Top

ಇಂದು ಟೀಂ ಇಂಡಿಯಾ - ಐರ್ಲೆಂಡ್ ನಡುವೆ ಟಿ20 ಕದನ

ಇಂದು ಟೀಂ ಇಂಡಿಯಾ - ಐರ್ಲೆಂಡ್ ನಡುವೆ ಟಿ20 ಕದನ
X

ಮೋಜು ಮಸ್ತಿಯೊಂದಿಗೆ ಆಂಗ್ಲರ ನಾಡಿಗೆ ಕಾಲಿಟ್ಟಿರುವ ಟೀಂ ಇಂಡಿಯಾ ಆಟಗಾರರು ಇದೀಗ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಮೊದಲ ಪ್ರಾಕ್ಟೀಸ್​ ಸೆಷನ್​ನಲ್ಲಿ ಟೀಂ ಇಂಡಿಯಾ ಆಟಗಾರರು ನೆಟ್ಸ್ ನಲ್ಲಿ ಬೆವರಿಳಿಸಿದ್ರು. ಪೇಸರ್​ಗಳಾದ ಉಮೇಶ್​ ಯಾದವ್ ಮತ್ತು ಭುವನೇಶ್ವರ್ ಮೂರು ತಂಡಗಳಾಗಿ ಅಭ್ಯಾಸ ಮಾಡಿದ್ರೆ. ಹಾರ್ದಿಕ್ ಪಾಂಡ್ಯ ಮತ್ತು ಇತರೆ ಆಟಗಾರರು ಫೀಲ್ಡಿಂಗ್ ಅಭ್ಯಾಸ ಮಾಡಿದ್ರು.

ಆಂಗ್ಲರ ನಾಡಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ಟೀಂ ಇಂಡಿಯಾಕ್ಕೆ ಕ್ರಿಕೆಟ್​ ದಂತ ಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್ ಸಾಥ್​ ನೀಡಿದ್ದಾರೆ. Left Arm Pacerಗಳ ಭಯ ಎದುರಿಸುತ್ತಿರುವ ಟೀಂ ಇಂಡಿಯಾ ಬ್ಯಾಟ್ಸ್ ಮನ್​ಗಳಿಗೆ ಅರ್ಜುನ್​ ನೆಟ್ಸ್​ ನಲ್ಲಿ ಬೌಲಿಂಗ್ ಮಾಡಿ ಧೈರ್ಯ ತುಂಬುತ್ತಿದ್ದಾರೆ.

ಆತಿಥೇಯ ಐರ್ಲೆಂಡ್ ವಿರುದ್ಧ ಡಬ್ಲಿನ್​ ನಲ್ಲಿ ಮೊದಲ ಟಿ20 ಪಂದ್ಯ ಆಡುತ್ತಿರುವ ಟೀಂ ಇಂಡಿಯಾಕ್ಕೆ ಇದು ಸ್ಮರಣಿಯ ಪಂದ್ಯ. ಯಾಕಂದ್ರೆ ಆತಿಥೇಯರ ವಿರುದ್ದದ ಮೊದಲ ಟಿ20 ಪಂದ್ಯ 100ನೇ ಪಂದ್ಯವಾಗಿದೆ. ಹೀಗಾಗಿ ವಿರಾಟ್ ಪಡೆಗೆ ಇದು ಸ್ಮರಣೀಯ ಪಂದ್ಯವಾಗಿದ್ದು ಈ ಪಂದ್ಯವನ್ನ ಗೆದ್ದು ಸಂಭ್ರಮಿಸಬೇಕಿದೆ.

ಇಂಗ್ಲೆಂಡ್​ನಲ್ಲಿ ನಡೆದಿದ್ದ 2009ರ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಐರ್ಲೆಂಡ್ ತಂಡದವನ್ನ ಎದುರಿಸಿತ್ತು. ನಾಟಿಗ್ಯಾಮ್ ನಲ್ಲಿ ನಡೆದಿದ್ದ ಚುಟಕು ಕದನದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಐರ್ಲೆಂಡ್ ನಿಗದಿತ 18 ಓವರ್​ಗಳಲ್ಲಿ 8 ವಿಕೆಟ್​ ನಷ್ಟ್ಕಕೆ 118 ರನ್​ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಓಪನರ್ ರೋಹಿತ್​ ಶರ್ಮಾ ಅರ್ಧ ಶತಕದ ನೆರವಿನಿಂದ 2 ವಿಕೆಟ್​ ನಷ್ಟಕ್ಕೆ 113 ರನ್ ಗಳಿಸಿ ಇನ್ನು 15 ಎಸೆತ ಬಾಕಿ ಇರುವಂತೆ ಗೆದ್ದುಕೊಂಡಿತ್ತು. ​

ವಿಶ್ವ ಕ್ರಿಕೆಟ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ದಿಗ್ಗಜರ ದಾಖಲೆಗಳನ್ನೆಲ್ಲ ಪೀಸ್​ ಪೀಸ್ ಮಾಡಿ ಬಿರುಗಾಳಿಯಂತೆ ಮುನ್ನಗುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಚುಟಕು ಕ್ರಿಕೆಟ್​ನಲ್ಲಿ ಇನ್ನು 17 ರನ್ ಬಾರಿಸಿದ್ರೆ ವಿಶ್ವ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಇದುವರೆಗೂ 57 ಪಂದ್ಯಗಳಿಂದ 1983 ರನ್ ಬಾರಿಸಿದ್ದಾರೆ. ಐರ್ಲೆಂಡ್ ವಿರುದ್ಧ 2 ಸಾವಿರ ರನ್ ಪೂರೈಸಲು ಒಳ್ಳೆಯ ಅವಕಾಶ ಸಿಕ್ಕಿದೆ. ಒಂದು ವೇಳೆ ಕೊಹ್ಲಿ 17 ರನ್ ಪೂರೈಸಿದ್ರೆ 2 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರವಲ್ಲ ತಂಡದ ಮಿಸ್ಟರ್ ಕೂಲ್ ಧೋನಿಗೂ ಕೂಡ ಕ್ರಿಕೆಟ್​ ಶಿಶುಗಳ ಎದುರು ದಾಖಲೆ ಬರೆಯಲು ಅವಕಾಶ ಸಿಕ್ಕಿದೆ. ಮಾಹಿ 56 ರನ್ ಗಳಿಸಿದ್ರೆ ಚುಟಕು ಕ್ರಿಕೆಟ್​ನಲ್ಲಿ 1500 ರನ್​ಗಳನ್ನ ಪೂರೈಸಲಿದ್ದಾರೆ. ಸದ್ಯ ಧೋನಿ ಟಿ20ಯಲ್ಲಿ 89 ಪಂದ್ಯಗಳಿಂದ 1444 ರನ್ ಗಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಧೋನಿಗೆ ಇನ್ನೊಂದು ದಾಖಲೆಯನ್ನ ಬರೆಯುವ ಅವಕಾಶ ಸಿಕ್ಕಿದೆ. ಇಂದು ಆತಿಥೇಯರ ವಿರುದ್ಧ ನಾಲ್ಕು ಸಿಕ್ಸ್ ಬಾರಿಸಿದ್ರೆ ಟಿ20 ಕ್ರಿಕೆಟ್​ನಲ್ಲಿ 50 ಸಿಕ್ಸ್ ಬಾರಿಸಿ ಸಾಧನೆ ಮಾಡಲಿದ್ದಾರೆ.

ಅಗ್ರೆಸ್ಸಿವ್ ಕ್ಯಾಪ್ಟನ್ ಕೊಹ್ಲಿ, ಧೋನಿ ಮಾತ್ರವಲ್ಲ ತಂಡದ ಹಿಟ್​ಮ್ಯಾನ್ ರೋಹಿತ್ ಶರ್ಮಾಗೂ ಸ್ಮರಣಿಯ ಪಂದ್ಯದಲ್ಲಿ ದಾಖಲೆ ಬರೆಯಲು ಅವಕಾಶವಿದೆ. ಚುಟಕು ಕ್ರಿಕೆಟ್​ನಲ್ಲಿ ರೋಹಿತ್ ಇನ್ನು 75 ರನ್ ಬಾರಿಸಿದ್ರೆ ಕ್ರಿಕೆಟ್ ನ​ ಮೂರು ಫಾರ್ಮೆಟ್​ಗಳಲ್ಲೂ 10 ಸಾವಿರ ರನ್ ಪೂರೈಸುವ ಸಾಧನೆ ಮಾಡಲಿದ್ದಾರೆ.

ಒಟ್ಟಾರೆ 100ನೇ ಟಿ20 ಪಂದ್ಯ ಆಡುತ್ತಿರುವ ಟೀಂ ಇಂಡಿಯಾಕ್ಕೆ ಮೊದಲ ಪಂದ್ಯ ಗೆದ್ದು ಸ್ಮರಣಿಯವಾಗಿಸಿಕೊಳ್ಳುವ ತವಕದಲ್ಲಿದ್ರೆ. ಇತ್ತ ಆತಿಥೇಯ ಐರ್ಲೆಂಡ್ ತವರಿನಲ್ಲಿ ಭಾರತಕ್ಕೆ ಶಾಕ್​ ನೀಡಲು ಪ್ಲಾನ್ ಮಾಡಿದೆ.

ಚೇತನ್ ಕಡೂರು, ಸ್ಪೋರ್ಟ್ಸ್ ಬ್ಯುರೊ ಟಿವಿ5

Next Story

RELATED STORIES