಟ್ ದಂಧೆ

TV5 EXCLUSIVE: ಮೈಸೂರಿನಲ್ಲಿ ನಡೆದಿದೆ ನಕಲಿ ಪಾಸ್‌ಪೋರ್ಟ್ ದಂಧೆ
X

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೇಶವೇ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಪೊಲೀಸರ ಮುಂಜಾಗೃತಾ ಕ್ರಮದಿಂದ ಈ ಕಳ್ಳಾಟ ಬಯಲಾಗಿದೆ.

ಮೈಸೂರಿನ ಕೆ.ಆರ್.ಮೊಹಲ್ಲಾದಲ್ಲಿರುವ ಶಂಕರಮಠ ರಸ್ತೆಯಲ್ಲಿರುವ ಶ್ರೀಕಾಂತ ಮಹಿಳಾ ಕಾಲೇಜಿನಲ್ಲಿ ವಿಸಾ ಅವಧಿ ವಿಸ್ತರಣಾ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ವಿದೇಶಿ ವಿದ್ಯಾರ್ಥಿಗಳ ಕೈಗೆ ನಕಲಿ ನೇಮಕಾತಿ ಆದೇಶಗಳು ಸುಲಭವಾಗಿ ಸಿಗುತ್ತಿದ್ದು, ನಕಲಿ ದಾಖಲೆ ಇಟ್ಟುಕೊಂಡು ವಿದೇಶಿ ವಿದ್ಯಾರ್ಥಿಗಳು ಮೈಸೂರಿನಲ್ಲಿ ಅಕ್ರಮವಾಗಿ ವಾಸವಿದ್ದಾರೆ.ಇನ್ನು ಈ ವಿದೇಶಿಗರಿಗೆ ಮೈಸೂರಿನ ಶ್ರೀಕಾಂತ ಮಹಿಳಾ ಕಾಲೇಜು ಡಿಪ್ಲೋಮಾ ಕೋರ್ಸಿನ ನಕಲಿ ಪ್ರವೇಶಾತಿ ನೀಡಿದೆ.

ಇನ್ನು ಕಾಲೇಜಿನ ಪ್ರಿನ್ಸಿಪಲ್ ಚಂದ್ರಬಾಬು ನಾಯ್ಡು ವೀಸಾ ಅವಧಿ ವಿಸ್ತರಣೆಗಾಗಿ ನಕಲಿ ದಂಧೆ ನಡೆಸುತ್ತಿದ್ದಾರೆ.ವಿದೇಶಿ ವಿದ್ಯಾರ್ಥಿಗಳಿಂದ ಹಣ ಪಡೆದು ಪ್ರವೇಶಾತಿ ದಾಖಲೆ ನೀಡುತ್ತಿದ್ದಾರೆ.ವಿದೇಶಿ ವಿದ್ಯಾರ್ಥಿಗಳು ಈ ನಕಲಿ ಪ್ರವೇಶಾತಿ ದಾಖಲೆಗಳನ್ನು ಪೊಲೀಸ್ ಇಲಾಖೆ ಮತ್ತು ಪಾಸ್‌ಪೋರ್ಟ್ ಕಚೇರಿಗೆ ನೀಡಿ ವೀಸಾ ಅವಧಿ ವಿಸ್ತರಣೆ ಮಾಡಿಸಿಕೊಳ್ಳುತ್ತಿದ್ದಾರೆ.

https://www.youtube.com/watch?v=G5IjzrftoFk

ಒರ್ವ ವಿದೇಶಿ ವಿದ್ಯಾರ್ಥಿ ಕಳೆದ ಏಳು ವರ್ಷಗಳಿಂದರೂ ಅಕ್ರಮವಾಗಿ ಮೈಸೂರಿನಲ್ಲಿ ನೆಲೆಸಿದ್ದಾನೆ. ಅಲ್ಲದೇ ಕೆಲವರು 5ವರ್ಷ, 3ವರ್ಷ, 1ವರ್ಷಗಳಿಂದ ವಾಸವಾಗಿದ್ದಾರೆ. ಸದ್ಯ ನಕಲಿ ದಾಖಲೆ ಸೃಷ್ಟಿ ಮತ್ತು ಅಕ್ರಮವಾಸದ ಆರೋಪದ ಮೇಲೆ ವಿದೇಶಿ ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಲಾಗಿದೆ.ಅಲ್ಲದೇ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ದೇಶದಿಂದ ವಾಪಸ್ ಕಳುಹಿಸಲಾಗುತ್ತಿದೆ.ಅಕ್ರಮವಾಗಿ ವಾಸವಿರುವ ವಿದ್ಯಾರ್ಥಿಗಳ ವೀಸಾ ಅವಧಿಯನ್ನು ಮುಂದುವರೆಸದಂತೆ ಪಾಸ್‌ಪೋರ್ಟ್ ಕಚೇರಿಗೆ ಮನವಿ ಮಾಡಲಾಗಿದೆ.

ವಿದೇಶಿ ವಿದ್ಯಾರ್ಥಿಗಳಿಗೆ ನಕಲಿ ಪ್ರವೇಶಾತಿ ಪತ್ರ ನೀಡಿದ್ದ ಶ್ರೀಕಾಂತ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಮೈಸೂರಿನ ಕೃಷ್ಣರಾಜ ಪೊಲೀಸ್‌ ಠಾಣೆಯಲ್ಲಿ ಪ್ರಿನ್ಸಿಪಲ್‌ ವಿರುದ್ದವೂ ಎಫ್‌ಐಆರ್‌ ದಾಖಲಿಸಲಾಗಿದೆ. ಇನ್ನು ಕೇಸ್ ದಾಖಲಾಗುತ್ತಿದ್ದಂತೆ ಕಚೇರಿಗೆ ಬೀಗ ಜಡಿದು ಪ್ರಿನ್ಸಿಪಲ್ ಚಂದ್ರಬಾಬು ನಾಯ್ಡು ಪರಾರಿಯಾಗಿದ್ದಾರೆ.

Next Story

RELATED STORIES