Top

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೀದಿಗೆ ಬಿದ್ದ ರೈತರು.!!

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೀದಿಗೆ ಬಿದ್ದ ರೈತರು.!!
X

ವಿಶೇಷ ವರದಿ : ಮಂಜುನಾಥ ತಳವಾರ, ಟಿವಿ5 ಬಾಗಲಕೋಟೆ

ಬಾಗಲಕೋಟೆ : ಸರ್ಕಾರ ಭೂ ರಹಿತ ಬಡ ರೈತರಿಗೆ ಉಳಿಮಿಗೆ ಅಂತ ಕಳೆದ 35 ವರ್ಷದ ಹಿಂದೆ ಭೂಮಿಯನ್ನೇನೋ ನೀಡಿತ್ತು. ಸರ್ಕಾರ ಜಮೀನು ನೀಡಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿತ್ತು. ಆದ್ರೆ, ಅಧಿಕಾರಿಗಳು ಮಾತ್ರ ತಮ್ಮ ಜವಾಬ್ದಾರಿಯನ್ನು ಮರೆತಂತಿದೆ. ಹೀಗಾಗಿ ಕಳೆದ ಮುವತ್ತು ವರ್ಷಗಳಿಂದ ರೈತರು ಜಮೀನುಗಳು ಸಿಕ್ರುಅಧಿಕಾರಿಗಳು ಅವುಗಳ ದಾಖಲೆಗಳ ಸಿದ್ಧಪಡಿಸಿಕೊಳ್ಳದಕ್ಕೆ ಇಂದಿಗೂ ಕಣ್ಣಿರಲ್ಲಿ ಕೈತೊಳೆಯುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ಓದಿ..

  • ಅಧಿಕಾರಿಗಳ ಬೇಜವಾಬ್ದಾರಿಗೆ ಬೀದಿಗೆ ಬರುವಂತಾಯ್ತು ಅನ್ನದಾತರ ಕುಟುಂಬಗಳು
  • 30 ವರ್ಷ ಅಲೆದಾಡಿದ್ರೂ ಪೋಡಿ ಮಾಡಿಕೊಡದೇ ಉದ್ಧಟನತ ಮೆರೆದ ಅಧಿಕಾರಿಗಳು
  • ಪಹಣಿ ಇದ್ರೂ ಸ್ವಂತ ಹೊಲದಲ್ಲೇ ಉಳುಮೆ ಮಾಡಲು ಆಗದೆ ಪರದಾಡುತ್ತಿರುವ ರೈತರು
  • ಪ್ರತಿವರ್ಷ ತೆರಿಗೆ ತುಂಬಿದ್ರೂ ಹೊಲದ ಸ್ಥಿತಿ ಕಂಡು ಕಣ್ಣೀರಿಡುತ್ತಿರೋ ರೈತ್ರು
  • ರೈತರ ಸ್ವಂತ ಜಮೀನಿನಲ್ಲೇ ಪಾರ್ಕ ನಿರ್ಮಿಸಲು ಮುಂದಾಯಿತೇ ಸರ್ಕಾರ.?

ಹೌದು. ಇಂತಹವೊಂದು ಪರಿಸ್ಥಿತಿ ಇದೀಗ ಬಾಗಲಕೋಟೆ ಜಿಲ್ಲೆಯ ಮುಚಖಂಡಿ ಗ್ರಾಮದ ರೈತರಿಗೆ ಬಂದೊದಗಿದೆ. ಸರ್ಕಾರ 1982ರಲ್ಲಿ ಭೂರಹಿತರಿಗೆ ಮುಂಚಖಂಡಿ ಗ್ರಾಮದ ಸರ್ವೆ ನಂಬರ್ 207ರಲ್ಲಿ 19 ರೈತರ ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ನೀಡಿತ್ತು. ಇದಕ್ಕೆ ಪಹಣಿ ಪತ್ರವನ್ನೂ ನೀಡಿತ್ತು. ಸಾಲದ್ದಕ್ಕೆ ರೈತ್ರು ಪ್ರತಿವರ್ಷ ತೆರಿಗೆಯನ್ನೂ ಕಟಿದ್ರು. ಆದ್ರೆ, ಜಮೀನು ಸಿಕ್ರು ಅದನ್ನು ಬಳಕೆ ಮಾಡಿಕೊಳ್ಳಲು ಈ ರೈತರಿಗೆ ಸಾಧ್ಯವಾಗುತ್ತಿಲ್ಲ.

ಅದಕ್ಕೆ ಕಾರಣ ಅಂದ್ರೆ. ಜಮೀನು ಮಂಜುರಾದ ಬಳಿಕ 35 ವರ್ಷಗಳಿಂದ ದಾಖಲೆಗಳಲ್ಲಿ ತಮ್ಮ ತಮ್ಮ ಜಮೀನುಗಳನ್ನು ಗುರುತಿಸಿ ಪೋಡಿ, ಆಕಾರ್ ಬಂದಿ, ಚೆಕ್ ಬಂದಿ ಮಾಡಿ, ದಾಖಲೆಗಳನ್ನು ನೀಡುವಂತೆ ರೈತರು ಮನವಿ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಇಲ್ಲಿಯ ಅಧಿಕಾರಿಗಳ ಕಿವಿಗೆ ಈ ರೈತರ ಕೂಗು ಮಾತ್ರ ಕೇಳಿಸುತ್ತಿಲ್ಲ. ಅಲ್ಲದೇ ಸಣ್ಣ ನೀರಾವರಿ ಇಲಾಖೆ ಮುಚಖಂಡಿ ಕೆರೆ ಅಭೀವೃದ್ದಿ ಹೆಸರಲ್ಲಿ, ಇದೇ ಜಮೀನುಗಳಲ್ಲಿ ಉದ್ಯಾನವನದ ರಸ್ತೆ, ಪಾರ್ಕ್​ ಸೇರಿದಂತೆ ವಿವಿಧ ಕಾಮಗಾರಿ ನಡೆಸಲು ಮುಂದಾಗಿತ್ತು. ರೈತರು ಈ ಕಾಮಗಾರಿಗಳಿಗೆ ತಡೆಯಾಜ್ಞೆ ತಂದಿದ್ದರಿಂದ ಸದ್ಯ ಕಾಮಗಾರಿಯನ್ನು ಸ್ಥಗಿತಗೊಳೀಸಲಾಗಿದೆ.

ಇನ್ನೊಂದಡೆ ಅಧಿಕಾರಿಗಳಿಗೆ ಸರ್ವೇ ಮಾಡಿ ಪೋಡಿ ಮಾಡಿಕೊಡುವಂತೆ ಕೇಳಿದ್ರೂ ಪ್ರಯೋಜನವಾಗ್ತಿಲ್ಲ, 2003ರಲ್ಲಿ ಉಪವಿಭಾಗಾಧಿಕಾರಿಗಳು ರೈತರ ಜಮೀನನ್ನ ಪೋಡಿ ಸಹಿತ ಆಕಾರ ಚಕಬಂದಿ ಮಾಡುವಂತೆ ತಹಶೀಲ್ದಾರರಿಗೆ ಆದೇಶಿಸಿದ್ದು, ಇತ್ತ ತಹಶೀಲ್ದಾರರು ಭೂಮಾಪನ ಅದಿಕಾರಿಗಳಿಗೆ ಸೂಚಿಸಿದ್ರು ಕ್ಯಾರೆ ಅಂತಿಲ್ಲ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷದಿಂದ ರೈತ ಕುಟುಂಬಗಳು ನಿತ್ಯವೂ ಕಣ್ಣೀರಿಡುವಂತಾಗಿದ್ದು, ಮುಖ್ಯಮಂತ್ರಿಗಳವರೆಗೆ ಪತ್ರದ ಮುಖಾಂತರ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಒಟ್ಟಿನಲ್ಲಿ ಹಿಂದಿನ ಸರ್ಕಾರಗಳು ರೈತರಿಗೆ ಅಂತ ಹೊಸ ಹೊಸ ಯೋಜನೆಗಳ ಮೂಲಕ ಅನೂಕೂಲ ಮಾಡಿಕೊಟ್ಟಿದ್ದರೂ ಕೂಡ, ಅಂದಿನಿಂದ ಇಲ್ಲಿಯವರೆಗೆ ಬಂದ ಬೆರೆ ಅಧಿಕಾರಿಗಳು ರೈತರ ಕೆಲಸ ಮಾಡಿಕೊಡಲು ಮನಸ್ಸು ಮಾಡುತ್ತಿಲ್ಲ. ಬದಲಿಗೆ ಮನವಿ ಮಾಡಲು ಕಚೇರಿಗೆ ಬಂದ ರೈತರಿಗೆ ಇಲ್ಲಸಲ್ಲದ ತೊಡಕುಗಳನ್ನ ಹೇಳಿ ಸಾಗ್ ಹಾಕುತ್ತ ಬಂದಿದ್ದಾರೆ. ಅಧಿಕಾರಿಗಳ ಈ ಧೋರಣೆ ಬಡ ಕುಟುಂಬಗಳ ಅತಂತ್ರ ಜೀವನಕ್ಕೆ ಕಾರಣವಾಗ್ತಿರೋದು ಮಾತ್ರ ದುರಂತ ಸಂಗತಿ. ಇನ್ನಾದ್ರೂ ಅಧಿಕಾರಿಗಳು ತಮ್ಮ ಜವಾವ್ಬಾರಿಯನ್ನು ಅರಿತು ರೈತರ ನೆಮ್ಮದಿ ಬಾಳಿಗೆ ಕಾರಣವಾಗ್ತಾರಾ ಅಂತ ಕಾದು ನೋಡಬೇಕಿದೆ.

Next Story

RELATED STORIES