Top

ಗ್ರಾಪಂ ನೌಕರರಿಂದ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ

ಗ್ರಾಪಂ ನೌಕರರಿಂದ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ
X

ಚಿಕ್ಕಬಳ್ಳಾಪುರ : ಗ್ರಾಪಂ ನೌಕಕರ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಘಟನೆ ಇಂದು ಚಿಕ್ಕಬಳ್ಳಾಫುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ವೇತನ ತಾರತಮ್ಯ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇನ್ನು ಜಿಲ್ಲಾಡಳಿತ ಮುಂದೆ ಪ್ರತಿಭಟನೆ ನಡೆಸಿದ ಗ್ರಾಪಂ ನೌಕಕರು ಸರ್ಕಾರದ ವಿರುದ್ಧ ದಿಕ್ಕಾರವನ್ನು ಕೂಗಿದ್ರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ಸರ್ಕಾರ ನಮ್ಮ ಗ್ರಾಪಂ ನೌಕಕರ ವೇತನ ಬಗ್ಗೆ ತೀವ್ರವಾಗಿ ಕಡೆಗಣನೆ ಮಾಡುತ್ತಿದೆ ಅದನ್ನು ಸರಿಪಡಿಸಿಬೇಕು ಅಲ್ಲದೆ ನಾಳೆ ಸಂಘಟನೆಯ ಮುಖಂಡರೊಂದಿಗೆ ಮಾತುಕತೆ ನಡೆಸಿ ತಿರ್ಮಾನಿಸಿಲಾಗುತ್ತೆ, ಎಂದ್ರು. ಒಂದು ವೇಳೆ ಮಾತುಕತೆ ವಿಫಲವಾದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೊರಾಟ ಮಾಡುವುದಾಗಿ ತಿಳಿಸಿದ್ರು.

Next Story

RELATED STORIES