Top

ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಫೇಸ್‌ಬುಕ್‌ ವಾರ್

ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಫೇಸ್‌ಬುಕ್‌ ವಾರ್
X

ತುಮಕೂರು : 2019ರ ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಟಿ.ಬಿ.ಚಯಚಂದ್ರರನ್ನ ಅಭ್ಯರ್ಥಿ ಮಾಡಿದರೆ ಹೇಗಿರತ್ತೆ.? ಹೆಚ್ಚಿನ ಬೆಂಬಲ ಸೂಚಿಸಿ' ಹೀಗೆ ಅಭಿಮಾನಿಯೊಬ್ಬರು ಬರೆದುಕೊಂಡಿರುವ ಫೇಸ್‍ಬುಕ್ ಸ್ಟೇಟಸ್‌ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ಕೆಂಚಮಾರಯ್ಯ ತಮ್ಮ ಅಕೌಂಟ್‍ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಷಯ ಈ ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೈಯದ್ ರಫೀಕ್ ಎಂಬ ವ್ಯಕ್ತಿ ಹಾಕಿರುವ ಫೇಸ್‌ಬುಕ್‌ ಸ್ಟೇಟಸ್‌ ಅನ್ನು ಕೆಂಚಮಾರಯ್ಯ ಎಚ್‍.ಕೆ ಎಂಬ ಹೆಸರಿನಲ್ಲಿರುವ ಅಕೌಂಟ್‍ನಲ್ಲಿ ಶೇರ್ ಮಾಡಲಾಗಿದೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿ ಎಸ್.ಪಿ.ಮುದ್ದಹನುಮೇಗೌಡ ಅವರಿದ್ದು ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಸೋತಿರುವ ಜಯಚಂದ್ರ ಪರ ಕಾಂಗ್ರೆಸ್ ಜಿಲ್ಲಾಧ್ಯಕ್ಷರೇ ಬ್ಯಾಟ್ ಬೀಸಿರುವುದು ಕುತೂಹಲ ಮೂಡಿಸಿದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಪ್ರತಿನಿಧಿಸಿದ್ದ ಶಿರಾ ವಿಧಾನಸಭಾ ಕ್ಷೇತ್ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಜತೆಗೆ ಇತ್ತೀಚೆಗೆ ತಾನೆ ನಡೆದ ಚುನಾವಣೆಯಲ್ಲಿ ಜಯಚಂದ್ರ ಹಾಗೂ ಅವರ ಮಗ ಟಿ.ಜೆ.ಸಂತೋಷ್ ಇಬ್ಬರೂ ಸ್ಫರ್ಧಿಸಿ ಸೋತು ಮನೆಯಲ್ಲಿದ್ದಾರೆ.

ಈ ಸಂದರ್ಭದಲ್ಲಿ ಕೆಂಚಮಾರಯ್ಯ ಅವರ ಈ ಫೇಸ್‍ಬುಕ್ ಪೆೀಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಂಚಮಾರಯ್ಯ ಅವರು ಪೋಸ್ಟ್‌ ಮಾಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಯಕ್ಕುಟ್ಟಿ ಹೋಗಲಿದೆ', ಸಚಿವರಾಗಿ ಮಾಡಿದ್ದೆ ಸಾಕು, ಮುದ್ದಹನುಮೇಗೌಡ ಮಾತ್ರ ನಮ್ಮ ಅಭ್ಯರ್ಥಿ. ಹೀಗೆ ತಮ್ಮ ಪ್ರತಿಕ್ರಿಯೆಸಿದ್ದಾರೆ.

ಚುನಾವಣೆ ಇನ್ನೊಂದು ವರ್ಷವಿರುವ ಸಂದರ್ಭದಲ್ಲಿ ಜವಬ್ಧಾರಿ ಸ್ಥಾನದಲ್ಲಿರುವ ಕೆಂಚಮಾರಯ್ಯ ಅವರ ಪೋಸ್ಟ್‌ ಅವರಿಗೆ ತಿರುಗುಬಾಣವಾಗಲಿದೆ ಎನ್ನಲಾಗಿದೆ. ಡಿಸಿಎಂ, ಕೆಪಿಸಿಸಿ ಆಪ್ತರಾಗಿರುವ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಹೈಕಮಾಂಡ್‍ನಲ್ಲಿ ಪ್ರಭಾವಿಯಾಗಿದ್ದಾರೆ. ಟಿಕೆಟ್ ಪಡೆಯುವಲ್ಲಿಯೂ ಯಾವುದೇ ಅನುಮಾನವಿಲ್ಲ. ಅನಿರೀಕ್ಷಿತ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಂಗಾಮಿ ಜಿಲ್ಲಾಧ್ಯಕ್ಷರಾಗಿರುವ ಕೆಂಚಮಾರಯ್ಯ ಪ್ರಭಾವಿ ನಾಯಕ ಪ್ರತಿನಿಧಿಸುವ ಕ್ಷೇತ್ರದ ಟಿಕೆಟ್ ಬಗ್ಗೆ ಶೇರ್ ಮಾಡಿದ್ರಲ್ಲಿ ನನ್ನ ಪಾತ್ರವೇ ಇಲ್ಲ. ನನಗೆ ಸಾಮಾಜಿಕ ಜಾಲ ತಾಣಗಳ ಬಳಕೆ ಬರೋದೇ ಇಲ್ಲಾ ಅಂತಾ ಸಮರ್ಥಿಸಿಕೊಂಡಿದ್ದಾರೆ.

ಈ ತುಮಕೂರು ಜಿಲ್ಲಾ ಕಾಂಗ್ರೆಸ್‌ನ ಫೇಸ್‌ಬುಕ್‌ ವಾರ್, ದಿನೇ ದಿನೇ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ಈ ಮೂಲಕ ಕಾರ್ಯಕರ್ತರ ಕಾಮೆಂಟ್‌ ಮೂಲಕ ಕಿಚ್ಚನ್ನು ಹಚ್ಚುತ್ತಿದೆ. ಇದು ಎಲ್ಲಿಗೆ ಬಂದು ನಿಲ್ಲುತ್ತದೋ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ಟಿ.ಯೋಗಿಶ್, ಟಿವಿ5 ತುಮಕೂರು

Next Story

RELATED STORIES