Top

ಮಗು ಜೀವಂತ ಸಮಾಧಿ ಯತ್ನ : ಸಾವಿನೊಂದಿಗೆ ದುರಂತ ಅಂತ್ಯ

ಮಗು ಜೀವಂತ ಸಮಾಧಿ ಯತ್ನ : ಸಾವಿನೊಂದಿಗೆ ದುರಂತ ಅಂತ್ಯ
X

ಬೆಳಗಾವಿ : ಕುಂದಾನಗರಿಯಲ್ಲಿ ಹೆಣ್ಣು ಮಗುವನ್ನ ಜೀವಂತ ಸಮಾಧಿಗೆ ಯತ್ನಿಸಿದ ಪ್ರಕರಣ ದುರಂತದಲ್ಲಿ ಅಂತ್ಯವಾಗಿದೆ. ಎರಡು ತಿಂಗಳ ಹೆಣ್ಣು ಮಗುವನ್ನ ಉಳಿಸಿಕೊಳ್ಳಲು ಪರದಾಡುತ್ತಿದ್ದ ಪೋಷಕರಿಗೆ ಬೆಳಗಾವಿ ಪೊಲೀಸ್ ಆಯುಕ್ತ ರಾಜಪ್ಪ ಆರ್ಥಿಕ ನೇರವೂ ಒಗದಿಸಿದ್ರು ಪ್ರಯೋಜನವಾಗಿಲಿಲ್ಲ. ಈಗ ಆ ದಂಪತಿಗಳ ಪರಿಸ್ಥಿತಿ ಮರ್ಯಾದೆ ಹೋಯ್ತು. ಮಗುವು ಬದುಕಲಿಲ್ಲ ಎಂದು ಕಣ್ಣೀರಿಡುವಂತಾಗಿದೆ.

ಹೌದು... ಕಳೆದ ಭಾನುವಾರ ಬೆಳಗಾವಿಯ ಶಹಾಪುರದ ಸ್ಮಶಾನದಲ್ಲಿ ಹೆಣ್ಣು ಮಗುವನ್ನ ಪೋಷಕರು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದಾರೆಂಬ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಪೊಲೀಸ್ ಕಮೀಷನರ್ ಡಾ.ಡಿ.ಸಿ.ರಾಜಪ್ಪ ಸ್ವಯಂ ತನಿಖೆಗೆ ಇಳಿದಿದ್ದರೂ. ಸ್ಮಶಾನಕ್ಕೆ ಬಂದು ಹೋದ ಕುಟುಂಬದ ಪತ್ತೆಗೆ ಇಳಿದಾಗ ಅವರು ಸಿಕ್ಕಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ.

ಇಂತಹ ಕೃತ್ಯಕ್ಕೆ ಇಳಿದ ದಂಪತಿಗಳ ಹೆಸರು ಸಂದೀಪ ಮತ್ತು ಗೀತಾ, ಇವರು ಬೆಳಗಾವಿಯ ಭಾರತ ನಗರದ ನಿವಾಸಿಗಳು. ಇವರಿಗೆ ಎರಡು ತಿಂಗಳು ಹೆಣ್ಣು ಇತ್ತು.. ಆದ್ರೆ ಆ ಮಗುವಿಗೆ ಹೃದಯ ಮತ್ತು ಮೇದುಳಿನ ಕಾಯಿಲೆಯಿಂದ ಬಳಲುತ್ತಿತ್ತು. ಅನಾರೋಗ್ಯದಿಂದ ಇದ್ದ ಮಗವನ್ನ ಬೆಳಗಾವಿಯ ಕೆಎಲ್ಇ​ ಆಸ್ಪತ್ರೆಗೆ ಚಿಕಿತ್ಸೆಗೆ ಅಂತಾ ದಾಖಲಿಸಿದ್ರು. ಕಿತ್ತು ಬಡತನವಿದ್ದರೂ ಹೆಣ್ಣು ಮಗುವನ್ನ ಉಳಿಸಿಕೊಳ್ಳಬೇಕೆಂದು ಹಂಬಲವಿತ್ತು. ಆದ್ರೆ ಆಸ್ಪತ್ರೆ ವೈದ್ಯರು ಮಗು ಬದುಕುಳಿಯುವುದಿಲ್ಲ ಎಂದು ಹೇಳಿದಾಗ ಮಗು ಸತ್ತಿದೆ ಎಂದು ಮಣ್ಣು ಮಾಡಲು ಕುಟುಂಬಸ್ಥರೊಂದಿಗೆ ಸ್ಮಶಾನಕ್ಕೆ ಬಂದಿದ್ದರು.

ಇನ್ನು ಜಿಲ್ಲಾಸ್ಪತ್ರೆಯಲ್ಲಿ ಕಳೆದ ಸೋಮವಾರದಿಂದ ಸಂದೀಪ ಮತ್ತು ಗೀತಾ ಆ ಹೆಣ್ಣು ಮಗುವಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಮಗುವಿನ ಚಿಕಿತ್ಸೆಗೆ ಹಣವೂ ಇರಲಿಲ್ಲ. ಹೀಗಿರುವಾಗ ಇವತ್ತು ಆ ದಂಪತಿಗಳನ್ನ ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಗೆ ಕರೆಸಿ, ಪೊಲೀಸ್ ಕಮೀಷನರ್ ರಾಜಪ್ಪ ಅವರು ಸ್ವಂತ 5 ಸಾವಿರ ರುಪಾಯಿ ಹಾಗೂ ಉಳಿದ ಅಧಿಕಾರಿಗಳಿಂದ ತಲಾ ಒಂದು ಸಾವಿರ ರುಪಾಯಿಯಂತೆ ಸಂಗ್ರಹಿ 11 ಸಾವಿರ ರುಪಾಯಿ ಆರ್ಥಿಕ ಸಹಾಯ ಮಾಡಿದ್ರು. ಮುಂದೆಯೂ ಅಗತ್ಯ ನೇರವು ಒದಗಿಸಲು ಪ್ರಯತ್ನಿಸುವುದಾಗಿ ಹೇಳಿ ಧೈರ್ಯ ತುಂಬಿದ್ರು..

ಈವರೆಗೂ ಯಾರೊಬ್ಬರು ಸಹಾಯಕ್ಕೆ ಬಂದಿರಲಿಲ್ಲ. ಈ ರಾಜಪ್ಪ ಸರ್ ಬಂದಿದ್ದಾರೆಂದು ಅವರಿಗೆ ದಂಪತಿಗಳು ಧನ್ಯವಾದ ಅರ್ಪಿಸಿ ಭರವಸೆಯೊಂದಿಗೆ ಆಸ್ಪತ್ರೆಯತ್ತ ಮುಖ ಮಾಡಿದ್ರು. ಆದ್ರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ತಿಂಗಳ ಹೆಣ್ಣು ಮಗು ಪೋಷಕರು ಆಸ್ಪತ್ರೆಗೆ ಬರುವುದರೊಳಗಾಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ.

ಒಟ್ಟ್ನಲ್ಲಿ ಎಂತಾಹದ್ದೆ ಬಡತನವಿದ್ದರೂ ನನ್ನ ಎರಡು ತಿಂಗಳ ಮಗುವನ್ನ ಉಳಿಸಿಕೊಳ್ಳುವುದಕ್ಕಾಗಿ ಕೆಎಲ್​ಇ ಅಂತಹಾ ಆಸ್ಪತ್ರೆಯಲ್ಲಿ ದಾಖಲಿಸಿದ್ದೆ. ನಾವೂ ನನ್ನ ಮಗಳನ್ನ ಜೀವಂತ ಸಮಾಧಿಗೆ ಯತ್ನಿಸಿದ್ದೇವೆಂದು ಅಪ್ರಚಾರ ಮಾಡಿ ಮರ್ಯಾದೆ ತೆಗೆದ್ರು. ಈಗ ಮರ್ಯಾದೆನೂ ಹೋಯ್ತು ಮಗವು ಬದುಕುಳಿಯಲಿಲ್ಲ ಎಂದು ದಂಪತಿಗಳು ಕಣ್ಣೀರಿಡುವಂತಾಗಿದೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ.

Next Story

RELATED STORIES