Top

ಕೆಪಿಸಿಸಿ ಅಧ್ಯಕ್ಷರ ನೈತಿಕ ಬೆಂಬಲಕ್ಕೆ ನಿಂತ "ಪರಂ ಯುವ ಸೇನೆ"

ಕೆಪಿಸಿಸಿ ಅಧ್ಯಕ್ಷರ ನೈತಿಕ ಬೆಂಬಲಕ್ಕೆ ನಿಂತ ಪರಂ ಯುವ ಸೇನೆ
X

ತುಮಕೂರು : ಸುಖಾ ಸುಮ್ಮನೆ ಡಿಸಿಎಂ ಪರಮೇಶ್ವರ್ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಜರಿಯಾಗುತ್ತಿದೆ ಅಂತವರ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ ಅಂತಾ "ಡಾ.ಜಿ.ಪರಮೇಶ್ವರ್ ಯುವ ಸೇನೆ" ಕೆಪಿಸಿಸಿ ಅಧ್ಯಕ್ಷರ ಪರ ನೈತಿಕ ಬೆಂಬಲಕ್ಕೆ ನಿಂತಿದೆ.

ಸಂಘಟನೆಯ ಪದಾಧಿಕಾರಿಗಳು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತ್ನಾಡಿ ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಅನ್ನೋದು ನಮ್ಮ ಬಯಕೆ. ಆ ನಿಟ್ಟಿನಲ್ಲೇ ಯುವ ಸೈನ್ಯ ಕೆಲಸ ಮಾಡಲಿದೆ ಅಂತಾ ಸಂಘಟೆನೆಯ ರಾಜ್ಯಾಧ್ಯಕ್ಷ ನಗುತಾ ರಂಗನಾಥ್ ಹಾಗೂ ರಾಜ್ಯ ಕಾರ್ಯದರ್ಶಿ ಎಚ್.ಡಿ.ದರ್ಶನ್ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಕೂಡ ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗೋದನ್ನ ತಪ್ಪಿಸಲಾಗಿತ್ತು. ಈಗ ಉಪಮುಖ್ಯಮಂತ್ರಿಯಾಗಿದ್ದಾರೆ. ಅವರು ಮುಖ್ಯಮಂತ್ರಿಯಾಗಬೇಕು. ಇತ್ತೀಚಿನ ರಾಜಕೀಯ ವಿದ್ಯ ಮಾನಗಳಲ್ಲಿ ಪರಮೇಶ್ವರ್ ಅವರಿಗೆ ಕೆಟ್ಟ ಹೆಸರು ಬರುವಂತೆ ಕುತಂತ್ರ ನಡೆಸಲಾಗುತ್ತಿದೆ ಅಂತಾ ಕೂಡ ಆರೋಪಿಸುವ ಮೂಲಕ ಸಿದ್ಧರಾಮಯ್ಯಗೂ ಟಾಂಗ್ ನೀಡಿದ್ದಾರೆ.

ವರದಿ : ಟಿ.ಯೋಗಿಶ್, ಟಿವಿ5 ತುಮಕೂರು

Next Story

RELATED STORIES